Friday, October 18, 2024

Latest Posts

ಇನ್ನೊಬ್ಬರ ಹಣಕ್ಕೆ ಆಸೆ ಮಾಡಿದರೆ ಏನಾಗತ್ತೆ ಗೊತ್ತಾ..?

- Advertisement -

Spiritual Story: ಹಣ ಯಾರಿಗೆ ತಾನೇ ಬೇಡ ಹೇಳಿ..? ಏಕೆಂದರೆ, ಹಣವಿದ್ದರೆ, ನಾವು ಜೀವನ ಮಾಡಲು ಆಗೋದು. ಆಹರ, ಬಟ್ಟೆ, ಮನೆ ಏನೇ ಖರೀದಿಸಬೇಕು ಅಂದ್ರೆ ದುಡ್ಡು ಬೇಕೆ ಬೇಕು. ಇಂದಿನ ಕಾಲದಲ್ಲಿ ಕೊಲೆ, ಸುಲಿಗೆ, ದರೋಡೆ, ಮೋಸ, ಲಂಚ ಎಲ್ಲವೂ ಹಣಕ್ಕಾಗಿಯೇ ಮಾಡುತ್ತಿರುವುದು. ಆದರೆ ಚಾಣಕ್ಯರ ಪ್ರಕಾರ, ನಾವು ನಮ್ಮ ಬುದ್ಧಿವಂತಿಕೆಯಿಂದ, ನಿಯತ್ತಾಗಿ ದುಡಿದು ಹಣವನ್ನು ಸಂಪಾದಿಸಬೇಕು. ಅದನ್ನು ಬಿಟ್ಟು ಇನ್ನೊಬ್ಬರ ದುಡ್ಡಿಗೆ ಆಸೆ ಪಡಬಾರದು. ಹಾಗಾದ್ರೆ ಇನ್ನೊಬ್ಬರ ಹಣಕ್ಕೆ ಆಸೆ ಮಾಡಿದರೆ ಏನಾಗತ್ತೆ ಅನ್ನೋ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..

ಇನ್ನೊಬ್ಬರ ಹಣಕ್ಕೆ ಆಸೆ ಪಡುವುದು ಎಂದರೆ, ದುರಾಸೆ ಮಾಡುವುದು ಎಂದರ್ಥ. ಮನುಷ್ಯನಿಗೆ ಆಸೆ ಇರಬೇಕು. ಆದರೆ ಇನ್ನೊಬ್ಬರ ದುಡ್ಡು ತನಗೆ ಸಿಗಲಿ ಎಂಬ ದುರಾಸೆ ಇರಬಾರದು. ಹೀಗಿದ್ದಾಗ, ಆತ ಯಾವ ಕೆಲಸ ಬೇಕಾದರೂ ಮಾಡುತ್ತಾನೆ. ಆಗಲೇ ಅವನಿಗೆ ನಷ್ಟವಾಗುತ್ತದೆ. ಹಾಗಾಗಿ ಯಾರು ಇನ್ನೊಬ್ಬಕ ದುಡ್ಡಿಗೆ ಆಸೆ ಪಡುತ್ತಾರೋ, ಅವರಿಗೆ ಜೀವನದಲ್ಲಿ ನಷ್ಟವಾಗುವುದು ಸಹಜ ಎನ್ನುತ್ತಾರೆ ಚಾಣಕ್ಯರು.

ಕೆಲವೊಮ್ಮೆ ಇನ್ನೊಬ್ಬರ ಹಣದ ದುರಾಸೆಯಿಂದ ಮನುಷ್ಯ, ತನ್ನ ಪ್ರಾಣಕ್ಕೆ ತಾನು ಕುತ್ತು ತಂದುಕೊಳ್ಳುತ್ತಾನೆ. ಯಾವಾಗ ಮನುಷ್ಯ ಇನ್ನೊಬ್ಬರ ದುಡ್ಡು, ಆಸ್ತಿ, ಚಿನ್ನಕ್ಕಾಗಿ ಆಸೆ ಪಡುತ್ತಾನೋ, ಆಗ ಅವನು ಅದನ್ನು ಪಡೆಯಲು ಎಂಥದ್ದೇ ದಾರಿ ಹಿಡಿಯಲು ರೆಡಿಯಾಗಿರುತ್ತಾನೆ. ಕೆಟ್ಟ ಮಾರ್ಗ ಹಿಡಿದು, ಇನ್ನೊಬ್ಬರ ದುಡ್ಡಿಗೆ ವಾರಸ್ದಾರನಾಗಲು ಹೊರಟರೆ, ಆತನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಹಾಗಾಗಿ ನಮ್‌ಮ ಪಾಲಿಗೆ ಏನು ಬರುತ್ತದೆಯೋ ಅದನ್ನೇ ನಾವು ಅನುಭವಿಸಬೇಕು. ಯಾವುದರ ಬಗ್ಗೆಯೂ ನಾವು ಹೆಚ್ಚು ಆಸೆಪಡಬಾರದು. ನಾವು ಯಾವಾಗ ಯಾವುದರ ಬಗ್ಗೆಯಾದರೂ ಆಸೆಪಡುತ್ತೆವೋ, ಅದು ನಮಗೆ ಸಿಗುವುದಿಲ್ಲ. ಆದರೆ ನೀವು ಏನನ್ನೂ ಬಯಸದೇ, ದೇವರು ಕೊಟ್ಟಿದ್ದು ಸಾಕು ಎನ್ನುತ್ತಿರೋ, ಆಗಲೇ ಅದೃಷ್ಟ ನಿಮ್ಮ ಪಾಲಾಗುತ್ತದೆ ಅಂತಾರೆ ಚಾಣಕ್ಯರು.

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..

ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..

- Advertisement -

Latest Posts

Don't Miss