Health Tips: ಎಲ್ಲ ಹೆಣ್ಣು ಮಕ್ಕಳಿಗೂ ಮುಟ್ಟಿನ ದಿನಗಳು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಮುಟ್ಟು ಬಂದಿದ್ದು ಗೊತ್ತೇ ಆಗುವುದಿಲ್ಲ. ಇನ್ನು ಕೆಲವರಿಗೆ ಮುಟ್ಟಿನ ದಿನಗಳು ಅಂದ್ರೆ ನರಕ. ಯಾಕಾದ್ರೂ ಹೆಣ್ಣಾಗಿ ಹುಟ್ಟಿದ್ನೋ.. ಗಂಡಾಗಿ ಹುಟ್ಟಿದ್ರೆ ಚೆನ್ನಾಗಿರೋದು ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಇಂಥ ಪರಿಸ್ಥಿತಿಗೆ ಕಾರಣ, ಆ ಸಮಯದಲ್ಲಿ ಬರುವ ಹೊಟ್ಟೆನೋವು. ಹಾಗಾದ್ರೆ ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವು ಯಾಕಾಗತ್ತೆ ಅಂತಾ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಚಂದ್ರಿಕಾ ಅವರು ಮುಟ್ಟಿನ ಹೊಟ್ಟೆನೋವು ಯಾಕೆ ಕಾಣಿಸಿಕೊಳ್ಳುತ್ತದೆ ಅಂತಾ ವಿವರಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ಬರುವ ಹೊಟ್ಟೆನೋವು ಅಂದ್ರೆ, ಮೊದಲ ದಿನವಷ್ಟೇ ಕಾಡುವ ಹೊಟ್ಟೆನೋವು. ಮದುವೆಯಾಗಿ ಮೊದಲ ಮಗು ನಾರ್ಮಲ್ ಡಿಲೆವರಿ ಆದ್ರೆ, ಮುಂದಿನ ಮುಟ್ಟಿಗೆ ಹೊಟ್ಟೆನೋವು ಇರುವುದಿಲ್ಲ.
ಇಂಥ ಹೊಟ್ಟೆನೋವು ಇದ್ದಾಗ, ಚೆನ್ನಾಗಿ ನೀರು ಕುಡಿಯಬೇಕು. ಹೊಟ್ಟೆಯ ಮೇಲೆ ಹಾಟ್ ವಾಟರ್ ಬ್ಯಾಗ್ ಇರಿಸಿಕೊಳ್ಳಬೇಕು. ಇನ್ನು ಹೆಚ್ಟು ಹೊಟ್ಟೆನೋವಿದ್ದಾಗ, ತಿಂಗಳಿಗೆ 1 ಪೇನ್ ಕಿಲ್ಲರ್ ಗುಳಿಗೆ ತೆಗೆದುಕೊಂಡರೆ ತೊಂದರೆ ಇಲ್ಲ ಅಂತಾರೆ ವೈದ್ಯರು.
ಇನ್ನು ಕೆಲವರಿಗೆ ತಿಂಗಳ 15 ದಿನಗಳು ಕೂಡ ಹೊಟ್ಟೆ ನೋವಿರುತ್ತದೆ. ದೇಹದ ಒಳಗೆ ಇನ್‌ಫೆಕ್ಷನ್ ಆದಾಗಲೂ ಇಂಥ ಹೊಟ್ಟೆನೋವು ಬರುತ್ತದೆ. ಹಾಗಾಗಿ ಈ ರೀತಿ ಮುಟ್ಟಿನ ಹೊಟ್ಟೆನೋವು ಬಂದಾಗ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..