Spiritual: ಮಂಗಳವಾರ ಗಣಪನ ದಿನ. ಯಾವುದೇ ಶುಭಕಾರ್ಯ ಮಾಡುವ ಮುನ್ನ, ಗಣಪನ ಪೂಜೆ ಮೊದಲು ಮಾಡಲಾಗುತ್ತದೆ. ಆದರೆ ಮಂಗಳವಾರ ಮಾತ್ರ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಅಲ್ಲದೇ, ಮಂಗಳವಾರ ಹಲವು ಕೆಲಸಗಳನ್ನು ಮಾಡುವಂತಿಲ್ಲ. ಹಾಗಾದ್ರೆ ಮಂಗಳವಾರ ಯಾವ ಕೆಲಸ ಮಾಡುವಂತಿಲ್ಲ ಅಂತಾ ತಿಳಿಯೋಣ ಬನ್ನಿ..
ಪ್ರತೀ ಮಂಗಳವಾರ, ಸಲೂನ್ ಶಾಪಿಗೆ ರಜೆ ಇರುತ್ತದೆ. ಯಾಕೆ ಅಂದ್ರೆ, ಮಂಗಳವಾರದ ದಿನ ಯಾರೂ ಕೂದಲು ಕತ್ತರಿಸಬಾರದು ಅನ್ನುವ ಕಾರಣಕ್ಕೆ, ಸಲೂನ್ ಶಾಪ್ ಮುಚ್ಚಲಾಗುತ್ತದೆ. ಬರೀ ಹೆಣ್ಣು ಮಕ್ಕಳಷ್ಟೇ ಅಲ್ಲ, ಪುರುಷರು ಕೂಡ ಮಂಗಳವಾರದ ದಿನ ಕೂದಲು ಕತ್ತರಿಸುವಂತಿಲ್ಲ. ಗಡ್ಡ ತೆಗೆಯುವಂತಿಲ್ಲ. ಇನ್ನು ಕೆಲವರು ಮಂಗಳವಾರ ಸಲೂನ್ ಶಾಪ್ ಬಂದ್ ಅಂತಾ ಹೇಳಿ, ಮನೆಯಲ್ಲೇ ಈ ಕೆಲಸ ಮಾಡಲು ಮುಂದಾಗುತ್ತಾರೆ. ನೀವೇನಾದ್ರೂ ಮನೆಯಲ್ಲೇ ಮಂಗಳವಾರದ ದಿನ ಕೂದಲು ಅಥವಾ ಗಡ್ಡ ಕತ್ತರಿಸುವ ತಪ್ಪು ಮಾಡಿದ್ರೆ, ನಿಮಗೆ ದರಿದ್ರ ವಕ್ಕರಿಸಿದಂತೆ.
ಇನ್ನು ಈ ಮೊದಲೇ ಹೇಳಿದಂತೆ, ಮಂಗಳವಾರದ ದಿನ ಮದುವೆ, ಮುಂಜಿ, ಗೃಹಪ್ರವೇಶ ಸೇರಿ, ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಅಲ್ಲದೇ, ಮಂಗಳವಾರದ ದಿನ ಕೆಲಸಕ್ಕೆ ಸೇರುವುದು. ಯಾವುದೇ ಕೆಲಸವನ್ನು ಶುರು ಮಾಡುವುದೆಲ್ಲ ಮಾಡುವುದಿಲ್ಲ. ಏಕೆಂದರೆ, ಆ ದಿನ ಯಾವ ಕೆಲಸ ಮಾಡುತ್ತೇವೋ, ಅದು ಸರಿಯಾಗದೇ, ಪುನಃ ಆ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಮಂಗಳವಾರದ ದಿನ ಹಲವು ಉತ್ತಮ ಕಾರ್ಯಗಳನ್ನು ಮಾಡಲಾಗುವುದಿಲ್ಲ.
ಮಂಗಳವಾರದ ದಿನ ಮಾಂಸ ಸೇವನೆ, ಮದ್ಯ ಸೇವನೆ ಮಾಡಬಾರದು. ಇದು ಗಣೇಶನ ದಿನವಾಗಿರುವುದರಿಂದ, ಈ ದಿನ ಮದ್ಯ, ಮಾಂಸ ಸೇವನೆ ಮಾಡುವುದರಿಂದ, ಗಣೇಶನ ಕೃಪೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಮಂಗಳವಾರದ ದಿನ ಮಗಳನ್ನು ತವರು ಮನೆಯಿಂದ ಕಳಿಸುವುದಿಲ್ಲ. ಏಕೆಂದರೆ, ಮಗಳು ಮಂಗಳವಾರದ ದಿನ ಮನೆಯಿಂದ ಹೊರ ಹೋದರೆ, ಮನೆಯ ಅದೃಷ್ಟ ಹೋಗುತ್ತದೆ ಅಂತಾ ಹೇಳಲಾಗುತ್ತದೆ.
ಅಲ್ಲದೇ, ಮಂಗಳವಾರದ ದಿನ ಯಾವುದೇ ವಾಹನ ಖರೀದಿಸಬಾರದು. ಕಬ್ಬಿಣದ ವಸ್ತುವನ್ನು, ಪಾತ್ರೆಗಳನ್ನು ಖರೀದಿಸಬಾರದು. ಇನ್ನು ಮದುವೆ ಸಮಾರಂಭಗಳಿಗೆ, ಮಂಗಳವಾರದ ದಿನ ಆಭರಣ, ವಸ್ತ್ರಗಳನ್ನು ಖರೀದಿಸಬಾರದು. ಮಂಗಳವಾರದ ದಿನ ಉಗುರು ಕೂಡ ಕತ್ತರಿಸುವ ಹಾಗಿಲ್ಲ. ಮಂಗಳವಾರ ಮತ್ತು ಶುಕ್ರವಾರದ ದಿನ ಯಾರಿಗೂ ಹಣ ಕೊಡುವಂತಿಲ್ಲ. ನಿಮಗೆ ಈ ದಿನ ಹಣ ಬಂದರೆ, ಲಾಭವೆಂದರ್ಥ.
ಇನ್ನು ಯಾಕೆ ಮಂಗಳವಾರದ ದಿನ ಈ ಎಲ್ಲ ಕೆಲಸಗಳನ್ನು ಮಾಡಬಾರದು ಅಂದ್ರೆ, ಗ್ರಹಗಳಿಗೂ ಮನುಷ್ಯನ ಜೀವನಕ್ಕೂ ಸಂಬಧವಿರುತ್ತದೆ. ಹಾಗಾಗಿ ಪ್ರತೀ ವಾರಕ್ಕೂ ತನ್ನದೇ ಆದ ಪದ್ಧತಿ ಇದೆ. ಅದರಂತೆ ನಾವು ನಡೆದುಕೊಂಡರೆ, ನಮ್ಮ ಜೀವನ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ.
ದೇವರಲ್ಲಿ ನಾವು ಅದು ಕೊಡು, ಇದು ಕೊಡು ಎಂದು ಬೇಡಬಾರದಂತೆ.. ಯಾಕೆ ಗೊತ್ತಾ..?