Friday, July 4, 2025

Latest Posts

ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..

- Advertisement -

Spiritual story: ಮಂಗಳವಾರವೆಂದರೆ, ಈ ದಿನ ಹನುಮ, ಗಣೇಶನನ್ನು ಪೂಜಿಸುವ ದಿನ. ಆದರೆ ಈ ದಿನವನ್ನು ಯಾರೂ ಮಂಗಳಕರವೆಂದು ಹೇಳುವುದಿಲ್ಲ. ಏಕೆಂದರೆ, ಈ ದಿನ ಮಂಗಳಕರವಾದ ಕಾರ್ಯಾರಂಭ ಮಾಡಿದರೆ, ಆ ಕೆಲಸವನ್ನು ಮತ್ತೊಮ್ಮೆ ಮಾಡುವ ಸಂಭವ ಬರುತ್ತದೆ. ಹಾಾಗಾಗಿ ಮಂಗಳವಾರದ ದಿನ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹಾಗಾದ್ರೆ ಮಂಗಳವಾರ ಇನ್ನೂ ಯಾವ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮಂಗಳವಾರದ ದಿನ ಮದ್ಯ ಮಾಂಸ ಸೇವನೆ ಮಾಡಬಾರದು. ಮಂಗಳವಾರದಂದು ಹನುಮ ಮತ್ತು ಗಣೇಶನನ್ನು ಪೂಜಿಸುವುದರಿಂದ ಮಂಗಳವಾರದ ದಿನ ಮದ್ಯ ಮಾಂಸ ಸೇವನೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಈ ದಿನ ಮದ್ಯ ಮಾಂಸ ಸೇವನೆ ಮಾಡಿದರೆ, ಗಣೇಶ ಮತ್ತು ಹನುಮನ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. ಅಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತದೆ.

ಮಂಗಳವಾರದ ದಿನ ಉಗುರು, ಕೂದಲು ಕತ್ತರಿಸಬಾರದು. ಮಂಗಳವಾರದ ದಿನ ಉಗುರು, ಕೂದಲು ಕತ್ತರಿಸಿದರೆ, ಮನೆಗೆ ದರಿದ್ರ ತಗುಲುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಮಂಗಳವಾರದ ದಿನ ಸಲೂನ್ ಶಾಪ್ ಕೂಡ ಕ್ಲೋಸ್ ಆಗಿರುತ್ತದೆ. ಜಾತಕದಲ್ಲಿ ಮಂಗಳನ ಶಕ್ತಿ ಕಡಿಮೆಯಾಗಬಾರದು ಅಂದ್ರೆ, ಮಂಗಳವಾರದ ದಿನ ಕೂದಲು ಕತ್ತರಿಸಬೇಡಿ, ಉಗುರು ಕಟ್ ಮಾಡಬೇಡಿ.

ಮಂಗಳವಾರದ ದಿನ ಯಾವುದೇ ಕೆಲಸವನ್ನು ಆರಂಭಿಸಬಾರದು. ಮಂಗಳವಾರದ ದಿನ ನಾವು ಯಾವ ಕೆಲಸವನ್ನು ಆರಂಭಿಸುತ್ತೇವೆ. ಮತ್ತೊಮ್ಮೆ ಆ ಕೆಲಸ ಮಾಡಬೇಕಾಗುತ್ತದೆ. ಅಲ್ಲದೇ, ಆ ಕೆಲಸ ಪೂರ್ಣವಾಗಲು ಹಲವು ದಿನಗಳು ಬೇಕಾಗುತ್ತದೆ. ಯಾವುದಾದರೂ ಕೆಲಸದ ಸಂದರ್ಶನಕ್ಕೆ ಹೋಗುವಾಗ, ಯಾವುದಾದರೂ ವಸ್ತು ಖರೀದಿಸುವಾಗ, ಮಂಗಳವಾರದ ದಿನ ಖರೀದಿಸಬೇಡಿ. ಇಂಥ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.

ಮಂಗಳವಾರದ ದಿನ ಹೆಣ್ಣು ಮಕ್ಕಳನ್ನು ಮನೆಯಿಂದ ಕಳಿಸಬಾರದು. ಮಂಗಳವಾರದ ದಿನ ಲಕ್ಷ್ಮೀಯ ದಿನ ಹಾಗಾಗಿ ಮಂಗಳವಾರದ ದಿನ ಹಣವನ್ನು ಪಡೆಯಬಾರದು. ಮತ್ತು ಕೊಡಬಾರದು ಅನ್ನೋ ನಿಯಮವಿದೆ. ಮಂಗಳವಾರದ ದಿನ ಸಾಲ ಪಡೆಯಬಾರದು. ಮತ್ತು ಸಾಲ ನೀಡಬಾರದು. ಹೆಣ್ಣು ಮಕ್ಕಳನ್ನು ಮನೆಯಿಂದ ದೂರ ಕಳಿಸಬಾರದು. ಹೀಗೆ ಮಾಡಿದ್ದಲ್ಲಿ, ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ.

ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

- Advertisement -

Latest Posts

Don't Miss