Health Tips: ನಾವು ಈ ಮೊದಲೇ ನಿಮಗೆ ಗರ್ಭಿಣಿಯರು ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವ ರೀತಿ ಕಾಳಜಿ ವಹಿಸಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ವೈದ್ಯೆಯಾದ ಡಾ. ದೀಪಿಕಾ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಂಡಲ್ಲಿ ಏನಾಗತ್ತೆ ಅಂತಾ ವಿವರಿಸಿದ್ದಾರೆ.
ಕೂದಲು ಕಸಿ ಮಾಡಿಸಿಕೊಂಡ ತಕ್ಷಣ, ಕೂದಲು ಬೆಳೆಯುತ್ತದೆ. ಆದರೆ ಅದನ್ನು ಹಾಗೇ ಮೆಂಟೇನ್ ಮಾಡಿಕೊಳ್ಳಬೇಕು. ಯಾಕಂದ್ರೆ ಕೂದಲು ಉತ್ತಮವಾಗಿ ಎಷ್ಟು ತಿಂಗಳು ಇರುತ್ತದೆ ಅಂತಾ ಹೇಳಲಾಗುವುದಿಲ್ಲ. ಅವರ ಆರೋಗ್ಯ, ಅವರು ಮೆಂಟೇನ್ ಮಾಡುವ ರೀತಿಯ ಮೇಲೆ ಅದು ಮ್ಯಾಟರ್ ಆಗುತ್ತದೆ. ವೈದ್ಯರ ಬಳಿ ಈ ಬಗ್ಗೆ ಸಲಹೆ ಪಡೆಯುವುದು ತುಂಬಾ ಮುಖ್ಯ ಅಂತಾರೆ ವೈದ್ಯರು.
ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಂಡಾಗ, ಅವರಿಗೆ ಹೈಪರ್‌ಟೆನ್ಶನ್ ಆಗಬಹುದು. ಬಿಪಿ ಹೆಚ್ಚಾಗಬಹುದು. ಬ್ಲೀಡಿಂಗ್ ಆಗುವ ಸಾಧ್ಯತೆ ಇರುತ್ತದೆ. ಇನ್‌ಫೆಕ್ಷನ್ ಕೂಡ ಆಗಬಹುದು. ಹಾಗಾಗಿ ಇಂಥ ರಿಸ್ಕ್ ತೆಗೆದುಕೊಳ್ಳುವ ಬದಲು ಗರ್ಭಾವಸ್ಥೆಯಲ್ಲಿ ಇಂಥ ಪ್ರಯೋಗ ಮಾಡದಿದ್ದರೆ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..