Spiritual Story: ನಿದ್ರಿಸುವುದು ನಮ್ಮ ಕೈಯಲ್ಲಿದ್ದರೂ, ನಮಗೆ ಬೀಳುವ ಕನಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಭವಿಷ್ಯದಲ್ಲಿ ಏನಾಗಲಿದೆ ಎಂಬ ಸೂಚನೆ ಕೊಡಲು ನಮಗೆ ಕೆಲವು ಕನಸು ಬೀಳುತ್ತದೆ. ಅಂಥ ಕನಸುಗಳು ನಮ್ಮ ಆರ್ಥಿಕ ಪರಿಸ್ಥಿತಿ, ಶಾಂತಿ, ನೆಮ್ಮದಿ ಹೆಚ್ಚಿಸಬಹುದು ಅಥವಾ ಹಾಳೂ ಮಾಡಲು ಬಹುದು. ಹಾಗಾಗಿ ಇಂದು ನಾವು ಕನಸಿನಲ್ಲಿ ಕೆಲವು ಪ್ರಾಣಿಗಳು ಬಂದರೆ, ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.
ಆನೆ. ಕನಸಿನಲ್ಲಿ ಆನೆ ಬಂದರೆ, ನಾವು ಮಾಡುವ ಎಲ್ಲ ಕೆಲಸಗಳಲ್ಲೂ ನಮಗೆ ಯಶಸ್ಸು ಸಿಗಲಿದೆ. ಅಪೂರ್ಣಗೊಂಡಿರುವ ಕೆಲಸ ಪೂರ್ಣವಾಗಲಿದೆ ಎಂದರ್ಥ. ಕನಸಿನಲ್ಲಿ ಆನೆ ಬಂದರೆ, ಪ್ರಮೋಷನ್ ಸಿಗುತ್ತದೆ. ಸಂಬಳ ಕೂಡ ಹೆಚ್ಚಾಗಬಹುದು. ಅಥವಾ ನಾವು ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಅಂದುಕೊಂಡಿದ್ದರೆ, ಆ ಕೆಲಸವೂ ಪೂರ್ಣವಾಗುತ್ತದೆ.
ಆಕಳು. ಆಕಳು ಕನಸಿನಲ್ಲಿ ಬಂದರೆ, ನೀವು ಯಾವುದಾದರೂ ಉದ್ಯಮ ನಡೆಸುತ್ತಿದ್ದರೆ, ಅದರಲ್ಲಿ ಯಶಸ್ಸು ಸಾಧಿಸುತ್ತೀರಿ ಎಂದರ್ಥ. ಅಥವಾ ನೀವು ಕೆಲಸ ಹುಡುಕುತ್ತಿದ್ದರೆ, ಈ ದಿನ ನಿಮಗೆ ಆ ಕೆಲಸ ಸಿಗುತ್ತದೆ ಎಂಬ ಸೂಚನೆ ಆಕಳು ಕನಸಿನಲ್ಲಿ ಬರುವ ಮೂಲಕ ನಿಮಗೆ ಕೊಡುತ್ತದೆ.
ಸಿಂಹ. ಸಿಂಹ ನಾಯಕತ್ವದ ಸಂಕೇತ. ನಿಮ್ಮ ಕನಸಿನಲ್ಲಿ ಏನಾದ್ರೂ ಸಿಂಹ ಬಂದರೆ, ನಿಮಗೆ ಶ್ರೀಮಂತಿಕೆ ಬರಲಿದೆ. ಲಕ್ಷ್ಮೀ ಕೃಪೆ ನಿಮ್ಮ ಮೇಲಾಗಲಿದೆ ಎಂದರ್ಥ. ಯಾವುದಾದರೂ ಉನ್ನತ ಮಟ್ಟದ ಕೆಲಸ, ಆರ್ಡರ್, ಆಫರ್ ಇಂಥ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂಬುದು ಇದರ ಅರ್ಥ.
ಮಂಗ. ಮಂಗ ಕನಸಿನಲ್ಲಿ ಬಂದರೆ, ನಿಮ್ಮ ಜೊತೆ ಅಥವಾ ನಿಮ್ಮ ಮನೆಯಲ್ಲಿ ಜಗಳವಾಗಲಿದೆ ಎಂದರ್ಥ. ಹಾಗಾಗಿ ಯಾವಾಗ ಕನಸಿನಲ್ಲಿ ಮಂಗ ಬರುತ್ತದೆಯೋ, ಅಂದು ನೀವು ತಾಳ್ಮೆಯಿಂದ ಇರುವುದು ಉತ್ತಮ. ಈ ದಿನ ಕೋಪ ಮಾಡಿಕೊಳ್ಳದೇ ಇರುವುದು ಒಳ್ಳೆಯದು.
ಹಾವು. ಹಾವು ಕನಸಿನಲ್ಲಿ ಬಂದರೆ, ನಿಮಗೆ ಆರ್ಥಿಕ ಲಾಭವಾಗಲಿದೆ ಎಂದರ್ಥ. ಆದರೆ ಹಾವು ಬರೀ ಕನಸಿನಲ್ಲಿ ಬಂದರೆ ಸಾಕಾಗುವುದಿಲ್ಲ. ಬದಲಾಗಿ ಕನಸಿನಲ್ಲಿ ಬಂದ ಹಾವು, ನಿಮ್ಮನ್ನು ಕಚ್ಚಿದರೆ ಮಾತ್ರ, ನಿಮಗೆ ಧನಲಾಭವಾಗುತ್ತದೆ. ಅಥವಾ ಕೆಲಸ ಸಿಗುತ್ತದೆ. ಅಥವಾ ಆರ್ಥಿಕ ಪರಿಸ್ಥಿತಿ ಸುಧಾರಿಸುವ ದಿನ ಹತ್ತಿರ ಬಂತು ಅನ್ನೋ ಸೂಚನೆ ಇದಾಗಿರುತ್ತದೆ.
ನಾಯಿ. ನಾಯಿ ಕನಸಿನಲ್ಲಿ ಬಂದರೆ, ಅಪೂರ್ಣಗೊಂಡ ಕೆಲಸ ಪೂರ್ಣವಾಗುತ್ತದೆ ಎಂದರ್ಥ. ಮನೆ ಕಟ್ಟುವ ಕೆಲಸ, ಅಥವಾ ಆಫೀಸು ಕೆಲಸ, ಸರ್ಕಾರಿ ಕೆಲಸ, ಅಥವಾ ನಿಮ್ಮ ಜೀವನವನ್ನು ಉತ್ತಮ ದಾರಿಗೆ ತರುವ ಯಾವುದೇ ಕೆಲಸ ಅಪೂರ್ಣವಾಗಿದ್ದರೂ, ಕನಸಿನಲ್ಲಿ ನಾಯಿ ಕಾಣಿಸಿಕೊಂಡರೆ, ಆ ಕೆಲಸ ಪೂರ್ಣವಾಗುತ್ತದೆ ಎಂದರ್ಥ. ಕೆಲವು ನಂಬಿಕೆಗಳ ಪ್ರಕಾರ, ನಾಯಿ ಕನಸಿನಲ್ಲಿ ಬಂದು ಕಚ್ಚಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.