Spiritual News: ಹಿಂದೂ ಧರ್ಮದಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವುದು ಮುಖ್ಯವಾದ ಪದ್ಧತಿ. ಹಿರಿಯರ ಆಶೀರ್ವಾದವಿದ್ದರೆ, ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ನಾವು ಯಾಕೆ ಹಿರಿಯರ ಕಾಲಿಗೆರಗಿ ನಮಸ್ಕರಿಸಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾವು ಹಿರಿಯ ಕಾಲಿಗೆರಗಿ ನಮಸ್ಕಾರ ಮಾಡಿದಾಗ, ಸಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಯೋಚನೆಗಳು ದೂರಾಗಲು ಇದು ಸಹಕಾರಿಯಾಗಿದೆ. ಇನ್ನು ನಾವು ಹಿರಿಯರ ಕಾಲಿಗೆರಗಿದಾಗ, ನಮ್ಮಲ್ಲಿರುವ ಅಹಂಕಾರ ದೂರಾಗುತ್ತದೆ. ವಿನಯತೆ ನಮ್ಮನ್ನಾವರಿಸುತ್ತದೆ. ಅಲ್ಲದೇ, ಹಿರಿಯರ ಆಶೀರ್ವಾದದಿಂದ ನಮ್ಮ ಎಲ್ಲ ಕೆಲಸಗಳು ಪರಿಪೂರ್ಣವಾಗುತ್ತದೆ. ನಮಗೆ ಯಶಸ್ಸು ಸಿಗುತ್ತದೆ ಅನ್ನೋ ನಬಿಕೆ ಇದೆ. ಅಲ್ಲದೇ, ಆಶೀರ್ವಾದ ಪಡೆದರೂ, ನಿಮ್ಮ ಕೆಲಸವಾಗದಿದ್ದಲ್ಲಿ, ಅಲ್ಲಿ ನಿಮಗೆ ತೊಂದರೆಯಾಗುವಂಥದ್ದು ಏನೋ ಕಾರಣವಿರುವ ಸಲುವಾಗಿ ಹಾಗಾಗಿರುತ್ತದೆ. ಹಾಗಾಗಿ ಹಿರಿಯರ ಆಶೀರ್ವಾದ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಜೀವನವನ್ನು ಬೆಳಗುತ್ತದೆ.
ಇನ್ನು ಇಂದಿನ ಕಾಲದ ಮಕ್ಕಳು, ಹಿರಿಯರ ಕಾಲಿಗೆ ಬೀಳುವುದೆಂದರೆ, ಹರಕೆ ತೀರಿಸಿದ ರೀತಿ, ಅರ್ಧಂಬರ್ಧ ಬಗ್ಗಿ ನಮಸ್ಕರಿಸುತ್ತಾರೆ. ಆದರೆ ಹಿರಿಯರಿಗೆ ಸಂಪೂರ್ಣವಾಗಿ ಬಗ್ಗಿ, ತಲೆ ಬಾಗಿ ನಮಸ್ಕರಿಸಬೇಕು. ಆಗಲೇ ಆ ನಮಸ್ಕಾರ ಮತ್ತು ಆಶೀರ್ವಾದಕ್ಕೊಂದು ಅರ್ಥವಿರುತ್ತದೆ. ಅಲ್ಲದೇ, ಅದೇ ಸಂಸ್ಕಾರವಾಗಿದೆ.