Saturday, July 5, 2025

Latest Posts

ತರಕಾರಿ ಬಳಸುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ..

- Advertisement -

ತರಕಾರಿಗಳಲ್ಲಿ ಹಲವು ರೀತಿಯ ತರಕಾರಿಗಳಿದೆ. ಅದೇ ರೀತಿ ಅವುಗಳದ್ದೇ ಆದ ಆರೋಗ್ಯ ಲಾಭಗಳಿದೆ. ಹಾಗೇನೇ, ಒಂದೇ ತರಕಾರಿಯನ್ನು ಹೆಚ್ಚು ತಿಂದ್ರೆ, ಅದರಿಂದ ಸೈಡ್ ಎಫೆಕ್ಟ್ ಕೂಡ ಆಗುತ್ತದೆ. ಹಾಗಾಗಿ ಎಲ್ಲ ತರಕಾರಿಯನ್ನು ತಿನ್ನಬೇಕು. ಆದ್ರೆ ಲಿಮಿಟಿನಲ್ಲಿ ತಿನ್ನಬೇಕು. ಇಂದು ನಾವು ತರಕಾರಿ ಬಳಸುವಾಗ ನೀವು ಮಾಡಲೇಬಾರದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ನೀವೇನಾದ್ರೂ ಈ 4 ತಪ್ಪುಗಳನ್ನು ಮಾಡಿದ್ರೆ, ನೀವು ತರಕಾರಿ ತಿಂದು ಕೂಡ ಪ್ರಯೋಜನವಾಗಲ್ಲ. ಹಾಗಾದ್ರೆ ಯಾವುದು ಆ 4 ತಪ್ಪುಗಳು ಅಂತಾ ತಿಳಿಯೋಣ ಬನ್ನಿ..

ತರಕಾರಿ ಬಳಸುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ..

ಮೊದಲನೇಯದ್ದು ತರಕಾರಿಯನ್ನು ಕಟ್ ಮಾಡಿ, ತುಂಬ ಹೊತ್ತು ಓಪೆನ್ ಆಗಿ ಇಡಬೇಡಿ. ಇದರಿಂದ ತರಕಾರಿಯಲ್ಲಿದ್ದ ಆರೋಗ್ಯಕರ ಅಂಶವೆಲ್ಲ ಹೋಗಿಬಿಡುತ್ತದೆ. ಮತ್ತೆ ನೀವದನ್ನು ತಿಂದು ಪ್ರಯೋಜನವಾಗಲ್ಲ. ಹೊಟ್ಟೆ ತುಂಬಲಷ್ಟೇ ಅದನ್ನು ತಿನ್ನಬೇಕು. ಹಾಗಾಗಿ ತರಕಾರಿ ಕತ್ತರಿಸಿದ ಬಳಿಕ ಬೇಗನೇ ಅದನ್ನು ಬಳಸಿ.

ಸೌತ್ ಕೆನರಾ ಶೈಲಿಯ ಗೋಧಿ ಹಿಟ್ಟಿನ ಹಲ್ವಾ(ಗೋಧಿ ಶೀರಾ) ರೆಸಿಪಿ..

ಎರಡನೇಯದ್ದು ತರಕಾರಿಯನ್ನು ಕಟ್ ಮಾಡಿದ ಮೇಲೆ ತೊಳೆಯಬೇಡಿ. ಬದಲಾಗಿ, ತರಕಾರಿ ಕಟ್ ಮಾಡುವ ಮುನ್ನವೇ ತೊಳೆದು ಸ್ವಚ್ಛಗೊಳಿಸಿ. ನೀವೇನಾದ್ರೂ ತರಕಾರಿ ಕಟ್‌ ಮಾಡಿದ ಬಳಿಕ, ನೀರಿನಲ್ಲಿ ಹಾಕಿದ್ರೆ, ಅದರಲ್ಲಿರುವ ಉತ್ತಮ ಅಂಶವೆಲ್ಲ ನೀರಿಗೆ ಹೋಗುತ್ತದೆ. ಮತ್ತು ತರಕಾರಿಯಲ್ಲಿ ಯಾವ ಆರೋಗ್ಯಕರ ಅಂಶವೂ ಇರೋದಿಲ್ಲ. ಹಾಗಾಗಿ ಅಂಥ ತರಕಾರಿ ತಿಂದೂ ಪ್ರಯೋಜನವಿಲ್ಲ. ಹಾಗಾಗಿ ತರಕಾರಿ ಕಟ್ ಮಾಡುವ ಮುನ್ನವೇ ತೊಳೆಯಿರಿ.

ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..

ಮೂರನೇಯದ್ದು ತರಕಾರಿ ಪಲ್ಯ ಮಾಡುವಾಗ ಅಥವಾ ಸಾಂಬಾರ್ ಮಾಡುವಾಗ, ತರಕಾರಿಯನ್ನು ಹೆಚ್ಚು ಬೇಯಿಸಬೇಡಿ. ಬದಲಾಗಿ ಕೊಂಚ ಬೇಯುವಂತೆ, ನಿಮಗೆ ತಿನ್ನಲು ಅನುಕೂಲವಾಗುವಷ್ಟು ಬೇಯಿಸಿ. ಅಲ್ಲದೇ, ತರಕಾರಿಯನ್ನು ಎಂದಿಗೂ ಹೈ ಫ್ಲೇಮ್‌ನಲ್ಲಿಟ್ಟು ಬೇಯಿಸಬಾರದು. ಬದಲಾಗಿ, ಲೋಫ್ಲೆಮ್‌ನಲ್ಲಿಟ್ಟು, ಬೇಯಿಸಬೇಕು. ಮತ್ತು ಕಡಿಮೆ ಬೇಯಿಸಿ. ಇಂಥ ಆಹಾರ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನಾಲ್ಕನೇಯದ್ದು ನೀವು ಬೀದಿ ಬದಿ ಸಿಗುವ ತರಕಾರಿಯನ್ನೇ ಖರೀದಿಸಿ. ಇದರಿಂದ ರೈತನಿಗೂ ದುಡ್ಡು ಹೋಗುತ್ತದೆ. ಅಲ್ಲದೇ, ನೀವು ಮಾಲ್‌ನಲ್ಲಿ ಅಥವಾ ಮಾರ್ಟ್‌ಗಳಲ್ಲಿ ಸಿಗುವ ತರಕಾರಿ ಖರೀದಿಸಿದ್ದಲ್ಲಿ, ಅದರಿಂದ ಪೂರ್ತಿಯಾದ ಆರೋಗ್ಯ ಲಾಭ ಪಡೆದುಕೊಳ್ಳುವುದಿಲ್ಲ. ಯಾಕಂದ್ರೆ ಅಲ್ಲಿ ಹೆಚ್ಚಾಗಿ ಹೈಬ್ರೀಡ್ ತರಕಾರಿ ಮಾರಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಕತ್ತರಿಸಿ ಪ್ಯಾಕ್ ಮಾಡಿದ ಕಾಳು, ಫ್ರೋಜನ್ ಮಾಡಿದ ಕಾಳನ್ನೆಲ್ಲ ಬಳಸಲಾಗತ್ತೆ. ಇದನ್ನು ಸೇವಿಸಿದ್ರೆ, ಆರೋಗ್ಯಕ್ಕೇನು ಲಾಭವಾಗಲ್ಲ. ಹಾಗಾಗಿ ಬೀದಿ ಬದಿ ಸಿಗುವ, ಅಥವಾ ಮಾರುಕಟ್ಟೆಯಲ್ಲಿ ಸಿಗುವ ಫ್ರೆಶ್ ತರಕಾರಿ ಬಳಸಿ, ಆರೋಗ್ಯವಾಗಿರಿ.

- Advertisement -

Latest Posts

Don't Miss