Tuesday, November 18, 2025

Latest Posts

ಪ್ಲಾಸ್ಟಿಕ್ ಬಳಕೆಯಿಂದ ಯಾವ ರೀತಿಯ ರೋಗಗಳು ಬರುತ್ತದೆ ಗೊತ್ತಾ..?

- Advertisement -

Health Tips: ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದರೂ, ಪ್ಲಾಸ್ಟಿಕ್ ಸಂಪೂರ್ಣವಾಗಿ ಬ್ಯಾನ್ ಆಗಿಲ್ಲ. ಪೇಪರ್, ಡಾಕ್ಯೂಮೆಂಟ್ ಬಳಸಲು ಪ್ಲಾಸ್ಟಿಕ್ ಬ್ಯಾಗ್ ಬಳಸುವುದು ಅವಶ್ಯಕ. ಆದರೆ ಬಿಸಿ ಬಿಸಿ ಪದಾರ್ಥ ಪ್ಯಾಕ್‌ ಮಾಡುವುದಕ್ಕೂ ಪ್ಲಾಸ್ಟಿಕ್ ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಒಂದು ಅಪಾಯಕಾರಿ ವಸ್ತುವಾಗಿದೆ. ಹಾಗಾದರೆ, ಪ್ಲಾಸ್ಟಿಕ್ ಬಳಕೆಯಿಂದ ಎಷ್ಟೆಲ್ಲ ಸಮಸ್ಯೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಪ್ಲಾಸ್ಟಿಕ್ ಬಳಕೆಯಿಂದ ಉಸಿರಾಟದ ಸಮಸ್ಯೆ ಬರುತ್ತದೆ. ಅಸ್ತಮಾ ರೋಗ ಸಂಭವಿಸುವ ಸಾಧ್ಯತೆ ಇದೆ. ಹಲವರು ಪ್ಲಾಸ್ಟಿಕ್ ಡಬ್ಬದಲ್ಲಿ ತಿಂಡಿ ತಿನಿಸು, ಮಸಾಲೆ ಪದಾರ್ಥ, ಇತ್ಯಾದಿಯನ್ನ ಇಡುತ್ತಾರೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತಾರೆ. ಪ್ಲಾಸ್ಟಿಕ್ ಚೀಲದಲ್ಲಿ ಹಲವು ತಿನಿಸನ್ನ ಇಡುತ್ತಾರೆ. ಇದೆಲ್ಲವೂ ಪ್ಲಾಸ್ಟಿಕ್ ಬಳಕೆಯ ಭಾಗವೇ. ನೀವು ಪ್ಲಾಸ್ಟಿಕ್‌ನಲ್ಲಿ ಅಥವಾ ಪ್ಲಾಸ್ಟಿಕ್ ಡಬ್ಬದಲ್ಲಿ ತಣ್ಣಗಿನ ತಿನಿಸು, ಪೇಯ ಹಾಕಿದರೂ ಕೂಡ, ಅದು ಆರೋಗ್ಯಕ್ಕೆ ಕೆಟ್ಟದ್ದು. ಇದರಿಂದ ಉಸಿರಾಟದ ಸಮಸ್ಯೆ ಬರುತ್ತದೆ.

ಇಷ್ಟೇ ಅಲ್ಲದೇ, ಮಕ್ಕಳು ಆಡುವ ಆಟಿಕೆಗಳೂ ಪ್ಲಾಸ್ಟಿಕ್‌ನಿಂದ ಮಾಡಿದ್ದಾಗಿರುತ್ತದೆ. ಅದನ್ನು ಮಕ್ಕಳು ಬಾಯಿಗೆ ಹಾಕಿಕೊಳ್ಳುತ್ತಾರೆ. ಇದು ಕೂಡ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದೆ. ಇದು ಸ್ಲೋ ಪಾಯ್ಸನ್‌್ ಆಗಿದ್ದು, ಎಷ್ಟು ಗಂಭೀರ ಆರೋಗ್ಯ ಸಮಸ್ಯೆ ತಂದಿಡುತ್ತದೆ ಅನ್ನೋದನ್ನು ಕೂಡ ನೀವು ಅಂದಾಜು ಮಾಡಲಿಕ್ಕಿಲ್ಲ. ಹಾಗಾದ್ರೆ ಮಕ್ಕಳಿಗೆ ಯಾವ ರೀತಿಯ ಆಟಿಕೆ ನೀಡಬೇಕು ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ನೀವು ಮಕ್ಕಳಿಗೆ ಮಣ್ಣಿನ ಆಟಿಕೆ, ಮರದ ಆಟಿಕೆ, ಬಟ್ಟೆಯ ಆಟಿಕೆ, ಇಂಥ ಆಟಿಕೆಗಳನ್ನ ಕೊಡಿ.

ಇನ್ನು ನೀವು ಬಳಸಿ ಬಿಸಾಕುವ ಪ್ಲಾಸ್ಟಿಕ್‌ನಿಂದ, ಪರಿಸರ ಮಾಲಿನ್ಯವಾಗುತ್ತದೆ. ಆ ಪ್ಲಾಸ್ಟಿಕ್‌ಗಳು ಹಲವು ವರ್ಷಗಳ ಕಾಲ ಕರಗುವುದಿಲ್ಲ. ಇನ್ನು ನೀವು ಪ್ಲಾಸ್ಟಿಕ್ ಸುಟ್ಟರೆ, ಅದರಿಂದ ವಾಯು ಮಾಲಿನ್ಯವಾಗುತ್ತದೆ. ಹಾಗಾಗಿ ಆದಷ್ಟು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss