Friday, September 20, 2024

Latest Posts

ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

ಊಟ, ತಿಂಡಿ, ನೀರು, ಗಾಳಿ, ಅನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಕೂಡ ಅಷ್ಟೇ ಮುಖ್ಯ. ಮನುಷ್ಯ ದಿನಕ್ಕೆ 8 ಗಂಟೆ ನಿದ್ರಿಸಬೇಕು ಅಂತಾ ಹೇಳಲಾಗತ್ತೆ. ಆದ್ರೆ ಮನುಷ್ಯ 4 ಗಂಟೆ ನಿದ್ರಿಸಿದ್ರೂ, ನೆಮ್ಮದಿಯಾಗಿ ನಿದ್ರಿಸಿದ್ರೆ, ಅದರಿಂದಾನೂ ಆತ ಆರಾಮವಾಗೇ ಇರ್ತಾನೆ. ಹಾಗಾದ್ರೆ ಇಂದಿನ ಕಾಲದವರು ಮಲಗೋಕ್ಕೂ ಮುನ್ನ ಮಾಡುವ 3 ತಪ್ಪುಗಳು ಯಾವುದು..? ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಈಗ ರೆಸ್ಟೋರೆಂಟ್ ಸ್ಟೈಲ್ ಫ್ರೈಡ್ ರೈಸ್ ಮನೆಯಲ್ಲೇ ತಯಾರಿಸಬಹುದು…

ಮೊದಲನೇಯ ತಪ್ಪು, ಮೊಬೈಲ್, ಲ್ಯಾಪ್‌ಟಾಪ್ ಇನ್ನಿತರ ಗ್ಯಾಜೆಟ್ಸನ್ನು ಅಕ್ಕ ಪಕ್ಕ ಇಟ್ಟು ಮಲಗೋದು. ಹೀಗೆ ಮಾಡುವುದರಿಂದ ಅದರ ವಿಕಿರಣಗಳು ನಿಮ್ಮ ದೇಹ ಸೇರಿ, ನೀವು ಬೇಗ ಅನಾರೋಗ್ಯಕ್ಕೀಡಾಗುತ್ತೀರಿ. ಅದರಲ್ಲೂ ತಲೆಯ ಬಳಿ ಈ ಗ್ಯಾಜೆಟ್ಸ್ ಇದ್ರೆ, ಬ್ರೇನ್ ಟ್ಯೂಮರ್ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ನೀವು ಮಲಗುವ  ಮುನ್ನ ಗ್ಯಾಜೆಟ್ಸ್‌ನ್ನು ದೂರವಿಟ್ಟು ಮಲಗಿ.

ಕಾರ್ನ್ ಫ್ಲೋರ್ ಹಾಕದೇ, ಟೇಸ್ಟಿ ಟೊಮೆಟೋ ಸೂಪ್ ತಯಾರಿಸೋದು ಹೀಗೆ..

ಎರಡನೇಯ ತಪ್ಪು, ಮಲಗೋಕ್ಕೂ ಮುನ್ನ ವಾಟ್ಸಪ್‌ನಲ್ಲಿ ಚಾಟಿಂಗ್ ಮಾಡೋದು. ಅಥವಾ ಆಫೀಸು ಕೆಲಸಕ್ಕೆ ಸಂಬಂಧಿಸಿದಂತೆ, ಮಾತಾಡಿ ಮಲಗೋದು. ನೀವು ಹೀಗೆ ಮಾಡಿದ್ರೆ, ನಿಮ್ಮ ತಲೆಯಲ್ಲಿ ಈ ಯೋಚನೆಯೇ ತುಂಬಿರುತ್ತದೆ. ಆಗ ನೀವು ಮಲಗಿದಾಗಲೂ ಆ್ಯಕ್ಟಿವ್ ಆಗಿರ್ತೀರಿ. ಆದ ಕಾರಣ, ಮಲಗೋಕ್ಕೂ ಒಂದು ಗಂಟೆ ಮುಂಚೆ ಈ ಕೆಲಸವನ್ನ ಮುಗಿಸಿಬಿಡಿ. ಫೋನ್ ಸ್ವಿಚ್‌ ಆಪ್ಮ ಮಾಡಿ ಬಿಡಿ. ನೀವು ಮೊಬೈಲ್ ಬಳಸುವ ಬದಲು, ಹಾಡು ಕೇಳಿ, ಬುಕ್ಸ್ ಓದಿ, ಒಂದು ವಾಕ್ ಮಾಡಿ.

ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..

ಮೂರನೇಯ ತಪ್ಪು, ರಾತ್ರಿ ಹೊತ್ತು ಸಿಹಿ ತಿಂಡಿ ತಿನ್ನೋದು. ಮಧ್ಯಾಹ್ನ ಊಟ ಮಾಡಿದ ಬಳಿಕ ಸಿಹಿ ತಿಂದ್ರೆ ತಪ್ಪಿಲ್ಲ. ಆದ್ರೆ ರಾತ್ರಿ ಊಟವಾದ ಬಳಿಕ, ಅಥವಾ ಖಾಲಿ ಹೊಟ್ಟೆಯಲ್ಲೇ ಸಿಹಿ ತಿಂಡಿ ತಿಂದು ಮಲಗೋದು ಆರೋಗ್ಯಕ್ಕೆ ಉತ್ತಮವಲ್ಲ. ಇದರಿಂದ ನೀವು ಉತ್ತಮ ನಿದ್ದೆ ಮಾಡಲು ಸಾಧ್ಯವಿಲ್ಲ. ಅಲ್ಲದೇ, ಬೊಜ್ಜು, ಶುಗರ್ ಸಮಸ್ಯೆ ಇದರಿಂದಲೇ ಉದ್ಭವಿಸುವ ಸಾಧ್ಯತೆ ಇದೆ.

- Advertisement -

Latest Posts

Don't Miss