Spiritual: ಹಲವರು ಬೆಳಿಗ್ಗೆ ಬೆಳಿಗ್ಗೆ ಎದ್ದು, ಮೊಬೈಲ್ ನೋಡುತ್ತ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಏಳುತ್ತಿದ್ದಂತೆ ಕನ್ನಡಿ ನೋಡಿ, ಶೋಕಿ ಮಾಡೋಕ್ಕೆ ಶುರು ಮಾಡುತ್ತಾರೆ. ಇಂಥ ಕೆಲಸಗಳಿಂದಲೇ, ಅವರಿಗೆ ದಿನಾ ಮೂಡ್ ಹಾಳಾಗುತ್ತದೆ. ಲಕ್ ಅನ್ನೋದು ಜೀವನದಿಂದಲೇ ದಿಕ್ಕಾಪಾಲಾಗಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಅಂಗೈ ನೋಡಿ, ಶ್ಲೋಕ ಹೇಳಬೇಕು ಅಂತಾ ಹೇಳೋದು. ಹಾಗಾದ್ರೆ ಯಾಕೆ ಅಂಗೈ ನೋಡಿಕೊಳ್ಳಬೇಕು..? ಯಾವ ಶ್ಲೋಕ ಹೇಳಬೇಕು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ ಎದ್ದ ತಕ್ಷಣ, ಈ ಶ್ಲೋಕವನ್ನು ಹೇಳಬೇಕು.
ಕರಾಗ್ರೆ ವಸತೇ ಲಕ್ಷ್ಮೀ
ಕರಮಧ್ಯೆ ಸರಸ್ವತಿ
ಕರಮೂಲೇತು ಸ್ಥಿತಾ ಗೌರಿ
ಪ್ರಭಾತೇ ಕರ ದರ್ಶನಂ
ನಿಮ್ಮ ಅಂಗೈ ನೋಡಿಕೊಂಡು, ಈ ಶ್ಲೋಕವನ್ನು ಹೇಳಬೇಕು. ಬಳಿಕವೇ ನೀವು ನಿಮ್ಮ ಕೆಲಸವನ್ನು ಮಾಡಬೇಕು. ಹೀಗೆ ಮಾಡಿದಾಗ, ನಿಮ್ಮ ದಿನ ಉತ್ತಮವಾಗಿರುತ್ತದೆ. ಅಲ್ಲದೇ, ನಿದ್ರಿಸಿ ಏಳುವಾಗ ಬಲ ಮಗ್ಗುಲಿನಿಂದ ಏಳಬೇಕು. ಆಗ ದಿನ ಇನ್ನೂ ಉತ್ತಮವಾಗಿರುತ್ತದೆ. ಏಕೆಂದರೆ ಯಾರು ಎಡ ಮಗ್ಗುಲಿನಿಂದ ಏಳುತ್ತಾರೋ, ಅವರ ದಿನ ಚೆನ್ನಾಗಿರುವುದಿಲ್ಲ. ಆರೋಗ್ಯದಲ್ಲೇ ಏರುಪೇರು, ಮಾನಸಿಕ ತೊಂದರೆ, ಬೈಗುಳ ತಿನ್ನುವುದು ಹೀಗೆ ಮನಸ್ಸಿಗೆ ಬೇಸರ ಪಡಿಸುವ ದಿನವಾಗಿರುತ್ತದೆ. ಹಾಗಾಗಿ ಏಳುವಾಗಲೂ ನೀವು ಬಲ ಮಗ್ಗುಲಿನಿಂದ ಏಳಬೇಕು.
ಇನ್ನು ನಾವಿಲ್ಲಿ ಹೇಳಿರುವ ಶ್ಲೋಕದ ಅರ್ಥವೇನೆಂದರೆ, ಕರ ಅಂದರೆ ಅಂಗೈ. ಅಂಗೈ ಅಗ್ರ ಭಾಗದಲ್ಲಿ, ಅಂದರೆ ಮೇಲ್ಭಾಗದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ. ಅಂಗೈನ ಮಧ್ಯ ಭಾಗದಲ್ಲಿ ಸರಸ್ವತಿ ನೆಲೆಸಿದ್ದಾಳೆ. ಅಂಗೈ ಮೂಲೆಯಲ್ಲಿ ಗೌರಿ ನೆಲೆಸಿದ್ದಾಳೆ. ಮುಂಜಾನೆ ನಮ್ಮ ಅಂಗೈ ನೋಡುವ ಮೂಲಕ, ನಾವು ಈ ದೇವಿಯರ ದರ್ಶನ ಮಾಡಿದ್ದೇವೆ ಎಂಬುದೇ ಇದರ ಅರ್ಥ. ಹಾಗಾಗಿ ಅಂಗೈ ನೋಡಿ ಶ್ಲೋಕ ಹೇಳುವುದು ಶುಭದಾಯಕವಾಗಿದೆ.
ಇನ್ನು ಈ ಮೊದಲೇ ಹೇಳಿದಂತೆ ಕೆಲವರಿಗೆ ಎದ್ದ ತಕ್ಷಣ ಕನ್ನಡಿ ನೋಡಿಕೊಳ್ಳುವ ಚಟವಿರುತ್ತದೆ. ಅಂಥವರ ದಿನವೂ ಅಷ್ಟು ಉತ್ತಮವಾಗಿರುವುದಿಲ್ಲ. ಹಾಗಾಗಿ ಮುಖ ತೊಳೆದ ಬಳಿಕವೇ, ದೇವರಿಗೆ ನಮಸ್ಕರಿಸಿ, ಕನ್ನಡಿ ನೋಡಿ..
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ
ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..