Health Tips: ಇಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳು ಶಾಲೆಗೆ ಹೋಗುವ ತನಕ ಬೇಬಿ ಸಿಟ್ಟಿಂಗ್‌ನಲ್ಲಿ ಬೆಳೆಯುತ್ತಾರೆ. ಶಾಲೆಗೆ ಹೋಗಲು ಶುರುವಾಗಿ ಕೆಲ ವರ್ಷಗಳು ಕಳೆದ ಬಳಿಕ, ಹಾಸ್ಟೇಲ್‌ನಲ್ಲಿ ಬೆಳೆಯುತ್ತದೆ. ಹೀಗೆ ಬೆಳೆದು ದೊಡ್ಡವರಾದ ಬಳಿಕ, ಕೆಲಸ, ವಿವಾಹ. ಇನ್ನು ಅವರಿಗೆ ಮಕ್ಕಳಾದ ಬಳಿಕವೂ ಇದೇ ಪಾಡು. ಹಾಗಂತ ಎಲ್ಲ ಮಕ್ಕಳೂ ಹೀಗೆ ಬೆಳೆಯುವುದಿಲ್ಲ. ಕೆಲ ಮಕ್ಕಳು ಅಜ್ಜ-ಅಜ್ಜಿಯರೊಂದಿಗೂ ಇರುತ್ತಾರೆ. ಅವರೊಂದಿಗಿದ್ದು ಜೀವನ ಪಾಠ ಕಲಿತು ಬೆಳೆಯುತ್ತಾರೆ. ಹಾಗಾದ್ರೆ ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಇರಬೇಕು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ..
ಮೊದಲಿನ ಮಕ್ಕಳೆಲ್ಲ ಚೂಟಿಯಾಗಿ, ಬುದ್ಧಿವಂತರಾಗಿ, ತಮ್ಮ ಧರ್ಮದ ಪದ್ಧತಿಯನ್ನು ಚೆನ್ನಾಗಿ ಕಲಿತಿರುತ್ತಿದ್ದರು. ಮಕ್ಕಳು ವಿದ್ಯೆಯಲ್ಲಿ ಹುಷಾರಿಲ್ಲದಿದ್ದರೂ, ಅವರಿಗೆ ಮನೆಗೆಲಸ, ಪೂಜೆ ಪುನಸ್ಕಾರ, ಉತ್ತಮ ಗುಣ, ನಡುವಳಿಕೆಯ ಬಗ್ಗೆ ತಿಳುವಳಿಕೆ ಇತ್ತು. ಆದರೆ ಇಂದಿನ ಮಕ್ಕಳಿಗೆ, ಹಿರಿಯರಿಗೆ ಹೇಗೆ ಗೌರವ ತೋರಿಸಬೇಕು ಅನ್ನೋದೇ ಗೊತ್ತಿಲ್ಲ. ಇದಕ್ಕೆ ಕಾರಣ, ಅಪ್ಪ- ಅಮ್ಮ ಇಬ್ಬರೂ ಕೆಲಸದಲ್ಲಿ ಬ್ಯುಸಿ, ಮಗು ಟಿವಿ- ಮೊಬೈಲ್‌ನಲ್ಲಿ ಬ್ಯುಸಿ. ಹಾಗಾಗಿ ಮಕ್ಕಳಿಗೆ ಮೊಬೈಲ್, ಟಿವಿ ಪ್ರೊಗ್ರ್ಯಾಮ್ ಬಗ್ಗೆ ತಿಳುವಳಿಕೆ ಇರುವಷ್ಟು ಪೂಜೆ ಪುನಸ್ಕಾರ, ಗೌರವ ನೀಡುವುದರ ಬಗ್ಗೆ ಇಲ್ಲ.
ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಬೆಳೆಯಬೇಕು. ಹಾಗಂತ ಅಪ್ಪ ಅಮ್ಮ ಎಲ್ಲ ಭಾರವನ್ನೂ ಅಜ್ಜ-ಅಜ್ಜಿ ತಲೆಗೆ ಕಟ್ಟಿ ಹೋಗುವುದಲ್ಲ., ಬದಲಾಗಿ, ಆ ಮಗುವಿನೊಂದಿಗೆ ಅಪ್ಪ- ಅಮ್ಮ, ಅಜ್ಜ- ಅಜ್ಜಿ ಎಲ್ಲರೂ ಇರಬೇಕು. ಆಗ ಕೊಂಚ ಹೊತ್ತು ಮಕ್ಕಳು ಅಪ್ಪ- ಅಮ್ಮನೊಂದಿಗೆ, ಕೊಂಚ ಹೊತ್ತು ಅಜ್ಜ- ಅಜ್ಜಿಯೊಂದಿಗೆ ಇರುತ್ತದೆ. ಆಗ ಎಲ್ಲರಿಗೂ ಅಷ್ಟು ಕಿರಿ ಕಿರಿ ಅನ್ನಿಸುವುದಿಲ್ಲ.
ಅಜ್ಜ- ಅಜ್ಜಿ ಮಕ್ಕಳೊಂದಿಗೆ ಇರುವುದರಿಂದ ಅವರಿಗೆ ತಮ್ಮ ಅನುಭವದ ಮೂಲಕ, ಜೀವನ ಪಾಠವನ್ನು ಹೇಳಿಕೊಡುತ್ತಾರೆ. ಅಪ್ಪ- ಅಮ್ಮನಿಗಿಂತ ಹೆಚ್ಚು ಅನುಭವವುಳ್ಳ ಅಜ್ಜ- ಅಜ್ಜಿ, ಮಕ್ಕಳಿಗೆ ಗೌರವ ಕೊಡುವುದು, ಸರಿಯಾಗಿ ಕುಳಿತು ಊಟ- ತಿಂಡಿ ಮಾಡುವುದು, ಮಗು ಸ್ವಾಭಿಮಾನಿಯಾಗಿ ಬೆಳೆಯುವುದನ್ನು ಕಲಿಸುತ್ತಾರೆ. ಅಲ್ಲದೇ, ಮಕ್ಕಳು ಮಾಡುವ ರಂಪಾಟ ನೋಡಿ ಅಪ್ಪ- ಅಮ್ಮನಿಗೆ ಕೋಪ ಬರುತ್ತದೆ. ಕೆಲವೊಮ್ಮೆ ಬೈಯ್ಯಬಹುದು, ಹೊಡೆಯಬಹುದು.
ಆದರೆ ಅಜ್ಜ –ಅಜ್ಜಿ ಹಾಗಲ್ಲ, ಅವರು ಮೊಮ್ಮಕ್ಕಳಿಗೆ ತಾಳ್ಮೆಯಿಂದ ತಪ್ಪು ತಿದ್ದಿ ಹೇಳುತ್ತಾರೆ. ಬೈಯ್ಯುವ ಬಡಿಯುವ ಸಮಯ ಬಂದಾಗ, ಪ್ರೀತಿಯಿಂದ ಗದರಿ ಬುದ್ಧಿ ಕಲಿಸುತ್ತಾರೆ. ಹಾಗಾಗಿಯೇ ಮಕ್ಕಳಿಗೆ ಅಪ್ಪ- ಅಮ್ಮನಿಗಿಂತ, ಅಜ್ಜ- ಅಜ್ಜಿ ಎಂದರೆ ಬಲು ಪ್ರೀತಿ.
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?