Sports News: ಬೆಂಗಳೂರಿನಲ್ಲಿ ನಡೆದ ಅನ್‌ಬಾಕ್ಸಿಂಗ್ ಆರ್‌ಸಿಬಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೇಟಿಗ ವಿರಾಟ್ ಕೊಹ್ಲಿಯನ್ನು ವೇದಿಕೆ ಮೇಲೆ ಕರೆದಾಗ, ಅವರು ನನ್ನನ್ನು ದಯವಿಟ್ಟು ಹಾಗೆ ಕರಿಯಬೇಡಿ. ನನಗೆ ಮುಜುಗರವಾಗತ್ತೆ ಎಂದಿದ್ದಾರೆ.
ವಿರಾಟ್ ಈ ರೀತಿ ಯಾಕೆ ಹೇಳಿದರು ಅಂದ್ರೆ, ನಿರೂಪಕರು ಕಿಂಗ್ ಕೊಹ್ಲಿ ಎಂದು ವಿರಾಟ್‌ರನ್ನು ಕರೆದಿದ್ದಕ್ಕೆ, ವಿರಾಟ್ ಈ ರೀತಿ ಹೇಳಿದ್ದಾರೆ. ನಮಗೆ ಇಂದು ರಾತ್ರಿ ಫ್ಲೈಟ್ ಇರುವ ಕಾರಣಕ್ಕೆ, ನಾವು ಬೇಗ ಹೋಗಬೇಕು. ನಮಗೆ ಹೆಚ್ಚು ಟೈಮ್ ಇಲ್ಲ ಎಂದು ಹೇಳಿದ ಬಳಿಕ, ನೀವು ದಯವಿಟ್ಟು ನನ್ನನ್ನು ಕಿಂಗ್ ಕೊಹ್ಲಿ ಎಂದು ಕರೆಯಬೇಡಿ. ನನಗೆ ಮುಜುಗರವಾಗುತ್ತದೆ. ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದಿದ್ದಾರೆ. ಅದಕ್ಕೆ ನಿರೂಪಕಿ, ಓಕೆ ವಿರಾಟ್ ಎಂದಿದ್ದಾರೆ.
ವಿರಾಟ್ ಏಕೆ ಹೀಗೆಂದರು ಅಂತಾ ಗೊತ್ತಿಲ್ಲ. ಇನ್ನು ವಿರಾಟ್ ಹೀಗೆ ಮಾತನಾಡುತ್ತ, ಇದು ಆರ್‌ಸಿಬಿ ಹೊಸ ಅಧ್ಯಾಯವೆಂದು ಕನ್ನಡದಲ್ಲೇ ಹೇಳಿದ್ದಾರೆ. ಮಹಿಳೆಯರು ಆರ್‌ಸಿಬಿಯನ್ನು ಗೆಲ್ಲಿಸಿ, ಈ ಸಲ ಕಪ್ ನಮ್ದು ಎನ್ನುವ ಭಾಗ್ಯ ಕನ್ನಡಿಗರಿಗೆ ಕೊಟ್ಟಿದ್ದು, ಪುರುಷರ ತಂಡವೂ ಇದೇ ಸಾಧನೆ ಮಾಡಲಿ ಎಂದು ಕನ್ನಡಿಗರು ಹಾರೈಸಿದ್ದಾರೆ.
God of masses @imvkohli 🥵🔥 pic.twitter.com/XtQ0NX6jLz
— ` (@chixxsays) March 19, 2024
ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..
ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..