Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಗಳಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಮಾಂಸ ಸೇವನೆ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಏಕೆಂದರೆ, ಸಸ್ಯಾಹಾರ ಸೇವನೆಯಿಂದ ದೇಹ ಫಿಟ್ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದರೆ ಸಸ್ಯಾಹಾರ ತಿಂದ್ರೆ, ದೇಹದ ಬೆಳವಣಿಗೆ ಕಡಿಮೆಯಾಗತ್ತಾ ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿರುತ್ತದೆ. ಅಂಥವರಿಗೆ ವೈದ್ಯೆಯಾದ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮಾಂಸಾಹಾರದಲ್ಲಿ ಉತ್ತಮ ಪೋಷಕಾಂಶಗಳು ಇರುತ್ತದೆ. ಆದರೆ ಅದರ ಜೊತೆಗೆ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಮಾಂಸಾಹಾರದ ಮಿತವಾದ ಸೇವನೆ ಆರೋಗ್ಯ ಕಾಪಾಡುತ್ತದೆ. ಹಾಗಾಗಿ ಮಾಂಸಾಹಾರದ ಸೇವನೆ ಅಗತ್ಯಕ್ಕಿಂತ ಹೆಚ್ಚು ಬೇಡ ಅಂತಾರೆ ವೈದ್ಯರು. ಹಾಗಂತ ಸಸ್ಯಾಹಾರಿಗಳಾದ್ರೆ ಆರೋಗ್ಯಕ್ಕೇನು ಕೊರತೆಯುಂಟಾಗುವುದಿಲ್ಲ. ಏಕೆಂದರೆ, ಸಸ್ಯಾಹಾರದಲ್ಲೂ ನಮ್ಮ ದೇಹಕ್ಕೆ ಪ್ರೋಟೀನ್, ವಿಟಾಮಿನ್ ಸೇರಿ ಆರೋಗ್ಯಕರ ಪೋಷಕಾಂಶಗಳನ್ನು ನೀಡುವ ಆಹಾರಗಳು ಸಾಕಷ್ಟಿದೆ.
ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ಸಸ್ಯಾಹಾರಿಗಳಿರುವುದು ನಮ್ಮ ಭಾರತ ದೇಶದಲ್ಲಿ. ಲೆಕ್ಕದ ಪ್ರಕಾರ 30 ಪರ್ಸೆಂಟ್ ಪರಿಪೂರ್ಣ ಸಸ್ಯಾಹಾರಿಗಳೇ ಇದ್ದಾರೆ. ಇನ್ನು ಕೆಲವರು ಮಾಂಸಾಹಾರಿಗಳು ಮಾಂಸಾಹಾರ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಸಸ್ಯಾಹಾರಿಗಳಾಗಿ ಗಟ್ಟಿಮುಟ್ಟಾಗಿರಬಹುದು ಅಂತಾರೆ ವೈದ್ಯರು. ಸಸ್ಯಾಹಾರಿಗಳು ಎಲ್ಲಾ ಫೀಲ್ಡ್‌ಗಳಲ್ಲೂ ಇದ್ದಾರೆ. ಸ್ಪೋರ್ಟ್ಸ್, ಸಿನಿಮಾ, ರಾಜಕೀಯ ಹೀಗೆ ಎಲ್ಲಾ ಫೀಲ್ಡ್‌ನಲ್ಲೂ ನಾವು ಸಾಕಷ್ಟು ಸಸ್ಯಾಹಾರಿಗಳನ್ನು ಕಾಣಬಹುದು.
ಅಷ್ಟೇ ಅಲ್ಲದೇ, ಹಲವು ವೇಯ್ಟ್ ಲಿಫ್ಟರ್ಸ್, ಬಾಡಿ ಬಿಲ್ಡರ್ಸ್ ಕೂಡ ವೆಜಿಟೇರಿಯನ್ ಆಗಿದ್ದಾರೆ. ಅವರೆಲ್ಲ ಮೊಟ್ಟೆ, ಮಾಂಸ ಸೇವಿಸದೆಯೇ, ಸಸ್ಯಾಹಾರ ಸೇವಿಸಿಯೇ ದೇಹಕ್ಕೆ ಶಕ್ತಿ ತಂದುಕೊಂಡಿದ್ದಾರೆ. ಹಾಗಾಗಿ ಸಸ್ಯಾಹಾರ ಸೇವನೆಯಿಂದಲೂ ದೇಹದ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.


