Health Tips: ಗರ್ಭಿಣಿಯಾಗಿದ್ದಾಗ ಮೂರು ತಿಂಗಳು ವಾಕಿಂಗ್, ಜಾಗಿಂಗ್ ಏನು ಮಾಡದಿದ್ದರೂ, ಮೂರು ತಿಂಗಳು ತುಂಬಿದ ಬಳಿಕ, ವಾಕಿಂಗ್ ಮಾಡುವುದು, ಉತ್ತಮ ಆಹಾರ ಸೇವನೆ ಬಗ್ಗೆ, ಯೋಗ, ವ್ಯಾಯಾಮದ ಬಗ್ಗೆ ಖಂಡಿಯವಾಗಿಯೂ ಗಮನ ಕೊಡಬೇಕು. ನಾವಿಂದು ಗರ್ಭಿಣಿಯರು ಯಾಕೆ ವಾಕಿಂಗ್ ಮಾಡಬೇಕು ಎಂದು ಹೇಳಲಿದ್ದೇವೆ.
ನೀವು ಮದುವೆಗೂ ಮುನ್ನ ಹೇಗೆ ಕಡಿಮೆ ತೂಕ ಹೊಂದಿದ್ದು, ಸುಂದರವಾಗಿದ್ದರೋ, ಅದೇ ರೀತಿ ಮಗುವಾದ ಮೇಲೂ ನಿಮಗೆ ಅಂಥದ್ದೇ ಫಿಟ್ ಆ್ಯಂಡ್ ಫೈನ್ ದೇಹ ಬೇಕಾಗಿದ್ದಲ್ಲಿ, ನೀವು ಗರ್ಭಿಣಿಯಾಗಿದ್ದಾಗ, ವಾಕಿಂಗ್ ಮಾಡಲೇಬೇಕು. ಮೊದಲ ಮೂರು ತಿಂಗಳು ವಾಕಿಂಗ್, ವ್ಯಾಯಾಮ ಮಾಡುವ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯಿರಿ. ಮಗು ಸೆನ್ಸಿಟಿವ್ ಇದ್ದಲ್ಲಿ, ಬ್ಲೀಡಿಂಗ್ ಆಗುತ್ತಿದ್ದಲ್ಲಿ, ವಾಕಿಂಗ್, ಜಾಗಿಂಗ್ ವ್ಯಾಯಾಮವೆಲ್ಲ ಮಾಡಬಾರದು. ಹಾಗಾಗಿ ವೈದ್ಯರ ಸಲಹೆಯ ಮೇರೆಗೆ ವಾಕಿಂಗ್ ಮಾಡಿ.
ಆದರೆ ಮೂರು ತಿಂಗಳು ತುಂಬಿದ ಬಳಿಕ ನೀವು ಪ್ರತಿದಿನ ಕೊಂಚ ಹೊತ್ತಾದರೂ ವಾಕಿಂಗ್ ಮಾಡಬೇಕು. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮಗು ಚುರುಕಾಗಿರುತ್ತದೆ. ಅಲ್ಲದೇ ಶುಗರ್ ಬರುವುದನ್ನು ಕೂಡ ನೀವು ತಪ್ಪಿಸಬಹುದು. ನಿಮ್ಮ ದೇಹದ ತೂಕ ಕೂಡ ಸಮತೋಲನದಲ್ಲಿರುತ್ತದೆ. ಹಾಗಾಗಿ ಪ್ರತಿದಿನ ವಾಕಿಂಗ್ ಮಾಡುವುದು ತುಂಬಾ ಮುಖ್ಯ.
ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣಿಗೆ ಹಲವಾರು ಆರೋಗ್ಯ ಸಮಸ್ಯೆ, ಮಾನಸಿಕ ಒತ್ತಡವಿರುತ್ತದೆ. ಅದನ್ನು ಸರಿಪಡಿಸಲು ನೀವು ವಾಕಿಂಗ್ ಮಾಡಬೇಕು. ನಿಮ್ಮೊಡನೆ ಯಾರನ್ನಾದರೂ ವಾಕಿಂಗ್ ಕರೆದುಕೊಂಡು ಹೋಗಿ. ಅವರೊಂದಿಗೆ ಹರಟೆ ಹೊಡೆಯಿರಿ. ಅಥವಾ ಮ್ಯೂಸಿಕ್ ಕೇಳುತ್ತ ವಾಕಿಂಗ್ ಮಾಡಿ. ಹಲವರಿಗೆ ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ ಇರುತ್ತದೆ. ಅಂಥವರು ವಾಕಿಂಗ್ ಮಾಡಿದರೆ, ಆ ಸಮಸ್ಯೆ ಸರಿಯಾಗುತ್ತದೆ.




