Health Tips: ಕೆಲವರಿಗೆ ತಂಬಾಕು ತಿನ್ನುವ ಚಟವಿರುತ್ತದೆ. ಆ ಚಟದಿಂದ ಏನಾಗಬಹುದು ಅನ್ನುವುದನ್ನು ನೀವು ಸಿನಿಮಾ ಥಿಯೇಟರ್‌ಗಳಲ್ಲಿ ನೋಡಿರುತ್ತೀರಿ. ಅಲ್ಲಿ ಬರುವ ಜಾಹೀರಾತಿನಲ್ಲಿ ಓರ್ವ ಮಹಿಳೆ ತಂಬಾಕಿನ ಸೇವನೆ ಮಾಡಿ, ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪುತ್ತಾಳೆ. ಹಾಗಾಗಿ ತಂಬಾಕಿನ ಸೇವನೆ ಅತ್ಯಂತ ಹಾನಿಕಾರಕ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾಕೆ ತಂಬಾಕಿನ ಸೇವನೆ ಮಾಡಬಾರದು ಅನ್ನೋ ಬಗ್ಗೆ ಡಾ.ಭೀಮ್‌ಸೇನ್ ರಾವ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ತಂಬಾಕಿನ ಎಲೆಯಲ್ಲಿ 5 ಸಾವಿರ ಕೆಮಿಕಲ್ಸ್ ಇರುತ್ತದೆ. ಹಾಗಾಗಿಯೇ ತಂಬಾಕಿನ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಕೆಲವರು ತಂಬಾಕಿನ ಸೇವನೆ ಮಾಡಿ, ಕೊಂಚ ಹೊತ್ತಿಗೆ ಉಗಿಯುತ್ತಾರೆ. ಇನ್ನು ಕೆಲವರು ತಂಬಾಕಿನಿಂದಲೇ ಹಲ್ಲುಜ್ಜುತ್ತಾರೆ. ಮತ್ತೆ ಕೆಲವರು ತಂಬಾಕನ್ನು ಪೂರ್ತಿಯಾಗಿ ಸೇವಿಸುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರಕವೇ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
ಇನ್ನು ನಿಮೋನಿಯಾ ಬಗ್ಗೆಯೂ ವೈದ್ಯರು ಮಾತನಾಡಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ನಿಮೋನಿಯಾ ಬರುವ ಸಾಧ್ಯತೆ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ನೆಗಡಿ, ಕೆಮ್ಮು, ಜ್ವರ ಹರಡುತ್ತದೆ. ಈ ಜ್ವರವೇ, ನಿಮೋನಿಯಾ ಆಗಿ ಮಾರ್ಪಾಡಾಗುತ್ತದೆ. ಹಾಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ತುಂಬಾ ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದ್ದಲ್ಲಿ, ಈ ವೀಡಿಯೋ ನೋಡಿ..
ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..