Sunday, April 20, 2025

Latest Posts

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

- Advertisement -

Health Tips: ಇಂದಿನ ಕಾಲದಲ್ಲಿ ಸ್ಟೀಲ್, ಪ್ಲಾಸ್ಟಿಕ್, ಅಡಿಕೆ ಪ್ಲೇಟ್‌ಗಳಲ್ಲಿ ಊಟ ಮಾಡಲು ಶುರು ಮಾಡಿದ್ದಾರೆ. ಅಡಿಕೆ ತಟ್ಟೆಯಲ್ಲಿ ಉಂಡರೆ, ಉತ್ತಮ. ಆದರೆ ಪ್ಲಾಸ್ಟಿಕ್‌ಗಿಂತ ಅಪಾಯಕಾರಿ ಮತ್ತೊಂದಿಲ್ಲ. ಜೊತೆಗೆ ಸ್ಟೀಲ್ ತಟ್ಟೆ ಎಲ್ಲರೂ ಬಳಸುತ್ತಾರೆ. ಇದು ಊಟ ಮಾಡಲು ಅಷ್ಟು ಯೋಗ್ಯವಲ್ಲದಿದ್ದರೂ, ಅಷ್ಟೇನು ಅಪಾಯಕಾರಿಯಲ್ಲ. ಆದರೆ ಮೊದಲಿನ ಕಾಲದಲ್ಲಿ ಬಾಳೆ ಎಲೆಯಲ್ಲೇ ಊಟ ಮಾಡುತ್ತಿದ್ದರು. ಇದರಿಂದ ಅವರ ಆರೋಗ್ಯ ಉತ್ತಮವಾಗಿರುತ್ತಿತ್ತು. ಆ ಉಂಡ ಬಾಳೆ ಎಲೆಯನ್ನು ಗಿಡದ ಕೆಳಗೆ ಹಾಕುತ್ತಿದ್ದರು. ಅದು ಬೇಗನೇ ಮಣ್ಣಿನಲ್ಲಿ ಕರಗಿ ಹೋಗಿ, ಗಿಡಕ್ಕೆ ಉತ್ತಮ ಪೋಷಕಾಂಶ ನೀಡುತ್ತಿತ್ತು.

ಇಂದಿನ ಕಾಲದಲ್ಲಿ, ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಬಾಳೆಎಲೆ ಊಟ ಅಂದ್ರೆ, ಸಿಕ್ಕಾಪಟ್ಟೆ ಅಪರೂಪದ ಊಟ. ಕೆಲವರು ಬಾಳೆಎಲೆ ಊಟ ಮಾಡೋಕ್ಕೆ ಅಂತಾನೇ, ಹೆಚ್ಚು ದುಡ್ಡು ಕೊಟ್ಟು, ಹೊಟೇಲ್‌ಗಳಿಗೆ ಹೋಗುತ್ತಾರೆ. ಆದ್ರೆ ಹಿಂದಿನ ಕಾಲದಲ್ಲಿ ಬಾಳೆಎಲೆಯಲ್ಲೇ ಹೆಚ್ಚಿನವರು ಊಟ ಮಾಡುತ್ತಿದ್ದರು. ಈಗಲೂ ಹಳ್ಳಿಕಡೆಗಳಲ್ಲಿ, ಅದರಲ್ಲೂ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬಾಳೆಎಲೆಯಲ್ಲೇ ಊಟ ಮಾಡುತ್ತಾರೆ.

ಇನ್ನು ಯಾಕೆ ಬಾಳೆ ಎಲೆಯಲ್ಲಿ ಊಟ ಮಾಡಬೇಕು ಅನ್ನೋ ಪ್ರಶ್ನೆಗೆ ವೈದ್ಯರಾದ ಕಿಶೋರ್‌ ಅವರು ಈ ರೀತಿಯಾಗಿ ಉತ್ತರಿಸುತ್ತಾರೆ. ಷಡ್ರಸಗಳು ನಮ್ಮ ದೇಹ ಸೇರಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಷಡ್ರಸವೆಂದರೆ, ಸಿಹಿ, ಹುಳಿ, ಉಪ್ಪು, ಖಾರ, ಒಗರು ಮತ್ತು ಕಹಿ. ಇವಿಷ್ಟು ರಸಗಳು ನಮ್ಮ ದೇಹ ಸೇರಿದಾಗಲೇ, ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ.

ಇನ್ನು ಬಾಳೆ ಎಲೆಯನ್ನು ಚೆನ್ನಾಗಿ ತೊಳೆದು ಬಳಸಬೇಕು. ನೀವು ಡೈನಿಂಗ್ ಟೇಬಲ್ ಮೇಲೆ ಕುಳಿತು, ಬಾಳೆಎಲೆಯ ಬಳಸಿ ಊಟ ಮಾಡಿದರೆ, ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ನೆಲದ ಮೇಲೆ, ಚಟ್ಟೆಮುಟ್ಟೆ ಹಾಕಿ ಕುಳಿತು, ಬಾಳೆಎಲೆಯಲ್ಲಿ ಊಟ ಮಾಡಿದರೆ, ಅದಕ್ಕಿಂತ ಆರೋಗ್ಯಕರ ಭೋಜನ ಮತ್ತೊಂದಿಲ್ಲ.

ಇನ್ನು ಊಟದೊಂದಿಗೆ ತುಪ್ಪದ ಸೇವನೆ ತುಂಬಾ ಮುಖ್ಯವಾಗಿದೆ. ನಮಗೆ ಸಂಧಿವಾತ ಬರಬಾರದು, ಮೂಳೆನೋವು ಬರಬಾರದು ಅಂದ್ರೆ ನಾವು ತುಪ್ಪ ತಿನ್ನಬೇಕು. ಮಹಿಳೆಗೆ ಮುಟ್ಟು ನಿಲ್ಲುವಾಗ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಎಲ್ಲರೂ ಚಳಿಯಾದಾಗ, ಆಕೆಗೆ ಸೆಕೆಯಾಗುತ್ತದೆ. ಆಕೆಗೆ ಸೆಕೆಯಾದಾಗ, ಎಲ್ಲರಿಗೂ ಚಳಿಯಾಗುತ್ತದೆ. ಇಂಥ ಬದಲಾವಣೆ ಸರಿ ಮಾಡಬೇಕು ಅಂದ್ರೆ, ಪ್ರತಿದಿನ ತುಪ್ಪದ ಸೇವನೆ ಮಾಡಬೇಕು. ದೇಸಿ ಹಸುವಿನ ತಪ್ಪವಾದಲ್ಲಿ ಇನ್ನೂ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಬಿಸಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಹೃದಯಾಘಾತವಾಗುತ್ತದೆಯಾ..?

ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು..?

ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?

- Advertisement -

Latest Posts

Don't Miss