Thursday, October 16, 2025

Latest Posts

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇಂಥ ತಿಂಡಿ ತಿಂದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ..

- Advertisement -

ನಾವು ಯಾವ ಹೊತ್ತಲ್ಲಿ, ಯಾವ ಆಹಾರ ಸೇವಿಸುತ್ತೇವೆ ಅನ್ನೋದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಹಾಗಾಗಿ ಆಯಾ ಹೊತ್ತಲ್ಲಿ, ತಿನ್ನಬೇಕಾದ ಆಹಾರವನ್ನೇ ತಿನ್ನಬೇಕು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಂಥ ಆಹಾರವನ್ನು ಸೇವಿಸಬಾರದು..? ಸೇವಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಯಾವುದೇ ಕಾರಣಕ್ಕೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಕರಿ ತಿಂಡಿಯನ್ನ ತಿನ್ನಲೇಬೇಡಿ. ಹಲವರು ಡಯಟ್ ನೆಪದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೌನ್ ಬ್ರೆಡ್ ತಿನ್ನುತ್ತಾರೆ. ಬ್ರೌನ್ ಬ್ರೆಡ್ ತಿನ್ನೋದೇನು ಕೆಟ್ಟದ್ದಲ್ಲ, ಆದ್ರೆ ಅದನ್ನ ದಿನದ ಮಧ್ಯದಲ್ಲಿ ತಿನ್ನಿ. ಯಾಕಂದ್ರೆ ಅದರಲ್ಲಿ ಈಸ್ಟ್ ಸೇರಿಸುವ ಕಾರಣಕ್ಕೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮವಲ್ಲ. ಅಲ್ಲದೇ, ಕೇಕ್ ಕುಕೀಸ್, ಬಿಸ್ಕೇಟ್ಸ್ ಇತ್ಯಾದಿ ಖಾಲಿ ಹೊಟ್ಟೆಯಲ್ಲಿ ತಿನ್ನೋದು ಒಳ್ಳೆಯದಲ್ಲ.

ಇನ್ನು ಹಲವು ಮನೆಗಳಲ್ಲಿ ಬೆಳಿಗ್ಗೆ ಪುರಿ, ಬನ್ಸ್, ಕಚೋರಿ, ಸಮೋಸಾ ಹೀಗೆ ಕರಿದ ತಿಂಡಿಗಳದ್ದೇ ದರ್ಬಾರ್ ಇರುತ್ತದೆ. ಇಂಥ ತಿಂಡಿಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದಷ್ಟು ಬೊಜ್ಜು ಬೆಳಿಯುವ ಸಮಸ್ಯೆ ಹೆಚ್ಚುತ್ತದೆ. ಮತ್ತು ಬೊಜ್ಜು ಹೆಚ್ಚಿಗೆ ಬೆಳೆದಷ್ಟು, ರೋಗಗಳು ಹೆಚ್ಚಾಗುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಲೇಬೇಡಿ.

ಇನ್ನು ನಿಮಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸವಿದ್ದಲ್ಲಿ, ಮನೆಯಲ್ಲಿ ಆಗಷ್ಟೇ ತಯಾರಿಸಿದ ಜ್ಯೂಸ್ ಕುಡಿಯಿರಿ. ಆದ್ರೆ .ಯಾವುದೇ ಕಾರಣಕ್ಕೂ ಅಂಗಡಿಯಿಂದ ತಂದ ಜ್ಯೂಸ್ ಕುಡಿಯಬೇಡಿ. ಯಾಕಂದ್ರೆ ಅದು ಹಲವು ದಿನ ಸಂಸ್ಕರಿಸಿಟ್ಟ ಕಾರಣ, ಅದು ಆರೋಗ್ಯಕ್ಕೆ ಉತ್ತಮವಲ್ಲ. ಬೆಳಿಗ್ಗೆ ನೀವು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅದಾದ ಬಳಿಕ, ಸೇಬು ಅಥವಾ ಕಿತ್ತಳೆ ಅಥವಾ ದಾಳಿಂಬೆ ಹಣ್ಣನ್ನು ಸೇವಿಸಿ. ಇಲ್ಲದಿದ್ದಲ್ಲಿ ಜ್ಯೂಸ್ ಕುಡಿಯಿರಿ. ಒಂದು ಗಂಟೆ ಬಳಿಕ, ದೋಸೆ, ಇಡ್ಲಿ, ಅವಲಕ್ಕಿ, ಉಪ್ಪಿಟ್ಟಿನಂಥ ಹೆಲ್ದಿ ತಿಂಡಿ ತಿಂದು ದಿನ ಶುರು ಮಾಡಿ.

- Advertisement -

Latest Posts

Don't Miss