ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಯಾವ ವಾರ ಯಾವ ಕೆಲಸಗಳನ್ನ ಮಾಡಬಾರದು ಮತ್ತು ಮಾಡಬೇಕು. ಮತ್ತು ಅಂಥ ಕೆಲಸಗಳನ್ನು ಮಾಡಿದ್ರೆ ಮತ್ತು ಮಾಡದಿದ್ರೆ ಏನಾಗತ್ತೆ ಅಂತಾ. ಅದೇ ರೀತಿ ನಾವಿಂದು ಗುರುವಾರ ಯಾವ ಕೆಲಸಗಳನ್ನು ಮಾಡಬಾರದು. ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಗುರುವಾರವನ್ನು ಗುರುವಿನ ದಿನ, ನಾರಾಯಣನ ದಿನ ಮತ್ತು ಬೃಹಸ್ಪತಿಯ ದಿನ ಅಂತಲೂ ಕರೆಯಲಾಗುತ್ತದೆ. ಗುರುಗೃಹವೆಂದರೆ ಜೀವನ ಸಂಗಾತಿ ಮತ್ತು ಮಕ್ಕಳ ಪ್ರಭಾವವನ್ನು ಹೆಚ್ಚಿಸುವವನು. ಹಾಗಾಗಿ ನಮ್ಮ ಜಾತಕದಲ್ಲಿ ಗುರು ಉತ್ತಮ ಮನೆಯಲ್ಲಿದ್ದರೆ, ಮಕ್ಕಳು ಮತ್ತು ಜೀವನ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಇವರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಬೇಕು ಅಂದ್ರೆ, ನೀವು ಗುರುವಾರದ ದಿನ ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು.
ಗುರುವಾರದ ದಿನ ಬಟ್ಟೆ ತೊಳೆಯಬಾರದು. ದೇಹಕ್ಕೆ ಸೋಪ್ ಬಳಸಿ ಸ್ನಾನ ಮಾಡಬಾರದು. ಮನೆ ಒರೆಸಬಾರದು ಅಂತಾ ಹೇಳಲಾಗುತ್ತದೆ. ಅಲ್ಲದೇ ಕೂದಲು ಕೂಡ ಕತ್ತರಿಸುವುದು ನಿಷಿದ್ಧ ಎನ್ನಲಾಗಿದೆ. ಹೆಣ್ಣು ಮಕ್ಕಳು ಹೀಗೆ ಮಾಡುವುದರಿಂದ, ಆ ಮನೆಯ ಯಜಮಾನನ ಕೆಲಸದಲ್ಲಿ, ಭಾಗ್ಯದಲ್ಲಿ, ಆರೋಗ್ಯದಲ್ಲಿ ಕುಂಠಿತ ಉಂಟಾಗುತ್ತದೆ. ಆಗ ಮನೆಯಲ್ಲಿ ಕಲಹ ಹೆಚ್ಚುತ್ತದೆ. ನೆಮ್ಮದಿ ಹಾಳಾಗುತ್ತದೆ.
ಅಲ್ಲದೇ ಗುರುವಾರ ತಲೆ ಸ್ನಾನ ಮಾಡುವುದರಿಂದ ಗುರುಗ್ರಹ ಬಲಹೀನವಾಗುತ್ತದೆಯಂತೆ. ಈ ರೀತಿ ಮಾಡುವುದರಿಂದ ಸಂತಾನ ಸಮಸ್ಯೆ ಅಥವಾ, ಆರೋಗ್ಯ ಸಮಸ್ಯೆ ಬರಬಹುದು ಅಂತಾ ಹೇಳಲಾಗಿದೆ. ಅಲ್ಲದೇ ಈ ದಿನ ಉಗುರು ಕತ್ತರಿಸಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ದರಿದ್ರ ಶುರುವಾಗುತ್ತದೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ ಅನ್ನೋ ನಂಬಿಕೆ ಇದೆ.
ಹಾಗಾಗಿ ಗುರುವಾರದ ದಿನ ಈ ಮೇಲೆ ತಿಳಿಸಿದ ಯಾವುದೇ ಕೆಲಸಗಳನ್ನ ಮಾಡಬೇಡಿ. ನೀವೇನಾದರೂ ಇಂಥ ಕೆಲಸಗಳನ್ನು ಮಾಡದೇ, ಗುರುವಾರದಂದು ಗುರುವನ್ನು ನೆನೆದು, ಪೂಜಿಸಿದರೆ,, ನಿಮ್ಮ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿರುತ್ತಾನೆ. ನಿಮಗೆ ವಿದ್ಯೆ ದೊರೆಯುತ್ತದೆ. ಮಾನ ಸಮ್ಮಾನ ದೊರೆಯುತ್ತದೆ. ಧನ ಧಾನ್ಯ ಲಭ್ಯವಾಗುತ್ತದೆ. ನೆಮ್ಮದಿ ಸಿಗುತ್ತದೆ.