ನವರಾತ್ರಿ ಸಮೀಪಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ದಿನ ಹಿಂದೂ ಧರ್ಮದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಅನ್ನೋ ಪದ್ಧತಿ ಇದೆ. ಹಾಗಾಗಿ ಇಂದು ನಾವು ನವರಾತ್ರಿಯಲ್ಲಿ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ 5 ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..
ನವರಾತ್ರಿಯಲ್ಲಿ ಉಗುರು ಕತ್ತರಿಸಬಾರದು, ಕೂದಲು ಕತ್ತರಿಸಬಾರದು, ಈರುಳ್ಳಿ ಮತ್ತು ಬೆಳ್ಳುಳ್ಳಿ, ಮಾಂಸಾಹಾರಗಳ ಸೇವನೆ ಮಾಡಬಾರದು ಅನ್ನೋ ನಿಯಮವಿದೆ. ಯಾಕಂದ್ರೆ ಈ ದಿನಗಳಲ್ಲಿ ದೇವಿಯ ಆರಾಧನೆ ಮಾಡಲಾಗತ್ತೆ. ದೇವಿಯ ಆರಾಧನೆ ಮಾಡುವ ವೇಳೆ ನಾವು ಈ ಎಲ್ಲ ಕೆಲಸ ಮಾಡುವುದರಿಂದ, ದರಿದ್ರ ಆವರಿಸುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಮನೆಯನ್ನು ಶುದ್ಧಗೊಳಿಸಿ, ಪೂಜೆ ಪಾಠಗಳನ್ನು ಮಾಡಬೇಕು ಅಂತಾ ಹೇಳಲಾಗುತ್ತದೆ.
ನಮಗೆ ಪೂರ್ವ ಜನ್ಮದ ನೆನಪು ಯಾಕೆ ಇರೋದಿಲ್ಲಾ ಅಂತಾ ಗೊತ್ತಾ..?
ಇನ್ನು ನವರಾತ್ರಿಯಲ್ಲಿ ಪತಿ ಪತ್ನಿ ಸಂಭೋಗದಲ್ಲಿ ತೊಡಗಬಾರದು ಅಂತಾ ಹೇಳಲಾಗಿದೆ. ಇದಕ್ಕೆ ಒಂದು ಕಾರಣವೂ ಇದೆ. ಕೆಲವು ಹೆಣ್ಣು ಮಕ್ಕಳು ಈ ವೇಳೆ, ಪೂಜೆ ಮಾಡುತ್ತಾರೆ. ವೃತಾಚರಣೆ ಮಾಡುತ್ತಾರೆ. ಈ ವೇಳೆ ಉಪವಾಸವೂ ಮಾಡಬೇಕಾಗುತ್ತದೆ. ಹಾಗಾಗಿ ಅವರಲ್ಲಿ ಸಂಭೋಗ ಮಾಡುವಷ್ಟು ಶಕ್ತಿ ಇರುವುದಿಲ್ಲ. ಸರಿಯಾಗಿ ಆಹಾರ ಸೇವಿಸದ ಕಾರಣ, ಕೊಂಚ ಕೋಪದ ಸ್ವಭಾವವೂ ಮೈಗೂಡುತ್ತದೆ. ಹಾಗಾಗಿ ಇಂಥ ವೇಳೆ ಪತಿ- ಪತ್ನಿ ಸೇರುವುದು ಒಳ್ಳೆಯದಲ್ಲ.
ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು..?
ಇನ್ನು ದೇವಿಯ ವೃತಾಚರಣೆಯಲ್ಲಿರುವ ಕಾರಣ, ಆಕೆ ಕಾಮದಲ್ಲಿ ತೊಡಗಿದರೆ, ಅದು ಪೂಜೆಗೆ ಭಂಗ ತಂದ ಹಾಗೆ. ಹಾಗೆ ಪೂಜೆ ಮಾಡಿಯೂ ವ್ಯರ್ಥ ಎಂದು ಹೇಳಲಾಗಿದೆ. ಹಾಗಾಗಿ ನವರಾತ್ರಿಯಲ್ಲಿ ಪತಿ –ಪತ್ನಿ ಸೇರುವ ಹಾಗಿಲ್ಲವೆಂದು ನಿಯಮ ಮಾಡಲಾಗಿದೆ.