Health tips: ಓರ್ವ ಹೆಣ್ಣು ಗರ್ಭಿಣಿಯಾದಾಗಿನಿಂದ, ಆಕೆ ಮಗುವನ್ನು ಹೆತ್ತು, ಆ ಮಗು ದೊಡ್ಡದಾಗುವವರೆಗೂ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಕಡಿಮೆಯೇ. ಅದರಲ್ಲೂ ಮಗು ಹುಟ್ಟಿದಾಗಿನಿಂದ ಅದಕ್ಕೆ ಆರು ತಿಂಗಳವಾಗುವವರೆಗೂ, ಅದರ ಆಹಾರ ಕ್ರಮ ಸರಿಯಾಗಿ ಇರಬೇಕು. ಇಲ್ಲವಾದಲ್ಲಿ, ಮಗುವಿನ ಭವಿಷ್ಯ ಅನಾರೋಗ್ಯದಿಂದ ಕೂಡಿರುತ್ತದೆ. ವೈದ್ಯರು ಹೇಳುವ ಪ್ರಕಾರ, ಮಗುವಿಗೆ 6 ತಿಂಗಳಾಗುವವರೆಗೂ ತಾಯಿಯ ಎದೆ ಹಾಲು ಬಿಟ್ಟು, ಮತ್ತೇನೂ ನೀಡಬಾರದಂತೆ. ನೀರು ಸಹ ನೀಡಬಾರದಂತೆ. ಈ ಬಗ್ಗೆ ವೈದ್ಯರು ಇನ್ನೂ ಏನೇನು ವಿವರಿಸಿದ್ದಾರೆಂದು ತಿಳಿಯೋಣ ಬನ್ನಿ..
ಮಗು ಹುಟ್ಟಿದಾಗಿನಿಂದ ಅದಕ್ಕೆ 6 ತಿಂಗಳು ಆಗುವವರೆಗೂ ಅದಕ್ಕೆ, ತಾಯಿಯ ಎದೆ ಹಾಲು ಬಿಟ್ಟು, ಬೇರೇನೂ ಕುಡಿಯುವ ಅಗತ್ಯವೇ ಇಲ್ಲ. ಅವಶ್ಯಕತೆಯೂ ಇಲ್ಲ. ನೀರನ್ನೂ ಯಾಕೆ ಕುಡಿಸಬಾರದು ಅಂದ್ರೆ, ನಾವು ನೀರನ್ನು ಎಷ್ಟೇ ಕುದಿಸಿ, ಆರಿಸಿ, ಕೊಟ್ಟರೂ, ಒಂದಲ್ಲ ಒಂದು ರೀತಿಯಿಂದ ಬ್ಯಾಕ್ಟೀರಿಯಾ ಆ ಮಗುವಿನ ದೇಹ ಸೇರುತ್ತದೆ. ಮತ್ತು ಪುಟ್ಟ ಮಕ್ಕಳಿಗೆ ಅದರಿಂದ ಬೇಗ ಸೈಡ್ ಎಫೆಕ್ಟ್ ಆಗುತ್ತದೆ.
ಆದರೆ ತಾಯಿಯ ಎದೆ ಹಾಲಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ. ಅದು ತಾಯಿಯ ದೇಹದಲ್ಲಿಯೇ ತಯಾರಾಗುತ್ತದೆ. ಅದು ಅಮೃತಕ್ಕೆ ಸಮಾನವಾಗಿರುತ್ತದೆ. ಹಾಗಾಗಿ ಮಗುವಿಗೆ 6 ತಿಂಗಳು ತುಂಬುವವರೆಗೂ, ಎದೆ ಹಾಲನ್ನು ಬಿಟ್ಟು, ಮತ್ತೇನನ್ನೂ ಕುಡಿಯಬಾರದು ಎಂದು ಹೇಳುತ್ತಾರೆ. ಇನ್ನು ಕೆಲವರು ಸೆರೆಲ್ಯಾಕ್, ಉಡ್‌ವರ್ಡ್ಸ್ ಕುಡಿಸಬಹುದಾ ಎಂದು ಕೇಳುತ್ತಾರೆ. ಅದು ಅನಿವಾರ್ಯವಾಗಿದ್ದಾಗ, ವೈದ್ಯರ ಸಲಹೆ ಪಡೆದು, ಕುಡಿಯಬೇಕು.
ತಾಯಿಗೆ ಯಾವುದೇ ಕಾರಣಕ್ಕೂ ಎದೆ ಹಾಲು ಕುಡಿಸಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಮಾತ್ರ, ಈ ರೀತಿ ಹಾಲನ್ನು ನೀವು ಕುಡಿಸಬಹುದು. ವೈದ್ಯರು ಹೇಳುವ ಪ್ರಕಾರ, ಮಗುವಿಗೆ ತಾಯಿಯ ಹಾಲು ಸಿಗದಿದ್ದಾಗ, ದೇಸಿಹಸುವಿನ ಹಾಲನ್ನು ಚೆನ್ನಾಗಿ ಕ್ಲೀನ್ ಮಾಡಿ, ಕಾಯಿಸಿ,ತಣಿಸಿ ಮಗುವಿಗೆ ಕುಡಿಯಬಹುದು. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..