Friday, October 18, 2024

Latest Posts

ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ಹೇಳುವುದ್ಯಾಕೆ ಗೊತ್ತಾ..?

- Advertisement -

Spiritula Story: ಮನೆಯ ಎದುರು ತೋಟ. ಆ ತೋಟದಲ್ಲಿ ಅಡಿಗೆ, ತೆಂಗು, ಬಾಳೆ, ತರಕಾರಿ, ಹೂವಿನ ಗಿಡ ಮರಗಳಿದ್ದರೆ ಅದೆಷ್ಟು ಚೆಂದವಾಗಿರುತ್ತದೆ. ಅರಳಿ ಮರ ಕೂಡ ಸುಂದರವಾಗಿ ಕಾಣುವ ಗಿಡ. ಜನ ಭಕ್ತಿಯಿಂದ ಇದರ ಸುತ್ತ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇದು ಉತ್ತಮ ಆಮ್ಲಜನಕ ನೀಡುವ ಮರರವಾಗಿದೆ. ಆದರೆ ಮನೆ ಬಳಿ ಮಾತ್ರ ಅರಳಿಮರ ಇರಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ಯಾಕೆ ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ, ಅರಳಿ ಮರರದ ಬೇರು ದೊಡ್ಡದಾಗಿ ಬೆಳೆಯುತ್ತದೆ. ಎಷ್ಟು ದೊಡ್ಡದೆಂದರೆ, ಅರಳಿ ಮರದ ಅಕ್ಕಪಕ್ಕದಲ್ಲಿ ಮನೆ ಇದ್ದರೆ, ಆ ಮನೆಯ ಅಡಿಪಾಯಕ್ಕೆ ಪೆಟ್ಟು ಬಿದ್ದು, ಮನೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅರಳಿ ಮರವನ್ನು ಮನೆಯ ಬಳಿ ನೆಡುವುದಿಲ್ಲ.

ಎರಡನೇಯ ಕಾರಣ, ಇದು ನಕಾರಾತ್ಮಕ ಶಕ್ತಿಯನ್ನ ಕೂಡ ಹರಡುತ್ತದೆ ಅಂತಾ ಹೇಳಲಾಗಿದೆ. ಅರಳಿಮರ ಮನೆಯ ಹತ್ತಿರವಿದ್ದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ, ಮನೆಯಲ್ಲಿ ಪದೇ ಪದೇ ಮನಸ್ತಾಪಗಳಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಮನೆಯ ಬಳಿ ಅರಳಿಮರ ನೆಡುವುದಿಲ್ಲ.

ಮೂರನೇಯ ಕಾರಣ, ಇದು ಆಮ್ಲಜನಕ ನೀಡುತ್ತದೆ. ಮಕ್ಕಳಾಗದವರು ಅರಳಿ ಮರಕ್ಕೆ ಶುಕ್ರವಾರದಂದು ಪ್ರದಕ್ಷಿಣೆ ಹಾಕಿ ಬರಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಸಿಗುವ ಆಮ್ಲಜನಕ ಆಕೆಯ ಸಂತಾನಶಕ್ತಿಯನ್ನು ಉತ್ತಮಗೊಳಿಸುತ್ತದೆ. ಹಾಗಾಗಿ ಅರಳಿಮರ ಸುತ್ತುವ ಸಲಹೆ ನೀಡುತ್ತಾರೆ. ಇನ್ನು ಅರಳಿಮರ 24 ಗಂಟೆಯೂ ಆಮ್ಲಜನಕ ನೀಡುತ್ತದೆ. ಮತ್ತು ಮನುಷ್ಯನ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ಸಿಕ್ಕರೂ, ಅದು ಅವನ ಜೀವಕ್ಕೆ ಕುತ್ತು ತರುತ್ತದೆ. ಹಾಗಾಗಿ ಮನೆಯ ಬಳಿ ಅರಳಿಮರ ನೆಡುವುದಿಲ್ಲ.

ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?

ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?

- Advertisement -

Latest Posts

Don't Miss