ಚೈತ್ರ ಮಾಸದಲ್ಲಿ ಉತ್ತರ ಭಾರತದ ಕಡೆ ಚೈತ್ರ ನವರಾತ್ರಿ ಆಚರಿಸುತ್ತಾರೆ. ಈ ವೇಳೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡಲಾಗತ್ತೆ. ಕೆಲವು ಕಡೆ ದುರ್ಗಾದೇವಿಯ ಮೂರ್ತಿಯನ್ನ ಸಹ ತಯಾರಿಸಿ, ಪೂಜಿಸಲಾಗತ್ತೆ. ಪೂಜೆಯ ಬಳಿಕ ನಾವು ಗಣಪತಿಯನ್ನ ಹೇಗೆ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೋ, ಅದೇ ರೀತಿ ದುರ್ಗೆಯನ್ನ ಕೂಡ ವಿಸರ್ಜನೆ ಮಾಡಲಾಗತ್ತೆ. ಆದ್ರೆ ಈ ಮೂರ್ತಿಯನ್ನ ಸುಮ್ಮನೆ ತಯಾರಿಸಲಾಗುವುದಿಲ್ಲ. ಪದ್ಧತಿಪೂರ್ವಕವಾಗಿ ತಯಾರಿಸಲಾಗತ್ತೆ. ಈ ಬಗ್ಗೆ ಒಂದು ಕಥೆ ಇದೆ. ಆ ಕಥೆಯ ಬಗ್ಗೆ ತಿಳಿಯೋಣ ಬನ್ನಿ..
ಒಂದೂರಲ್ಲಿ ಓರ್ವ ವೈಶ್ಯೆ ಇದ್ದಳು. ಆಕೆ ದುರ್ಗಾ ದೇವಿಯನ್ನ ಆರಾಧಿಸುತ್ತಿದ್ದಳು. ಆದರೆ ಆಕೆ ದೇವಿಯ ಪೂಜೆ ಮಾಡಲು ದೇವಸ್ಥಾನಕ್ಕೆ ಹೋದರೆ, ಅಲ್ಲಿ ಜನ ಆಕೆಯನ್ನ ಒಳಗೆ ಹೋಗಲು ಬಿಡುತ್ತಿರಲಿಲ್ಲ. ಹಾಗಾಗಿ ಆಕೆಗೆ ಬೇಸರವಾಗುತ್ತಿತ್ತು. ತಾನು ಮನಸ್ಸಿಲ್ಲದ ಮನಸ್ಸಿನಿಂದ ವೇಶ್ಯೆಯಾಗಿದ್ದು. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಆದರೆ ನನ್ನನ್ನೂ ಓರ್ವ ಭಕ್ತೆಯಂತೆ ಕಾಣದೇ, ಬರೀ ವೇಶ್ಯೆಯಂದಷ್ಟೇ ಪರಿಗಣಿಸಿ, ಜನ ನನ್ನನ್ನೆಷ್ಟು ತಿರಸ್ಕರಿಸುತ್ತಾರೆ ಎಂದು ಆಕೆ ಕೊರಗುತ್ತಿದ್ದಳು.
ಮತ್ತೆ ಅದನ್ನೆಲ್ಲ ಮರೆತು, ಮೊದಲಿನಂತೆ ದೇವಿಯ ಪೂಜೆ ಮಾಡಲು ಆರಂಭಿಸಿದಳು. ಆಗ ಸ್ವತಃ ದುರ್ಗೆಯೇ ಪ್ರತ್ಯಕ್ಷವಾಗಿ, ನಿನ್ನ ಭಕ್ತಿಯನ್ನ ಜನ ಮೆಚ್ಚದಿದ್ದರೇನಂತೆ, ನಾನು ಮೆಚ್ಚಿದ್ದೇನೆ. ನನ್ನ ಪೂಜೆಯಾಗುವ ಸಂದರ್ಭದಲ್ಲಿ ತಯಾರಿಸುವ ಮೂರ್ತಿಯಲ್ಲಿ ವೇಶ್ಯಾಲಯದ ಮಣ್ಣನ್ನ ಸೇರಿಸಬೇಕು. ಇಲ್ಲವಾದಲ್ಲಿ ಆ ಮೂರ್ತಿ ಅಪೂರ್ಣವಾಗುತ್ತದೆ ಎಂದು ಹೇಳುತ್ತಾಳೆ. ಹಾಗಾಗಿ ದುರ್ಗಾ ದೇವಿಯ ಮೂರ್ತಿ ಮಾಡುವಾಗ, ವೇಶ್ಯಾಲಯದ ಮಣ್ಣನ್ನು ತಂದು ಬಳಸುತ್ತಾರೆ.
ಇನ್ನೊಂದು ಕಥೆಯ ಪ್ರಕಾರ ಓರ್ವ ಋಷಿ ದೇವಿಯ ಭಕ್ತನಾಗಿದ್ದ. ಅವನೊಮ್ಮೆ ಭಕ್ತಿಯಿಂದ ದೇವಿಯ ಮೂರ್ತಿಯನ್ನ ತಯಾರಿಸಿದ. ಆದ್ರೆ ಆ ಮೂರ್ತಿ ಚೆಂದವಾಗಿ ತಯಾರಾದ ಬಳಿಕ, ಅವನಿಗೆ ಗರ್ವ ಉಂಟಾಯಿತು. ತಾನು ತಯಾರಿಸಿದ ಮೂರ್ತಿಯನ್ನ ತಾನೇ ಪದೇ ಪದೇ ಹೊಗಳಲು ಶುರುಮಾಡಿದ. ಅಂದು ರಾತ್ರಿ ಆ ಋಷಿಯ ಕನಸಿನಲ್ಲಿ ಬಂದ ದೇವಿ, ಹೀಗೆಂದಳು. ಗರ್ವದಿಂದ ತಯಾರಿಸಿದ ಮೂರ್ತಿ ಪೂಜೆ ಮಾಡಿಯೂ ಉಪಯೋಗವಿಲ್ಲ.
ಹಾಗಾಗಿ ನಾಳೆ ವೇಶ್ಯಾಲಯದಿಂದ ಸ್ವಲ್ಪ ಮಣ್ಣು ತಂದು ಅದನ್ನು ಈ ಮಣ್ಣಿಗೆ ಸೇರಿಸಿ ಮತ್ತೊಂದು ಮೂರ್ತಿ ತಯಾರಿಸು. ಆದರೆ ಆ ಮೂರ್ತಿಯಲ್ಲಿ ಗರ್ವವಿರಬಾರದು. ಭಕ್ತಿ ಇರಬೇಕು. ಅದರಲ್ಲಿ ವೇಶ್ಯಾಲಯದ ಮಣ್ಣಿದ್ದ ಕಾರಣ, ವೇಶ್ಯೆಯರ ಭಕ್ತಿಯೂ ಕೂಡ ಅದರಲ್ಲಿ ತುಂಬಿರುತ್ತದೆ. ಹಾಗಾಗಿ ಅಂಥ ಭಕ್ತಿಪೂರ್ವಕ ಮೂರ್ತಿಯನ್ನ ಪೂಜೆ ಮಾಡಿದರೆ ಮಾತ್ರ, ನಾನು ಒಲಿಯುತ್ತೇನೆ ಎನ್ನುತ್ತಾಳೆ. ಈ ರೀತಿ ದೇವಿ ಮೂರ್ತಿಯನ್ನ ತಯಾರಿಸಲು ಶುರು ಮಾಡಲಾಯಿತು.
ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?