Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ಒಂದೇ ಕಡೆ ಕುಳಿತು, ಹೆಚ್ಚು ಹೊತ್ತು ಕೆಲಸ ಮಾಡಿದರೆ, ಮುಂದೆ ಯಾವ ರೀತಿಯ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡುವುದರಿಂದ, ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಯಾಗುತ್ತದೆ. ಅಲ್ಲದೇ, ಪೈಲ್ಸ್ ಬರುವ ಸಾಧ್ಯತೆಯೂ ಇದೆ ಅಂತಾರೆ ವೈದ್ಯರು. ಇದು ಎಷ್ಟು ಡೇಂಜರ್ ಅಂದ್ರೆ, ಪೈಲ್ಸ್ ಕೊನೆಯ ಹಂತ ತಲುಪುವವರೆಗೂ, ನೋವಾಗುವುದಿಲ್ಲ. ನೋವಾದಾಗಲೇ ನಮಗೆ ಪೈಲ್ಸ್ ಇರುವುದು ತಿಳಿಯುತ್ತದೆ.
ಹಲವರು ಪೈಲ್ಸ್ ಅಂದ್ರೆ ಗಂಟು, ಟ್ಯೂಮರ್ ಎಂದುಕೊಳ್ಳುತ್ತಾರೆ. ಆದರೆ ಅದು ಗಂಟಲ್ಲ, ಬದಲಾಗಿ ದೇಹದ ಒಂದು ಅಂಗ. ಈ ಅಂಗ ಸರಿಯಾದ ಸ್ಥಿತಿಯಲ್ಲಿ ಇರುವಾಗ, ಅದು ನಮ್ಮ ಆರೋಗ್ಯವನ್ನು ಬ್ಯಾಲೆನ್ಸ್ ಮಾಡುತ್ತದೆ. ಆದರೆ ಅದೇ ಅಂಗಾಂಗ ಹೆಚ್ಚಿನ ಬೆಳವಣಿಗೆ ಹೊಂದಿದಾಗಲೇ, ಪೈಲ್ಸ್ ಆಗೋದು.
ಇನ್ನು ಯಾಕೆ ಪೈಲ್ಸ್ ಆಗುತ್ತದೆ ಅಂತಾ ಹೇಳಿದರೆ, ಕೆಲವರಿಗೆ ಪೈಲ್ಸ್ ಅನುವಂಶಿಕವಾಗಿ ಬಂದಿರುತ್ತದೆ. ಮತ್ತೆ ಕೆಲವರಿಗೆ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡಿದ್ರೂ, ಪೈಲ್ಸ್ ಬರುತ್ತದೆ. ಯಾಕಂದ್ರೆ, ಹೆಚ್ಚು ಹೊತ್ತು ಒಂದೇ ಕಡೆ ಕುಳಿತುಕೊಂಡರೆ, ಗುದದ್ವಾರದ ಬಳಿ, ಸರಿಯಾಗಿ ರಕ್ತ ಸಂಚಾರವಾಗುವ ಅವಕಾಶವಿರುವುದಿಲ್ಲ. ಹಾಗಾಗಿ ಅಲ್ಲಿ ರಕ್ತ ಶೇಖರಣೆಯಾಗುತ್ತದೆ. ಮತ್ತೆ ಅದು ಬೇರೆಡೆ ಹೋಗಲು ಸಾಧ್ಯವಾಗುವುದಿಲ್ಲ. ಆಗಲೇ ಗುದದ್ವಾರದ ಬಳಿ, ನಮ್ಮ ಆರೋಗ್ಯ ರಕ್ಷಿಸುವ ಅಂಗಾಂಗದಲ್ಲಿ ರಕ್ತ ಹೆಪ್ಪುಗಟ್ಟಿ, ಪೈಲ್ಸ್ ಆಗುತ್ತದೆ. ಪೈಲ್ಸ್ ಬಗ್ಗೆ ವೈದ್ಯರು ಇನ್ನು ಏನೇನು ಮಾಹಿತಿ ನೀಡಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..