Monday, December 23, 2024

Latest Posts

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

- Advertisement -

Spiritual Story: ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಚೆನ್ನಾಗಿ ಅರಿತು, ಪ್ರೀತಿಸಿ, ಕಾಳಜಿಯಿಂದ ಇದ್ದಲ್ಲಿ ಮಾತ್ರ, ಆ ಸಂಬಂಧ ಉತ್ತಮವಾಗಿರುತ್ತದೆ. ಎಂಥ ಕಷ್ಟಕಾಲದಲ್ಲೂ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರದೇ, ಬಿಟ್ಟುಕೊಡದೇ ಇದ್ದಾಗಲೇ, ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ಪತಿಯಾದವನು ಪತ್ನಿಯ ಬಗ್ಗೆ ಕೆಲ ಸಮಯದಲ್ಲಿ ಕಾಳದಿ ವಹಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಆಕೆಯ ಕಾಳಜಿ ವಹಿಸದಿದ್ದಲ್ಲಿ, ಅಕೆ ಅದನ್ನು ಜನ್ಮಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ. ಆಗಲೇ ನಿಮ್ಮ ದಾಂಪತ್ಯ ಜೀವನದಲ್ಲಿ ಒಡಕು ಬರುತ್ತದೆ.

ಪತ್ನಿಯ ಆರೋಗ್ಯ ಹಾಳಾದಾಗ. ಪತ್ನಿಯ ಆರೋಗ್ಯ ಹಾಳಾದಾಗ, ಪತ್ನಿಯ ಕಾಳಜಿ ಮಾಡಿ. ಅದರಲ್ಲೂ ಆಕೆ ಮುಟ್ಟಿನ ನೋವಿನಿಂದ ಬಳಲುವಾಗ, ಆಕೆ ಏನು ಹೇಳದಿದ್ದರೂ, ನೀವು ಆಕೆಯ ಕಾಳಜಿ ಮಾಡಬೇಕು. ಆಗ ನಿಮ್ಮ ಪತ್ನಿಗೆ ನಿಮ್ಮ ಮೇಲಿನ ಕಾಳಜಿ, ಪ್ರೀತಿ, ಗೌರವ ಹೆಚ್ಚಾಗುತ್ತದೆ. ಆದರೆ ಆಕೆ ನೋವು ಅನುಭವಿಸುತ್ತಿರುವುದನ್ನು ನೋಡಿಯೂ ನೀವು ನಿರ್ಲಕ್ಷ್ಯ ಮಾಡಿದ್ದಲ್ಲಿ, ಆಕೆಗೆ ಅದು ಜನ್ಮಪೂರ್ತಿ ನೆನಪುಳಿಯುತ್ತದೆ. ಆಗ ಆಕೆಗೂ ನಿಮ್ಮ ಮೇಲಿನ ಪ್ರೀತಿ, ಕಾಳಜಿ ಕಡಿಮೆಯಾಗುತ್ತದೆ. ನೀವು ಅನಾರೋಗ್ಯದಿಂದ ನರಳುವಾಗ, ಆಕೆಯೂ ನಿಮ್ಮನ್ನು ಕಡೆಗಣಿಸಬಹುದು. ಏಕೆಂದರೆ ಮುಟ್ಟಿನ ಸಮಯದಲ್ಲಿ ಪತಿ ತನ್ನನ್ನು ಕಾಳಜಿ ಮಾಡಲಿ ಎಂದು ಪ್ರತೀ ಹೆಣ್ಣು ಬಯಸುತ್ತಾಳೆ.

ಪತ್ನಿ ಗರ್ಭಿಣಿಯಾಗಿದ್ದಾಗ ಆಕೆಗೆ ಹೆಚ್ಚು ಕಾಳಜಿ ಮಾಡಿ. ಈ ಸಮಯದಲ್ಲಿ ಮತ್ತು ಬಾಣಂತನದ ಸಮಯದಲ್ಲಿ ಏನೇನು ಘಟನೆ ನಡೆಯುತ್ತದೆಯೋ, ಅದನ್ನು ಪ್ರತೀ ಹೆಣ್ಣು ಕೊನೆಯವರೆಗೂ ನೆನಪಿಡುತ್ತಾಳೆ. ತಾನು ಗರ್ಭಿಣಿಯಾಗಿದ್ದಾಗ, ತನ್ನನ್ನು ಹೇಗೆ ನಡೆಸಿಕೊಂಡಿದ್ದರು. ಬಾಣಂತನ ಹೇಗಾಯಿತು ಎಂದು ಪ್ರತೀ ಹೆಣ್ಣು ನೆನಪಿಡುತ್ತಾಳೆ. ಹಾಗಾಗಿ ಗರ್ಭಾವಸ್ಥೆಯಲ್ಲಿದ್ದಾಗ, ಆಕೆಗೆ ಹೆಚ್ಚು ಕಾಳಜಿ ಮಾಡಿ.

ನಿಮ್ಮೊಂದಿಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದಾಗ ಪತ್ನಿಯ ಕಾಳಜಿ ಮಾಡಿ. ನಿಮ್ಮ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಬಂದಾಗ, ನೀವು ಆಕೆಯ ಕಾಳಜಿ ಮಾಡಬೇಕು. ಕೆಲವೊಮ್ಮೆ ಕೆಲ ಪತಿಯರು ಪತ್ನಿಯನ್ನು ಬಿಟ್ಟು ಊಟ ಮಾಡುತ್ತಾರೆ. ಆಕೆ ಒಂದು ಲೋಟ ನೀರು ಕುಡಿದಳೋ ಇಲ್ಲವೋ ಅಂತಲೂ ಕೇಳುವುದಿಲ್ಲ. ಇಂಥ ರೀತಿಗಳು ಪತ್ನಿಗೆ ಇಷ್ಟವಾಗುವುದಿಲ್ಲ. ಏಕೆಂದರೆ, ನೀವು ಆಕೆಯ ಮನೆಗೆ ಅಳಿಯನಾಗಿ ಹೋದಾಗ, ಆಕೆಯ ಮನೆಯವರು ನಿಮಗೆ ರಾಜಾತಿಥ್ಯ ಮಾಡುತ್ತಾರೆ. ಅದೇ ರೀತಿ ನೀವು ಕೂಡ ಆಕೆಯ ಕಾಳಜಿ ಮಾಡಬೇಕೆಂದು ಆಕೆ ಬಯಸುತ್ತಾಳೆ.

ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಆಕೆಯನ್ನು ಕಡೆಗಣಿಸಬೇಡಿ. ನೀವು ಯಾವುದಾದರೂ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಪತ್ನಿಯ ಅಭಿಪ್ರಾಯವನ್ನು ಕೇಳುವುದು ತುಂಬಾ ಮುಖ್ಯ. ಆಕೆಯ ಸಲಹೆಯನ್ನು ಪಡೆಯುವುದು ಮುಖ್ಯ. ಉದಾಹರಣೆಗೆ ನೀವು ಮನೆ ಖರೀದಿಸುತ್ತಿದ್ದೀರಿ, ಕಾರ್ ಖರೀದಿಸುತ್ತಿದ್ದೀರಿ. ಅಥವಾ ನಿಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುವನ್ನು ಮಾರುತ್ತಿದ್ದೀರಿ. ಇಂಥ ಸಂದರ್ಭದಲ್ಲಿ ಪತ್ನಿಯನ್ನು ಕಡೆಗಣಿಸದೇ, ಆಕೆಯ ಮಾತನ್ನು ಕೇಳಿ.

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ

- Advertisement -

Latest Posts

Don't Miss