Sunday, September 8, 2024

Latest Posts

ತೊಂಡೆಕಾಯಿ ಸೇವನೆಯಿಂದ ತೊದಲು ನುಡಿಯುವ ಸಮಸ್ಯೆ ಬರುತ್ತದೆಯೇ..?

- Advertisement -

Health Tips: ರುಚಿಕವಾದ, ಆರೋಗ್ಯಕರವಾದ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು. ಆದರೆ ತೊಂಡೆಕಾಯಿ ಸೇವನೆ ಮಾಡಿದ್ರೆ, ನಾಲಿಗೆ ತೊದಲುತ್ತದೆ. ಸ್ಪಷ್ಟ ಉಚ್ಛಾರ ಬರುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾದ್ರೆ ಇದು ನಿಜಾನಾ ಸುಳ್ಳಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ತೊಂಡೆಕಾಯಿ ಬಳಸಿ, ಸಾರು, ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಮಾಡಲಾಗುತ್ತದೆ. ಇವೆಲ್ಲವೂ ರುಚಿಯಾಗಿರುತ್ತದೆ. ವಾರದಲ್ಲಿ ಒಮ್ಮೆಯಾದರೂ, ನೀವು ತೊಂಡೆಕಾಯಿ ಪದಾರ್ಥ ಸೇವಿಸಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ತೊಂಡೆಕಾಯಿಯನ್ನು ಹಸಿಯಾಗಿಯೂ ಸೇವಿಸಲಾಗುತ್ತದೆ. ಆದರೆ ಅದು ದೇಹದಲ್ಲಿ ಉಷ್ಣ ಜಾಸ್ತಿಯಾಗಿ, ಬಾಯಿಯಲ್ಲಿ ಗುಳ್ಳೆಯಾದಾಗ ಮಾತ್ರ ಸೇವಿಸಬೇಕು. ಹಾಗಾದಾಗ, ಅರ್ಧ ತೊಂಡೆಕಾಯಿ ಕತ್ತರಿಸಿ, ನಾಲಿಗೆಯ ಮೇಲೆ ಇರಿಸಿಕೊಳ್ಳಬೇಕು. ಇದರಿಂದ ನಾಲಿಗೆಯ ಮೇಲಿನ ಗುಳ್ಳೆ ಹೋಗುತ್ತದೆ.

ಇನ್ನು ಉಸಿರಾಡಲು ಸಮಸ್ಯೆಯಾಗಿ, ಶ್ವಾಸಕೋಶದಲ್ಲಿ ಏನಾದರೂ ತೊಂದರೆಯಾದರೆ, ಅಂಥವರು ತೊಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ, ಕಶಾಯ ಮಾಡಿ ಕುಡಿಯಬಹುದು. ತೊಂಡೆಕಾಯಿಯ ಪದಾರ್ಥ ಮಾಡುವಾಗ, ಅದರಲ್ಲಿ ಸ್ವಲ್ಪ ತುಪ್ಪ ಬಳಸಿದರೆ, ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಶುಗರ್ ಇದ್ದವರು ವಾರದಲ್ಲಿ ಒಮ್ಮೆಯಾದರೂ, ತೊಂಡೆಕಾಯಿ ಪದಾರ್ಥ ಸೇವಿಸಿದರೆ, ಶುಗರ್ ಕಂಟ್ರೋಲಿನಲ್ಲಿಡಬಹುದು. ಇನ್ನು ಕೆಲವರು ತೊಂಡೆಕಾಯಿ ಸೇವನೆ ಮಾಡಿದರೆ, ನಾಲಿಗೆ ದಪ್ಪವಾಗುತ್ತದೆ. ತೊದಲಿಕೆ ಬರುತ್ತದೆ ಎನ್ನುತ್ತಾರೆ. ಆದರೆ ಇದು ವೈಜ್ಞಾನಿಕವಾಗಿ ಎಲ್ಲಿಯೂ ಸಾಬೀತಾಗಿಲ್ಲ. ಹಾಗಾಗಿ ತೊಂಡೆಕಾಯಿಯನ್ನು ತಿನ್ನಬಹುದು. ಆದರೆ, ವಾರದಲ್ಲಿ ಒಮ್ಮೆ ಅಥವಾ ಎರಡೇ ಎರಡು ಬಾರಿ ತೊಂಡೆಕಾಯಿ ತಿಂದರೆ ಸಾಕು. ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅಮೃತವೂ ವಿಷ ಎಂಬಂತೆ, ಅಗತ್ಯಕ್ಕಿಂತ ಹೆಚ್ಚು ತೊಂಡೆಕಾಯಿ ಸೇವಿಸಿದರೆ, ಆರೋಗ್ಯ ಹಾಳಾಗಬಹುದು. ಇನ್ನು ತೊಂಡೆಕಾಯಿ ತಿಂದರೆ, ನಿಮಗೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.

ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

- Advertisement -

Latest Posts

Don't Miss