Spiritual: ಹಿಂದೂಗಳಲ್ಲಿ ಹಸುವನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತಾರೆ ಅನ್ನೋ ನಂಬಿಕೆ ಇದೆ. ಅಲ್ಲದೇ ಈಕೆ ಹಸಿದವರಿಗೆ ಹಾಲನ್ನು ನೀಡುತ್ತಾಳೆ. ಹಾಗಾಗಿ ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ನಾಯಿಗೂ ಹಿಂದೂ ಧರ್ಮದಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಪುರಾಣ ಕಥೆಗಳ ಪ್ರಕಾರ, ನಾಯಿ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದೆ. ಕಾಲಭೈರವನ ವಾಹನ ನಾಯಿ. ಯಮರಾಜನ ಅರಮನೆ ಕಾದಿದ್ದು ನಾಯಿಗಳು. ಮಹಾಭಾರತದಲ್ಲಿ ಯುಧಿಷ್ಠಿರನನ್ನು ಹಿಂಬಾಲಿಸಿದ್ದು ನಾಯಿ. ಗುರು ದತ್ತಾತ್ರಯರ ಬಳಿಯೂ ನಾವು ನಾಯಿಯ್ನ್ನು ಕಾಣಬಹುದು. ಹೀಗೆ ನಾಯಿಗಳು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದೆ.
ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾದ ದತ್ತಾತ್ರೇಯರ ಜೊತೆಗಿದ್ದ ಶ್ವಾನಗಳು ನಾಲ್ಕು ವೇದಗಳನ್ನು ಸೂಚಿಸುತ್ತದೆ. ಉತ್ತಮ ಶ್ರವಣ ಪ್ರಜ್ಞೆಯನ್ನು ಹೊಂದಿದ ಕಾರಣ, ಶ್ವಾನಗಳು ವೇದದ ಪ್ರಬಲವಾದ ಸಂಕೇತ ಎಂದು ಹೇಳಲಾಗುತ್ತದೆ.
ಇನ್ನು ಯುಧಿಷ್ಠಿರ ಪಾಂಡವರ ಜೊತೆಗೂಡಿ ಸ್ವರ್ಗಕ್ಕೆ ಹೋಗುವಾಗ, ಎಲ್ಲರೂ ದಾರಿಮಧ್ಯದಲ್ಲೇ ಪ್ರಾಣಬಿಟ್ಟರು. ಆದರೆ ಶ್ವಾನ ಮಾತ್ರ ಯುಧಿಷ್ಠಿರನೊಂದಿಗೆ ಸ್ವರ್ಗದ ತನಕ ಬಂತು. ಆದರೆ ಆ ನಾಯಿಯನ್ನು ಸ್ವರ್ಗದಲ್ಲಿ ಕರೆದುಕೊಳ್ಳುವುದಿಲ್ಲ. ನೀನೊಬ್ಬನೇ ಬರಬೇಕೆಂದಾಗ, ಯುಧಿಷ್ಠಿರ, ಇಲ್ಲಾ ಈ ಶ್ವಾನವೂ ಪುಣ್ಯ ಮಾಡಿದೆ. ಹಾಗಾಗಿ ಇದು ಭೂಲೋಕದಿಂದ ಇಲ್ಲಿಯವರೆಗೂ ಅದು ನನ್ನೊಂದಿಗೆ ಬಂದಿದೆ. ಇದನ್ನೂ ಒಳಗೆ ಕರೆದುಕೊಳ್ಳಿ ಎಂದು ಹೇಳುತ್ತಾನೆ. ಆಗ ಶ್ವಾನದ ವೇಷದಲ್ಲಿದ್ದ ಧರ್ಮರಾಯ ಯುಧಿಷ್ಠಿರನನ್ನು ಮೆಚ್ಚಿ ಸ್ವರ್ಗಕ್ಕೆ ಕರೆದೊಯ್ಯುತ್ತಾನೆ.
ಇನ್ನು ಕಾಲಭೈರವನ ವಾಹನ ಕೂಡ ಶ್ವಾನ. ಹಾಗಾಗಿ ಶ್ವಾನಕ್ಕೆ ಸುಮ್ಮಸುಮ್ಮನೆ ನೋವು ಮಾಡುವುದು. ಪ್ರತಿದಿನವೂ ಹಳಿಸಿದ ಆಹಾರವನ್ನೇ ಕೊಡುವುದೆಲ್ಲ ಮಾಡಬಾರದು. ಹೀಗೆ ಮಾಡಿದ್ದಲ್ಲಿ ನೀವು ಕಾಲಭೈರವನ ಕೋಪಕ್ಕೆ ತುತ್ತಾಗುತ್ತೀರಿ. ಶ್ವಾನಕ್ಕೆ ಕೊಂಚವಾದರೂ ಉತ್ತಮ ಆಹಾರವನ್ನು ನೀಡಿದರೆ ಉತ್ತಮ.
ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?