Health Tips: ನಾವು ಈಗಾಗಲೇ ನಿಮಗೆ ಸ್ತನ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದೇವೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಇದಕ್ಕೆ ಯಾವಾಗ ಚಿಕಿತ್ಸೆ ಪಡೆಯಬೇಕು..? ಹೀಗೆ ಇತ್ಯಾದಿ ವಿಷಯಗಲ ಬಗ್ಗೆ ವೈದ್ಯರೇ ನಿಮಗೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಸ್ತನ ಕ್ಯಾನ್ಸರ್ ಬಗ್ಗೆ ಡಾ. ಅರ್ಜುನ್ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ಆದಾಗ, ಅದು ಇಡೀ ದೇಹಕ್ಕೆ ಹರಡುತ್ತದೆ. ದೇಹದ ಯಾವ ಭಾಗದಲ್ಲಿ ಕ್ಯಾನ್ಸರ್ ಆದರೂ ಕೂಡ, ಅದನ್ನು ಸ್ಟೇಜ್ 1, ಸ್ಟೇಜ್ 2, ಸ್ಟೇಜ್ 3, ಫೈನಲ್ ಸ್ಟೋಜ್ ಎಂದು ವಿಂಗಡಿಸಲಾಗುತ್ತದೆ. ಸ್ಟೇಜ್ 1ನಲ್ಲಿ ಕ್ಯಾನ್ಸರ್ ದೇಹದ ಕಡಿಮೆ ಭಾಗಕ್ಕೆ ಹರಡುತ್ತದೆ. 2ರಲ್ಲಿ ಇನ್ನು ಹೆಚ್ಚು, 3ರಲ್ಲಿ ಕ್ಯಾನ್ಸರ್ ದೇಹವನ್ನು ಆವರಿಸುತ್ತದೆ. ನಾಲ್ಕನೇ ಹಂತವೇ ಸಾವು.
ಹಾಗಾಗಿ ಕ್ಯಾನ್ಸರ್ ಮೊದಲನೇಯ ಹಂತದಲ್ಲಿ ಇರುವಾಗಲೇ, ನೋವು ಕಾಣಿಸಿಕೊಂಡಾಗಲೇ, ಅದಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು. ಇನ್ನು ಸ್ತನ ಕ್ಯಾನ್ಸರ್ ಆದಾಗ, ದೇಹದೊಳಗೆ ಕ್ಯಾನ್ಸರ್ ಆದರೆ, ಮಾಂಸ, ಮೂಳೆಗೆ ಕ್ಯಾನ್ಸರ್ ಹರಡುತ್ತದೆ. ಕೆಲವೊಮ್ಮೆ ಮೆದುಳಿಗೂ ಹರಡುವ ಸಾಧ್ಯತೆ ಇರುತ್ತದೆ. ಇನ್ನು ಸ್ತನದ ಹೊರಗಡೆ ಕ್ಯಾನ್ಸರ್ ಆದರೆ, ಚರ್ಮಕ್ಕೆ ಕ್ಯಾನ್ಸರ್ ಹರಡುತ್ತದೆ.
ಇನ್ನು ಕ್ಯಾನ್ಸರ್ ಹರಡುತ್ತಿದ್ದಂತೆ, ಆ ಜಾಗದಲ್ಲಿ ರಕ್ತ ಸೋರುವುದು, ಇನ್‌ಫೆಕ್ಷನ್ ಆಗುವುದು ಆಗುತ್ತದೆ. ಆದರೆ ಈ ವೇಳೆಗಾಗಲೇ ಅದು ಫೈನಲ್ ಹಂತ ತಲುಪಿರುತ್ತದೆ. ಇಂಥ ಸಮಯದಲ್ಲಿ ಆಪರೇಷನ್ ಮಾಡಿದರೂ, ಮನುಷ್ಯ ಬದುಕುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಕ್ಯಾನ್ಸರ್ ಇರುವುದು ಗೊತ್ತಾದ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




