Tuesday, December 24, 2024

Latest Posts

ದುಬೈನಲ್ಲಿ ಜೂ.ಎನ್ಟಿಆರ್ ನಟ ರಿಷಬ್ ಶೆಟ್ಟಿಗೆ ಏನ್ ಹೇಳಿದ್ರು ಗೊತ್ತಾ..?

- Advertisement -

Movie News: ತೆಲುಗಿನ ಪ್ರಸಿದ್ಧ ನಟ ಜೂ. ಎನ್‌ಟಿಆರ್‌ರನ್ನು ಕನ್ನಡದ ಮಗ ಎಂದು ಕರೆಯುತ್ತಾರೆ. ಯಾಕಂದ್ರೆ ತೆಲುಗು ಬಿಗ್‌ಬಾಸ್‌ನಲ್ಲಿ ಮಾತನಾಡುವಾಗ, ಅವರೇ ಈ ಬಗ್ಗೆ ಹೇಳಿಕೊಂಡಿದ್ದರು. ನನ್ನ ತಾಯಿ ಕುಂದಾಪುರದವರು, ನನಗೆ ಕನ್ನಡ ಮಾತನಾಡಲು ಬರುತ್ತದೆ. ಮತ್ತು ಈ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಇದೀಗ ದುಬೈನಲ್ಲಿ ನಡೆದ ಅವಾರ್ಡ್‌ ಫಂಕ್ಷನ್‌ನಲ್ಲೂ ಕೂಡ ಜೂ. ಎನ್‌ಟಿಆರ್ ಕನ್ನಡ ಮಾತನಾಡಿದ್ದು, ನಟ ಕಿಷಬ್‌ ಶೆಟ್ಟಿಗೆ ಒಂದು ಮಾತನ್ನ ಹೇಳಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..

ದುಬೈನಲ್ಲಿ 2023ನೇ ಸಾಲಿನ ಸೈಮಾ ಅವಾರ್ಡ್ ಫಂಕ್ಷನ್‌ ನಡೆಯಿತು. ಈ ವೇಳೆ 2022ರಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡ ಸಿನಿಮಾಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ಈ ಸಿನಿಮಾದಲ್ಲಿ ದಕ್ಷಿಣ ಭಾರತದ ತಾರೆಯರು ಭಾಗಿಯಾಗಿದ್ದರು. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಕಾಂತಾರ ಚಿತ್ರದಲ್ಲಿನ ನಟನೆಗೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಇನ್ನು ನಚ ಅಚ್ಯುತ್ ಕುಮಾರ್‌ಗೆ ಅತ್ಯುತ್ತಮ ಖಳನಟ ಪ್ರಶಸ್ತಿ ಸಿಕ್ಕಿದೆ. ಕೆಜಿಎಫ್‌ 2 ಸಿನಿಮಾದಲ್ಲಿ ನಟಿಸಿದ್ದಕ್ಕೆ, ನಟ ಯಶ್‌ಗೆ ಅತ್ಯುತ್ತಮ ನಟ ಮತ್ತು ಶ್ರೀನಿಧಿ ಶೆಟ್ಟಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಇನ್ನು ಈ ಪ್ರಶಸ್ತಿ ಸಮಾರಂಭದ ವೇಳೆ ನಟ ಜೂ. ಎನ್‌ಟಿಆರ್, ನಟ ರಿಷಬ್ ಶೆಟ್ಟಿಯನ್ನು ಕುರಿತು ಹೇಗಿದ್ದೀರಾ ಸರ್ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಿಷಬ್ ಚೆನ್ನಾಗಿದ್ದೀನಿ ಸರ್ ಎಂದರು. ಅದಕ್ಕೆ ಎನ್‌ಟಿಆರ್, ಥ್ಯಾಂಕೂ ಸರ್‌, ಕಂಗ್ರಾಜುಲೇಶನ್ಸ್ ಎಂದಿದ್ದಾರೆ.

ಇನ್ನು ಆ್ಯಂಕರ್ ಅಕುಲ್ ಬಾಲಾಜಿ, ಕುಂದಾಪುರದಲ್ಲೂ ಹೀಗೆ ಮಾತಾಡ್ತಾರಾ ಸರ್ ಎಂದು ಜೂ. ಎನ್‌ಟಿಆರ್‌ಗೆ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಎನ್‌ಟಿಆರ್, ನನ್ನ ಅಮ್ಮನ ಜೊತೆ ನಾನು ಹೀಗೆ ಮಾತಾಡ್ತೇನೆ ಸರ್ ಎಂದಿದ್ದಾರೆ. ಈ ವೇಳೆ ರಿಷಬ್ ಮತ್ತು ಎನ್‌ಟಿಆರ್ ಇಬ್ಬರೂ ಮಾತನಾಡಿದ್ದು, ಕಳೆದ ವರ್ಷದ ಸೈಮಾ ಅವಾರ್ಡ್ ಪ್ರಶಸ್ತಿ ಸಮಾರಂಭದ ಘಟನೆಯನ್ನು ಮೆಲುಕು ಹಾಕಿದ್ದಾರೆ.

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss