Health tips: ನಾವು ನೀವು ಸಾಮಾನ್ಯವಾಗಿ ಬಾವಿ, ನಳದಲ್ಲಿ ಬರುವ ನೀರನ್ನು ಕುಡಿತಿವಿ. ಇನ್ನು ಕೆಲವರು ದುಡ್ಡು ಕೊಟ್ಟು ಬಾಟಲಿ ನೀರು ತಂದು ಕುಡಿಯುತ್ತಾರೆ. ಆದರೆ ಸೆಲೆಬ್ರಿಟಿಗಳು ಕುಡಿಯುವ ನೀರೇ ಹೆವಿ ಎಕ್ಸ್‌ಪೆನ್ಸಿವ್ ಆಗಿರುತ್ತದೆ. ವಿರಾಟ್ ಕೊಹ್ಲಿ, ನೀತಾ ಅಂಬಾನಿ ಇವರೆಲ್ಲ ಕುಡಿಯುವ ನೀರೇ ಹೆಚ್ಚು ಬೆಲೆ ಬಾಳುವಂಥದ್ದು ಆಗಿರುತ್ತದೆ. ಹಾಗಾದ್ರೆ ಸೆಲೆಬ್ರಿಟಿಸ್ ಕುಡಿಯೋ ನೀರು ಯಾವುದು..? ಆ ನೀರು ಒಳ್ಳೇದಾ ಇಲ್ಲವಾ ಅಂತಾ ತಿಳಿಯೋಣ ಬನ್ನಿ..
ಸೆಲೆಬ್ರಿಟಿಗಳು ಕುಡಿಯುವ ನೀರು ಬ್ಲಾಕ್ ವಾಟರ್. ಹಾಗಂತ ಅವರು ಕಪ್ಪು ನೀರು ಕುಡಿತಾರೆ ಅಂತಾ ಅರ್ಥವಲ್ಲ. ಬದಲಾಗಿ ಬ್ಲಾಕ್ ವಾಟರ್ ಅಂದ್ರೆ ಬ್ರ್ಯಾಂಡ್ ಹೆಸರು. ಆದರೆ ಆ ಕಪ್ಪು ಬಾಟಲಿಯಲ್ಲಿ ಇರೋದು, ನಾವು ನೀವೆಲ್ಲ ಕುಡಿಯುವ ನೀರು. ಆದರೆ ಅದನ್ನು ಶುದ್ಧಗೊಳಿಸಿರುವ ರೀತಿ ಬೇರೆ ತರಹ ಇರುತ್ತದೆ ಅಂತಾರೆ ವೈದ್ಯೆ ಡಾ.ಪ್ರೇಮಾ.
ಆದರೆ ಇಂಥ ನೀರಿನಲ್ಲಿ ರಾಸಾಯನಿಕಗಳು ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯಲ್ಲೇ ನೀರನ್ನು ಫಿಲ್ಟರ್ ಮಾಡಿ, ಕುದಿಸಿ, ಆರಿಸಿ, ಕುಡಿದಾಗ ಮನುಷ್ಯ ಆರೋಗ್ಯಕರವಾಗಿರುತ್ತಾನೆ. ಇದಕ್ಕಿಂತ ಆರೋಗ್ಯಕರ ನೀರು ಬೇರೊಂದಿಲ್ಲ. ಹಾಗಾಗಿ ನೀರನ್ನು ದುಡ್ಡು ಕೊಟ್ಟು ಕುಡಿಯುವ ಅವಶ್ಯಕತೆ ಇಲ್ಲ ಅಂತಾರೆ ವೈದ್ಯರು.
ನೀರು ಮತ್ತು ಗಾಳಿ ಮನುಷ್ಯನ ಜನ್ಮಸಿದ್ಧ ಹಕ್ಕು. ಅದನ್ನು ಬಾಟಲಿಗೆ ತುಂಬಿಸಿ, ಬ್ರ್ಯಾಂಡ್ ಕೊಟ್ಟು ಮಾರುವುದರಲ್ಲಿ ಅರ್ಥವಿಲ್ಲ. ನೀರನ್ನು ದುಡ್ಡು ಕೊಟ್ಟು ಖರೀದಿಸಿ, ಕುಡಿಯಬೇಕಿಲ್ಲ. ಇನ್ನು ಬೇಸಿಗೆಯಲ್ಲಿ ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಚೆನ್ನಾಗಿ ನೀರು ಕುಡಿಯಬೇಕು. ಹೆಚ್ಚೆಂದರೆ, 3ರಿಂದ 4 ಲೀಟರ್ ನೀರು ಕುಡಿಯಬಹುದು. ಇನ್ನು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..