Friday, September 20, 2024

Latest Posts

ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನ ಎಂದಿಗೂ ಮಾಡಬೇಡಿ..

- Advertisement -

ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂಥದ್ದು ಅಂತಾ ಅವರಿಗಷ್ಟೇ ಗೊತ್ತಿರುತ್ತದೆ. ಆ ನೋವನ್ನ ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಯಾವ 5 ತಪ್ಪುಗಳನ್ನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು ಹಗಲು ನಿದ್ರಿಸುವುದು. ಆಯುರ್ವೇದದ ಪ್ರಕಾರ, ನೀವು ಮುಟ್ಟಾದಾಗ, ಹಗಲಲ್ಲಿ ನಿದ್ರಿಸಿದರೆ, ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ. ಕಫದ ಪ್ರಮಾಣ ಹೆಚ್ಚಾದಾಗ, ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗತ್ತೆ. ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಿಶ್ಯಕ್ತಿಯಾಗುತ್ತದೆ. ಹಾಗಾಗಿ ಮುಟ್ಟಾದಾಗ, ಹಗಲಲ್ಲಿ ನಿದ್ರಿಸಬೇಡಿ. ನಿದ್ರಿಸಲೇಬೇಕು ಎಂದಿದ್ದರೆ, ಅರ್ಧ ಗಂಟೆ ನಿದ್ರಿಸಿದರೆ ಸಾಕು.

ಎರಡನೇಯ ತಪ್ಪು ಕರಿದ, ಹೆಚ್ಚು ಖಾರವಾದ, ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸುವುದು. ನೀವು ಮುಟ್ಟಾದಾಗ, ಹಾಲು , ತುಪ್ಪ, ಮೊಸರು, ಬೆಣ್ಣೆ, ಹಣ್ಣು, ತರಕಾರಿ, ಸೊಪ್ಪು ಸೇವಿಸಬೇಕು. ಆದ್ರೆ ತುಂಬಾ ಜನ ಕರಿದ ಪದಾರ್ಥ, ಹೆಚ್ಚು ಖಾರವಾದ ಪದಾರ್ಥ, ನಾನ್‌ವೆಜ್, ಚಾಕೋಲೆಟ್ಸ್, ಕೇಕ್ ಇದೆಲ್ಲವನ್ನ ತಿನ್ನುತ್ತಾರೆ. ಈ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಕೆಲವರು ತಂಪು ಆಹಾರ ಸೇವಿಸಬೇಕು ಎಂದು ಪ್ರಿಜ್‌ನಲ್ಲಿದ್ದ ಆಹಾರ ಅಥವಾ ಐಸ್ ಹಾಕಿದ ಪಾನೀಯ ಕುಡಿಯುತ್ತಾರೆ. ಇದು ತಪ್ಪು ಫ್ರಿಜ್‌ನಲ್ಲಿರುವ ವಸ್ತು ನಾಲಿಗೆಗೆ ತಂಪಾಗಿರುತ್ತದೆ. ಮತ್ತು ಆರೋಗ್ಯಕ್ಕೆ ಉಷ್ಣವಾಗಿರುತ್ತದೆ. ಹೆಚ್ಚೆಚ್ಚು ಶುದ್ಧವಾದ ನೀರು ಕುಡಿಯಿರಿ.

ಮೂರನೇಯ ತಪ್ಪು ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಾಡುವಂಥ ಕೆಲಸವನ್ನ, ಮುಟ್ಟಿನ ದಿನಗಳಲ್ಲಿ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಕುತ್ತು ಬರುತ್ತದೆ. ಇಂದಿನ ಕಾಲದಲ್ಲಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೆಲಸದ ಬಗ್ಗೆ ಟೆನ್ಶನ್‌ ಇರುವುದು ಸಾಮಾನ್ಯ. ಆದ್ರೆ ನೀವು ಈ ಸಮಯದಲ್ಲಿ ಆ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬಾರದು. ಹೆಚ್ಚು ಮನೆಗೆಲಸವೂ ಮಾಡಬಾರದು. ನೀವೇನಾದ್ರೂ ಇಂಥ ತಪ್ಪು ಮಾಡಿದ್ರೆ, ಭವಿಷ್ಯದಲ್ಲಿ ನಿಮ್ಮ ದೇಹದಲ್ಲಿ ವಾತದೋಷ ಹೆಚ್ಚಾಗಿ, ನಿಮಗೆ ಗಂಭೀರ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.

ನಾಲ್ಕನೇಯ ತಪ್ಪು ಸಂಭೋಗ ಮಾಡುವುದು. ಸಾಮಾನ್ಯವಾಗಿ ಹಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದಿಲ್ಲ. ಆದ್ರೆ ಕೆಲ ಕಾಮುಕ ಪುರುಷರ ಒತ್ತಾಯಕ್ಕೆ, ಮಹಿಳೆಯರು ಒಳಗಾಗುತ್ತಾರೆ. ಆದ್ರೆ ಯಾವುದೇ ಕಾರಣಕ್ಕೂ ಮುಟ್ಟಿನ ಸಮಯದಲ್ಲಿ ನೀವು ಈ ಕೆಲಸಕ್ಕೆ ಮುಂದಾಗದಿದ್ದರೆ ಒಳ್ಳೆಯದು.

ಐದನೇಯ ತಪ್ಪು ತಲೆ ಸ್ನಾನ ಮಾಡೋದು. ನೀವು ಮುಟ್ಟಾಗಿದ್ದರೆ, ಆ ಮೂರು ದಿನಗಳ ಕಾಲ ತಲೆಸ್ನಾನ ಮಾಡುವಂತಿಲ್ಲ. ಬರೀ ಮೈಸ್ನಾನವಷ್ಟೇ ಮಾಡಬಹುದು. ನೀವು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ, ಅದರ ಪರಿಣಾಮ ನಿಮ್ಮ ಮೂಲಾಧಾರ ಚಕ್ರದ ಮೇಲಾಗುತ್ತದೆ. ಇದು ನೀವು ಮೂತ್ರ ವಿಸರ್ಜನೆ ಮಾಡುವ ಸ್ಥಳದ ಬಳಿ ಇರುವ ಚಕ್ರವಾಗಿದೆ. ಈ ಚಕ್ರದ ಮೇಲೆ ಪರಿಣಾಮ ಬೀರಿದರೆ, ಹೆಣ್ಣು ಮಕ್ಕಳಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ತಲೆ ಸ್ನಾನ ಮಾಡಬಾರದು ಅನ್ನೋದು ಅಷ್ಟೇ ಮುಖ್ಯ.

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

- Advertisement -

Latest Posts

Don't Miss