Tuesday, October 7, 2025

Latest Posts

ಬುಧವಾರದ ದಿನ ನಾವು ಏಕೆ ಗಣೇಶನ ಪೂಜೆ ಮಾಡಬೇಕು ಗೊತ್ತಾ?

- Advertisement -

Spiritual Story:ಗಣೇಶನನ್ನು ಪ್ರಥಮ ಪೂಜಿತನೆಂದು ಹೇಳಲಾಗುತ್ತದೆ. ಯಾವುದೇ ಕೆಲಸಕ್ಕೂ ಮುನ್ನ ಗಣಪತಿ ಆಶೀರ್ವಾದ ಸಿಕ್ಕರೆ, ಆ ಕೆಲಸ ಯಾವುದೇ ವಿಘ್ನವಿಲ್ಲದೇ, ನಿರ್ವಿಘ್ನವಾಗಿ ನಡೆಯುತ್ತದೆ. ಆದರೆ ಹಲವರು ಮಂಗಳವಾರದ ದಿನ ಶ್ರೀಗಣೇಶನ ಪೂಜೆ ಮಾಡಬೇಕು ಎನ್ನುತ್ತಾರೆ. ಆದರೆ ಬುಧವಾರದಂದು ಗಣಪತಿಯನ್ನು ಪೂಜಿಸಬೇಕು.

ಗಣಪತಿಯನ್ನು ಪ್ರತಿದಿನ ಪೂಜಿಸುವುದು ಉತ್ತಮ. ಆದರೆ ಬುಧವಾರದಂದು ಮಹಾಗಣಪತಿಯನ್ನು ಆರಾಧಿಸಬೇಕು. ಬುಧವಾರದಂದು ಶ್ರೀಗಣೇಶನನ್ನು ಪೂಜಿಸಿದರೆ, ಬುಧಗ್ರಹ ದೋಷ ದೂರವಾಗುತ್ತದೆ. ವಾರದ ಪ್ರತಿದಿನವೂ ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಮತ್ತು ಬುಧವಾರ ಗಣೇಶನಿಗೆ, ಬುಧವಾರ ಶ್ರೀವಿಷ್ಣು, ಶ್ರೀಕೃಷ್ಣ, ರಾಮನಿಗೆ ಮೀಸಲಾಗಿದೆ. ಇನ್ನು ಗುರುವಾರ ಗುರುಗಳಿಗೆ, ಶುಕ್ರವಾರ ಲಕ್ಷ್ಮೀದೇವಿಗೆ, ಶನಿವಾರ ಶನಿ ಮತ್ತು ಹನುಮನಿಗೆ, ರವಿವಾರ ಸೂರ್ಯದೇವನಿಗಾಗಿ ಮೀಸಲಿಡಲಾಗಿದೆ.

ಬುಧವಾರದ ದಿನ ಮಹಾಗಣಪತಿಗೆ ಗರಿಕೆ, ಕೆಂಪು ಹೂವು ಅರ್ಪಿಸಿ, ಶ್ಲೋಕ, ಮಂತ್ರ ಪಠಿಸಿ, ವಿಶೇಷ ಪೂಜೆ ಮಾಡಿದರೆ, ಅವರು ಅಂದುಕೊಂಡ ಕಾರ್ಯ ಪೂರ್ಣಗೊಳ್ಳುತ್ತದೆ. ಅವರ ಜೀವನದಲ್ಲಿ ನೆಮ್ಮದಿ, ಯಶಸ್ಸು, ಸುಖ, ಶಾಂತಿ, ಆರ್ಥಿಕ ಅಬಿವೃದ್ಧಿ ಎಲ್ಲವೂ ಸಿಗುತ್ತದೆ. ಆದರೆ ಇದೆಲ್ಲ ಸಿಕ್ಕ ಬಳಿಕ ನೀವು ಪೂಜೆ, ಭಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಅದೇ ಭಕ್ತಿಯಲ್ಲಿ ಪೂಜೆ ಮಾಡಬೇಕು.

ಯಾರ ಜಾತಕದಲ್ಲಿ ಬುಧವಾರ ದುರ್ಬಲನಾಗಿರುತ್ತಾನೆ. ಅಂಥವರು ಬುಧವಾರದ ದಿನ ಗಣೇಶನ ಪೂಜೆ ಮಾಡಬೇಕು. ಇದರಿಂದ ಬುಧ ಗ್ರಹ ಶುಭಫಲ ನೀಡುತ್ತಾನೆ.

ಶ್ರೀರಾಮನಿಂದಲೇ ರಾವಣನ ಸಂಹಾರವಾಗಿದ್ದೇಕೆ ಗೊತ್ತೇ..?

ಶಬರಿ ಯಾರು..? ಆಕೆ ಶ್ರೀರಾಮನಿಗಾಗಿ ಯಾಕೆ ಕಾದಳು..?

ರಾಮಕೋಟಿಯನ್ನು ಯಾಕೆ ಬರಿಯಬೇಕು..? ಇದರ ನಿಯಮಗಳೇನು..?

- Advertisement -

Latest Posts

Don't Miss