Health Tips: ಕೆಲವರು ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವೆಂದು ತಿಳಿದ ತಕ್ಷಣ, ಬರೀ ಅದನ್ನೇ ತಿನ್ನೋಕ್ಕೆ ಶುರು ಮಾಡುತ್ತಾರೆ. ಆದರೆ ಹೀಗೆ ಆರೋಗ್ಯಕ್ಕೆ ಉತ್ತಮ ಅಂತಾ ತಿಂದಿದ್ದನ್ನೇ ತಿನ್ನೋದು ತಪ್ಪು ಅಂತಾರೆ ವೈದ್ಯರು. ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೇ ಆಹಾರವನ್ನು ಅತೀಯಾಗಿ ತಿಂದರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ..
ಮೊನ್ನೆ ಟೊಮೆಟೋ ಬೆಲೆ ಹೆಚ್ಚಾಗಿತ್ತು. ಆದರೆ ಟೊಮೆಟೋ ತಿಂದ್ರೆ ಆರೋಗ್ಯಕ್ಕೆ ಉತ್ತಮ ಅಂತಾ, ಹಲವರು ರೇಟ್ ಎಷ್ಟಿದ್ರು, ಟೊಮೆಟೋ ಖರೀದಿಸಿ ತಿನ್ನುತ್ತಿದ್ದರು. ಆದರೆ ಇದರ ಅವಶ್ಯಕತೆ ಇಲ್ಲಾ ಅಂತಾರೆ ವೈದ್ಯರು. ತರಕಾರಿಯಲ್ಲಿ ಹಲವು ರೀತಿಯ ತರಕಾರಿಗಳಿದೆ. ಅವೆಲ್ಲವನ್ನೂ ನಾವು ಟ್ರೈ ಮಾಡಬೇಕು. ಅದನ್ನು ಬಿಟ್ಟು ಒಂದೇ ತರಕಾರಿ ಅಥವಾ ಹಣ್ಣು ಅಥವಾ ಯಾವುದೇ ಆಹಾರ ಪದಾರ್ಥಗಳಿಗೆ ಅಂಟಿಕೊಂಡರೆ, ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ.
ಇನ್ನು ಬೆಳಗ್ಗಿನ ತಿಂಡಿ ಮಾಡುವಾಗ ಹೆಚ್ಚು ಎಣ್ಣೆ, ತುಪ್ಪ ಬಳಸದೇ, 3 ಟೇಬಲ್ ಸ್ಪೂನ್ ಎಣ್ಣೆ ಅಥವಾ ತುಪ್ಪ ಬಳಸಿ, ಯಾವ ತಿಂಡಿ ಮಾಡಿದರೂ, ಅದು ಆರೋಗ್ಯಕರವಾಗಿರುತ್ತದೆ. ಆದರೆ ರುಚಿ ಹೆಚ್ಚಾಗಲಿ ಎಂಬ ಕಾರಣಕ್ಕೆ ನೀವು, ಇದಕ್ಕಿಂತ ಹೆಚ್ಚು ಎಣ್ಣೆ ಬಳಸಿದ್ದಲ್ಲಿ, ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಅಲ್ಲದೇ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ಹಪ್ಪಳ , ಸಂಡಿಗೆ, ಸಿಹಿ ತಿನಿಸುಗಳನ್ನು ಇಟ್ಟಿರುತ್ತಾರೆ. ಪ್ರತಿದಿನ ಇಂಥ ಆಹಾರ ತಿಂದರೆ ನಿಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಪ್ರತಿದಿನ ಇಂಥ ತಿಂಡಿಗಳನ್ನು ಸೇವಿಸಬಾರದು. ಯಾವಾಗಲಾದರೂ ಒಮ್ಮೆ ಸೇವಿಸಬಹುದು ಅಂತಾರೆ ವೈದ್ಯರು.
ಇನ್ನು ಮಾಂಸಾಹಾರ ಸೇವಿಸುವುದನ್ನು ಕಡಿಮೆ ಮಾಡಿ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಮಾಂಸ ಮಾರುವ ಕೆಲವರು, ಪ್ರಾಣಿಗಳನ್ನು ಸರಿಯಾಗಿ ಸಾಕಣೆ ಮಾಡುತ್ತಿಲ್ಲ. ಕೆಲವರು ಕೋಳಿಗಳಿಗೆ ಇಂಜೆಕ್ಟ್ ಮಾಡಿ, ಕಲಬೆರಕೆ ಮಾಡುತ್ತಿದ್ದಾರೆ. ಇಂಥ ಕೋಳಿಗಳ ಮಾಂಸ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ.
ವಿದೇಶದಲ್ಲಿ ಹಸು ಹೆಚ್ಚು ಹಾಲು ಕೊಡಬೇಕು ಎಂಬ ಕಾರಣಕ್ಕೆ, ಹುಲ್ಲು ತಿನ್ನುವ ಹಸುವಿಗೆ ಮಾಂಸವನ್ನು ತಿನ್ನಿಸಲಾಗಿತ್ತು. ಹಸುವಿನ ದೇಹಕ್ಕೆ ಮಾಂಸ ಹೊಂದಾಣಿಕೆಯಾಗದೇ, ಹಸುಗಳಿಗೆ ಹುಚ್ಚು ಹಿಡಿಯಿತು. ಬಳಿಕ ಒಂದು ದಿನ, ಸಾವಿರಾರು ಸಂಖ್ಯೆಯಲ್ಲಿ ಹಸುಗಳಿಗೆ ಗುಂಡಿಕ್ಕಿ ಕೊಲ್ಲಲಾಯಿತು. ಹಾಗಾಗಿ ಮಾಂಸಾಹಾರ ಮಾಡುವುದನ್ನು ಹಿತಮಿತಗೊಳಿಸಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ವೀಡಿಯೋ ನೋಡಿ..