ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ತಿನ್ನಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Healthy tips: ಮಕ್ಕಳಿಗೆ ಒಮ್ಮೆ ನೀವು ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ರುಚಿ ತೋರಿಸಿದರೆ, ಮಕ್ಕಳು ಪದೇ ಪದೇ ಆ ಚಿಪ್ಸ್ ಬೇಕು ಎಂದು ಹಠ ಮಾಡುತ್ತಾರೆ.  ಹಲವರು ತಮ್ಮ ಮಕ್ಕಳು ಯಾವಾಗ ಏನು ಕೇಳುತ್ತಾರೋ, ಅದನ್ನೆಲ್ಲ ಕೊಡಿಸುತ್ತಾರೆ. ಅದೇ ರೀತಿ ಎಷ್ಟೋ ಮಕ್ಕಳು ಪದೇ ಪದೇ ಚಿಪ್ಸ್ ತಿಂದು, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ತಿನ್ನಬಾರದು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕಾರಣ, ಚಿಪ್ಸ್ ನಲ್ಲಿ ನಾವು ಪದೇ ಪದೇ ಸವಿಯುವಂತೆ ಮಾಡುವ ಕೆಲವು ವಸ್ತುಗಳನ್ನು ಬಳಸಲಾಗುತ್ತದೆ. ಹಾಗಾಗಿ ಚಿಪ್ಸ್ ಪ್ಯಾಕ್‌ನಲ್ಲಿರುವ ನಾಲ್ಕೇ ನಾಲ್ಕು ಚಿಪ್ಸ್ ತಿಂದ ಮೇಲೆ, ಮತ್ತೊಂದು ಚಿಪ್ಸ್ ಪ್ಯಾಕ್ ಒಡೆದು ತಿನ್ನಬೇಕು ಅಂತಾ ಅನ್ನಿಸುತ್ತದೆ. ಅದರಲ್ಲೂ ಮಕ್ಕಳನ್ನು ಸೆಳೆಯೋಕ್ಕೆ, ಕಂಪನಿಯವರು ಕಲರ್ ಕಲರ್ ಪ್ಯಾಕೇಟ್ ರೆಡಿ ಮಾಡುತ್ತಾರೆ. ತರಹೇವಾರಿ ವೆರೈಟಿ ಚಿಪ್ಸ್ ಮಾರುತ್ತಾರೆ. ಮಕ್ಕಳು ಅದಕ್ಕೆ ಮಾರುಹೋಗಿ, ಪದೇ ಪದೇ ಚಿಪ್ಸ್ ಖರೀದಿಸಿ ತಿಂದು, ರೋಗಕ್ಕೆ ತುತ್ತಾಗುತ್ತಾರೆ.

ಎರಡನೇಯ ಕಾರಣ, ಚಿಪ್ಸ್ ತಿನ್ನುವಾಗ ಕರಂಕುರುಂ ಅಂತಾ ಶಬ್ದ ಬರುತ್ತದೆ. ಆ ಶಬ್ದ ಕೆಲವರ ಕಿವಿಗೆ ಹಿತ ಕೊಡುತ್ತದೆ. ಪದೇ ಪದೇ ಆ ಶಬ್ದವನ್ನು ಕೇಳುತ್ತ, ಚಿಪ್ಸ್ ಸವಿಯಬೇಕು ಎಂದು ಅನ್ನಿಸುತ್ತದೆ. ಇದನ್ನು ಹೇಳಿದರೆ ನೀವು ನಂಬರಲಾರಿರಿ, ಆದರೆ ಇದು ಸತ್ಯ. ಈ ಕಾರಣವನ್ನು ಹಲವು ಚಿಪ್ಸ್ ಕಂಪನಿಗಳು ಕಂಡುಹಿಡಿದು, ಅವರು ಮಾರುವ ಚಿಪ್ಸ್ ಕ್ರಿಸ್ಪಿಯಾಗಿರಲು, ಅನೇಕ ಪ್ರಯೋಗಗಳನ್ನು ಮಾಡುತ್ತದೆ.

ಮೂರನೇಯ ಕಾರಣ, ನೀವು 20 ರೂಪಾಯಿಯ ಚಿಪ್ಸ್ ಖರೀದಿಸುವುದಿಲ್ಲ. ಬದಲಾಗಿ 20 ಸಾವಿರಕ್ಕೂ ಮೀರಿದ ಬೆಲೆ ತೆತ್ತು ಚಿಪ್ಸ್ ಖರೀದಸುತ್ತೀರಿ. ಈ ಮಾತು ನಿಮಗೆ ಕೋಪ ಬರಿಸಬಹುದು. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಅದೇನೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ತಿನ್ನುವ ಚಟವಿರುವವರು, ಅದರಿಂದ ಆರೋಗ್ಯ ಹಾಳು ಮಾಡಿಕೊಂಡು, ಆಸ್ಪತ್ರೆ ಸೇರಿ, ಲಕ್ಷ ಲಕ್ಷ ಬಿಲ್ ಭರಿಸಿದ್ದಾರೆ. ಹಾಗಾಗಿ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಮನೆಯಲ್ಲೇ ನಿಮಗೆ ಬೇಕಾದ ಚಿಪ್ಸ್ ಮಾಡಿಕೊಂಡು ತಿನ್ನಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

About The Author