‘777 ಚಾರ್ಲಿ’ ಚಿತ್ರಕ್ಕೂ ಸಕ್ಸಸ್ ಟ್ಯಾಗ್ ಸಿಕ್ಕಿದೆ. ಹೀಗಾಗಿ ಈ ಸಿನಿಮಾಗೆ ಎರಡನೇ ಪಾರ್ಟ್ ಬರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಇದೀಗ ಈ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.
‘777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟನಾಗಿ, ನಿರ್ಮಾಪಕನಾಗಿ ಸಿನಿಮಾ ಮೂಲಕ ಗೆಲುವು ಕಂಡಿದ್ದಾರೆ. ಸಿನಿಮಾ ಯಶಸ್ಸು ಕಂಡ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿದ್ದರು. ಈ ಚಿತ್ರದ ಟಿವಿ ಹಕ್ಕು, ಓಟಿಪಿ ಹಕ್ಕು, ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲವೂ ಸೇರಿ 150 ಕೋಟಿ ರೂಪಾಯಿ ಬಿಸಿನೆಸ್ ಆಗಿದೆ ಎಂಬ ಮಾಹಿತಿಯನ್ನು ಚಿತ್ರತಂಡದವರು ನೀಡಿದ್ದಾರೆ. ಇದರ ಜೊತೆಗೆ ಸಿನಿಮಾಗೆ ಸೀಕ್ವೆಲ್ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಮಾಹಿತಿಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಯಶಸ್ವಿ ಸಿನಿಮಾಗೆ ಸೀಕ್ವೆಲ್ ಮಾಡಲಾಗುತ್ತದೆ. ‘777 ಚಾರ್ಲಿ’ ಚಿತ್ರಕ್ಕೂ ಕೂಡ ಸಕ್ಸಸ್ ಟ್ಯಾಕ್ಸ್ ಸಿಕ್ಕಿದೆ. ಹೀಗಾಗಿ ಈ ಸಿನಿಮಾಗೆ ಎರಡನೇ ಪಾರ್ಟ್ ಬರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದು, ‘ನಾಲ್ಕು ವರ್ಷ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇವೆ. ಅದು ಜೀರ್ಣ ಆಗಬೇಕು. ಹಾಗಾಗಿ ನಾಲ್ಕೈದು ಸಿನಿಮಾಗಳಲ್ಲಿ ಕೆಲಸ ಮಾಡಬೇಕು. ಹೊಸ ಅನುಭವಗಳನ್ನು ಪಡೆದಾಗ ‘777 ಚಾರ್ಲಿ-2’ ಮಾಡಬಹುದು ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಚಾರ್ಲಿ ಸೀಕ್ವೆಲ್ ಗೆ ನಾಯಕಿ ಯಾರು ಎನ್ನುವ ಬಗ್ಗೆಯೂ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಕಿರಣ್ ರಾಜ್ ಗೆ ಎರಡನೇ ಪಾರ್ಟ್ ಮಾಡಬೇಕು ಎನಿಸಿದರೆ ನಾವು ಖಂಡಿತವಾಗಿಯೂ ಮಾಡುತ್ತೇವೆ. ಆ ಚಿತ್ರಕ್ಕೆ ನಾನೇ ಬಂಡವಾಳ ಹೂಡುತ್ತೇನೆ. ಶರ್ವರಿ ಆಗ ದೊಡ್ಡವಳಾಗಿರುತ್ತಾಳೆ. ಅವಳೇ ಸಿನಿಮಾಗೆ ನಾಯಕಿ ಆಗಬಹುದು ಎಂದು ಮುಂದಿನ ಪ್ಲಾನ್ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
‘777 ಚಾರ್ಲಿ’ ಸಿನಿಮಾ ಬಿಡುಗಡೆಯಾಗಿ ೨೫ ದಿನ ಪೂರೈಸಿದೆ. ಇನ್ನು ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈವರೆಗೂ ‘777 ಚಾರ್ಲಿ’ ಸಿನಿಮಾ ಒಟ್ಟಾರೆಯಾಗಿ 150 ಕೋಟಿ ರೂಪಾಯಿ ಬಿಸಿನೆಸ್ ಮಾಡಿದೆ. ಈ ಹಣದಲ್ಲಿ ನಾಯಿಗಳಿಗಾಗಿಯೂ ಒಂದಷ್ಟು ಮೊತ್ತವನ್ನು ಮೀಸಲಿಡಲಾಗುವುದು ಎಂದೂ ತಿಳಿಸಿದ್ದಾರೆ.