Spiritual: ದೇಹ ಸದಾ ಘಮ ಘಮ ಎನ್ನುತ್ತಿರಲಿ ಎಂಬ ಕಾರಣಕ್ಕೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದೆ. ಆದರೆ ಹಿಂದೂ ಧರ್ಮದಲ್ಲಿ ಸುಗಂಧ ದ್ರವ್ಯವನ್ನು ನಾವು ಯಾವಾಗ ಬೇಕೋ, ಆವಾಗ ಹಾಕಿಕೊಳ್ಳುವಂತಿಲ್ಲ. ಅದರಲ್ಲೂ ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಲೇಬಾರದು. ಈ ರೀತಿ ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ನಕಾರಾತ್ಮ ಶಕ್ತಿ ಆಕರ್ಷಿತವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾದ ಕಾರಣ ಅಂದ್ರೆ, ರಾತ್ರಿ ಸುಗಂಧ ದ್ರವ್ಯ ಹಾಕಿಕೊಳ್ಳುವುದರಿಂದ ಪ್ರೇತಗಳು, ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತದೆ. ಈ ರೀತಿಯಾಗಿರುವ ಎಷ್ಟೋ ಉದಾಹರಣೆಗಳೂ ಇದೆ. ಹಾಗಾಗಿಯೇ ಕೆಲವೊಂದು ಸ್ಥಳಗಳಲ್ಲಿ ಪರ್ಫ್ಯೂಮ್ ಬಳಸಬೇಡಿ ಎಂದು ಹೇಳುತ್ತಾರೆ. ಎಷ್ಟೋ ಬಾಲಿವುಡ್ ತಾರೆಯರು, ಹಾರರ್ ಮೂವಿ ಶೂಟಿಂಗ್ ಸಮಯದಲ್ಲಿ ಪರ್ಫ್ಯೂಮ್ ಬಳಸಿ, ನಕಾರಾತ್ಮಕತೆ ಅನುಭವಿಸಿದ ಉದಾಹರಣೆಗಳೂ ಇದೆ.
ದೈಹಿಕ ಸಮಸ್ಯೆ ಉಂಟಾಗುತ್ತದೆ. ಸುಗಂಧ ದ್ರವ್ಯದ ಬಳಕೆಯಿಂದ ನಮ್ಮ ದೇಹದಲ್ಲಿನ ಸಮತೋಲನ ಏರುಪೇರಾಗುತ್ತದೆ. ಈ ಕಾರಣದಿಂದ ನಮಗೆ ದೈಹಿಕ ಸಮಸ್ಯೆ ಉಂಟಾಗುತ್ತದೆ.
ಧಾರ್ಮಿಕತೆಗೆ ಧಕ್ಕೆಯುಂಟಾಗುತ್ತದೆ. ಇನ್ನು ಸುಗಂಧ ದ್ರವ್ಯ ಬಳಕೆಯಿಂದ ಧಾರ್ಮಿಕತೆಗೆ ಧಕ್ಕೆ ಯುಂಟಾಗುತ್ತದೆ. ಅಂದ್ರೆ, ದೇವರ ಪೂಜೆ, ಭಕ್ತಿ ಇತ್ಯಾದಿಗಳನ್ನು ಮಾಡಲು ಮನಸ್ಸಾಗುವುದಿಲ್ಲ. ಸುಗಂಧ ದ್ರವ್ಯ ದೈವಿಕ ಸಂಪರ್ಕವನ್ನು ಅಡ್ಡಿಪಡಿಸುತ್ತದೆ.