Tuesday, March 11, 2025

Latest Posts

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

- Advertisement -

Health Tips: ಅವನು ನೋಡು ಎಷ್ಟು ಚೆನ್ನಾಗಿ ಓದಿ, ರ್ಯಾಂಕ್ ಬಂದಿದ್ದಾನೆ. ನೀನು ಇದ್ದಿಯಾ, ದಡ್ಡ. ಇದು ಕಾಮನ್ ಆಗಿ ಹಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊಂದಾಣಿಕೆ ಮಾಡುವ ರೀತಿ. ಆದರೆ ಇದೇ ಮಾತು ಕೆಲವು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದಾರೆ.

ನಾವು ನಮ್ಮನ್ನು ಅಥವಾ ಇತರರನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿದಾಗ, ನಾವೆಂದೂ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅದು ನಮ್ಮತನವನ್ನು ನಾವು ಬಿಟ್ಟುಕೊಟ್ಟ ಹಾಗಿರುತ್ತದೆ. ಅಲ್ಲದೇ, ಹೋಲಿಕೆ ಮಾಡುವವರು ಎಂದಿಗೂ ಉದ್ಧಾರವಾಗುವವರೂ ಅಲ್ಲ. ಶ್ರೀಮಂತರೊಂದಿಗೆ ಬಡವನನ್ನು, ಸುಂದರವಾಗಿರುವವರೊಂದಿಗೆ ಕುರೂಪಿಯಾಗಿರುವವರನ್ನು, ಬುದ್ಧಿವಂತರೊಂದಿಗೆ ದಡ್ಡರನ್ನು ಹೋಲಿಕೆ ಮಾಡಲಾಗುತ್ತದೆ.

ಆದರೆ ನಾವು ನಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡಾಗ, ಮಾನಸಿಕ ಶಕ್ತಿ ಕುಗ್ಗುವಂತೆ ಮಾಡುತ್ತದೆ. ಆದ್ದರಿಂದ ನಮ್ಮನ್ನು ನಾವು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಅಲ್ಲದೇ, ನೀವು ಸದಾ ಬ್ಯುಸಿಯಾಗಿದ್ದಾಗ, ಅಂಥ ಯೋಚನೆ ಬರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೆಲಸ, ಮಾತುಕತೆ, ಹಾಡು ಕೇಳುವುದು, ಯೋಗ, ವ್ಯಾಯಾಮ ಸೇರಿ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..

ಎಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಗೊತ್ತೇ..?

- Advertisement -

Latest Posts

Don't Miss