Spiritual Story: ಕೆಲವರಿಗೆ ದೇವರ ಮೇಲೆ ನಂಬಿಕೆ ಇದ್ದು, ಅಂಥವರು ಗೊತ್ತಿಲ್ಲದೇ, ಕುತ್ತಿಗೆಯಲ್ಲಿ ದೇವರ ಚಿತ್ರವಿರುವ ಪೆಂಡೆಂಟ್ ಧರಿಸುತ್ತಾರೆ. ಮತ್ತೆ ಕೆಲವರು ಶೋಕಿಗಾಗಿ ದೇವರ ಫೋಟೋ ಇರುವ ಪೆಂಡೆಂಟ್ ಧರಿಸುತ್ತಾರೆ. ಆದರೆ ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ದೇವರ ಲಾಕೇಟ್ ಧರಿಸಿದರೆ, ಸ್ವಚ್ಛತೆ ಕಾಪಾಡಬೇಕಾಗುತ್ತದೆ. ನಾವು ಸ್ನಾನ ಮಾಡಿದರೂ ಕೂಡ, ಪದೇ ಪದೇ ಮೂತ್ರ ವಿಸರ್ಜನೆಗೆ, ಶೌಚಕ್ಕಾಗಿ ಹೋಗುತ್ತೇವೆ. ಆಗ ನಾವು ದೇವರ ಲಾಕೇಟ್ ಧರಿಸಬಾರದು. ಪದೇ ಪದೇ ನೀವು ಅದನ್ನು ತೆಗೆದಿರಿಸಿ, ಶೌಚಕ್ಕೆ ಹೋಗಲಾಗುವುದಿಲ್ಲ. ಹಾಗಾಗಿ ದೇವರ ಲಾಕೇಟನ್ನು ಧರಿಸಬಾರದು ಅಂತಾ ಹೇಳುವುದು. ಅಲ್ಲದೇ, ನಮ್ಮ ಕೈಗಳು ಕೂಡ ಶುದ್ಧವಾಗಿರುವುದಿಲ್ಲ. ಅದೇ ಕೈಗಳಿಂದ ನಾವು ಲಾಕೇಟ್ ಮುಟ್ಟಿಕೊಳ್ಳುತ್ತೇವೆ. ಇದರಿಂದ ನಮ್ಮ ನೆಮ್ಮದಿ, ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ದೇವರ ಫೋಟೋ ಇರುವ ಲಾಕೇಟ್ ಧರಿಸಬಾರದು.
ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳು ತಿಂಗಳಲ್ಲಿ ನಾಲ್ಕು ದಿನ ಹೊರಗಾಗುತ್ತಾರೆ. ಈ ವೇಳೆ ಆ ಹೆಣ್ಣು ಮಕ್ಕಳು ಲಾಕೇಟ್ ಧರಿಸುವಂತಿಲ್ಲ. ಅಲ್ಲದೇ ಮುಟ್ಟಾದ ಹೆಣ್ಣು ಮಕ್ಕಳನ್ನು ಲಾಕೇಟ್ ಧರಿಸಿದವರು ಮುಟ್ಟುವಂತಿಲ್ಲ. ಇಲ್ಲದಿದ್ದಲ್ಲಿ, ದೇವರ ಚಿತ್ರವಿರುವ ಲಾಕೇಟ್ ಮೈಲಿಗೆಯಾಗುತ್ತದೆ. ಇದೆಲ್ಲ ಕೆಲವರಿಗೆ ವಿಚಿತ್ರವೆನ್ನಿಸಬಹುದು. ಹುರುಳಿದ ವಿಷಯವೆನ್ನಿಸಬಹುದು. ಆದರೆ ಇವೆಲ್ಲವೂ ನಿಮ್ಮ ಜೀವನದ ಮೇಲೆ ನಕಾರಾತ್ಮಕತೆ ಬೀರುತ್ತದೆ.
ಅಲ್ಲದೇ, ನಿಧನರಾದಾಗ, ಅಮೆ, ಸೂತಕ ಬಂದಾಗ, ಸತ್ತವರ ಮನೆಗೆ ಭೇಟಿ ಕೊಡುವಾಗ, ಹೀಗೆ ಹಲವು ವೇಳೆ ದೇವರ ಚಿತ್ರವಿರುವ ಲಾಕೇಟ್ ಧರಿಸುವಂತಿಲ್ಲ. ಇಂಥ ಲಾಕೇಟ್ ಧರಿಸುವಾಗ ಶುದ್ಧತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ದೇವರ ಲಾಕೇಟ್ ಧರಿಸುವುದೆಂದರೆ, ದೇವರನ್ನು ನಮ್ಮೊಂದಿಗೆ ಹೊತ್ತು ತಿರುಗುವುದು. ಹಾಗಾಗಿ ಅದನ್ನು ಬೇಕಾಬಿಟ್ಟಿಯಾಗಿ ಧರಿಸುವಂತಿಲ್ಲ. ಅದರ ಬದಲು ನೀವು ದೇವರ ಚಿತ್ರವಿರುವ ಲಾಕೇಟ್ ಧರಿಸದಿರುವುದೇ ಉತ್ತಮ.