Spiritual: ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನ ವಿಶ್ವಪ್ರಸಿದ್ಧ ದೇವಸ್ಥಾನವೆಂದರೂ ತಪ್ಪಾಗಲಾರದು. ಏಕೆಂದರೆ ಇಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಆನೆ ಅಂಬಾರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೇ ಭಾರತದಲ್ಲಿರುವ 18 ಶಕ್ತಿಪೀಠಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಕೂಡ ಒಂದು.
ಸತಿದೇವಿಯ ಕೂದಲು ಇಲ್ಲಿ ಬಿಟ್ಟ ಕಾರಣಕ್ಕೆ ಇದೊಂದು ಶಕ್ತಿಪೀಠವಾಗಿ ಮಾರ್ಪಾಡಾಗಿದೆ. ದೇವಿ ಪಾರ್ವತಿ ಚಾಮುಂಡೇಶ್ವರಿಯ ರೂಪದಲ್ಲಿ ನೆಲೆನಿಂತು ಮಹಿಷಾಸುರನನ್ನು ಮರ್ದನ ಮಾಡಿ, ಇಲ್ಲಿ ನೆಲೆ ನಿಂತಿದ್ದಾಳೆ. ಮತ್ತು ಇಡೀ ನಾಡನ್ನು ಕಾಪಾಡುತ್ತಿದ್ದಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಈಕೆಯನ್ನು ನಾಡ ದೇವತೆ, ಅಧಿದೇವತೆ ಎಂದು ಕರೆಯುತ್ತಾರೆ.
ಇಂದಿನ ಕಾಲದಲ್ಲಿ ಜನ ಬಸ್, ಕಾರು, ಬೈಕ್ ಸಹಾಯದಿಂದ ಬೆಟ್ಟ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ದೇವಿಯ ದರ್ಶನ ಮಾಡಲು 10 ಸಾವಿರ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಇನ್ನು ಚಾಮುಂಡಿ ಬೆಟ್ಟದ ಇನ್ನೊಂದು ವಿಶೇಷತೆ ಅಂದ್ರೆ, ಭಾರತದಲ್ಲೇ ಅತೀ ದೊಡ್ಡ ಆಕಾರದ ನಂದಿ ವಿಗ್ರಹ ಇಲ್ಲಿದೆ. ಇಲ್ಲಿರುವ ಕಪ್ಪು ಗ್ರ್ಯಾನೇಟ್‌ನ ನಂದಿ ವಿಗ್ರಹದ ಕೆತ್ತನೆ ಅದೆಷ್ಟು ಸೊಗಸಾಗಿದೆ ಎಂದರೆ, ನೋಡುಗರ ಕಣ್ಮನ ಸೆಳೆಯುತ್ತದೆ.
ಚಾಮುಂಡಿದೇವಿ ಮಹಿಷಾಸುರನ ಸಂಹಾರ ಮಾಡಿ, ಇಲ್ಲಿ ನೆಲೆನಿಂತಿದ್ದು, ಇಲ್ಲಿ ದೊಡ್ಡದಾದ ಮಹಿಷಾಸುರನ ಪ್ರತಿಮೆ ಇದೆ. ಆಷಾಢ ಮಾಸದಲ್ಲಿ ಶುಕ್ರವಾರದ ದಿನ ದೇವಿಯ ದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ದಿನ ದೇವಸ್ಥಾನದಲ್ಲಿ ಹೂವು, ಹಣ್ಣು, ತರಕಾರಿ ಬಳಸಿ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ನವರಾತ್ರಿಯಲ್ಲಿ ದೇವಿಗೆ 9 ದಿನಗಳ ಕಾಲ ವಿಶೇಷ ಪೂಜೆ ಮಾಡಲಾಗುತ್ತದೆ. ದಶಮಿಯ ದಿನ ಅರಮನೆಯಿಂದ ಜಂಬೂ ಸವಾರಿಯ ಮೂಲಕ, ಒಡೆಯರ್ ವಂಶಸ್ಥರು ದೇವಿಯ ದರ್ಶನ ಮಾಡುತ್ತಾರೆ. ಇದೇ ವಿಶ್ವಪ್ರಸಿದ್ಧ ಮೈಸೂರು ದಸರಾ.
Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?