Monday, December 23, 2024

Latest Posts

ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು ಸೇವಿಸಬಾರದು..

- Advertisement -

ತಾಯ್ತನ ಅನ್ನೋದು ಹೆಣ್ಣು ಮಕ್ಕಳಿಗೆ ವರದಾನವಿದ್ದಂತೆ. ಹಾಗಾಗಿ ನೀವು ಗರ್ಭಿಣಿಯಾಗಿದ್ದಾಗಿನಿಂದ ಹಿಡಿದು ಬಾಣಂತನ ಮುಗಿಯುವವರೆಗೂ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಯಾವ ಆಹಾದಿಂದ ಆರೋಗ್ಯ ವೃದ್ಧಿಸುತ್ತದೆಯೋ, ಯಾವ ಆಹಾರ ನಿಮಗೆ ನಿಮ್ಮ ಮಗುವಿಗೆ ಸರಿಹೊಂದುತ್ತದೆಯೋ ಅಂಥ ಆಹಾರವನ್ನಷ್ಟೇ ತಿನ್ನಬೇಕು. ಗರ್ಭಿಣಿಯರು ಹಣ್ಣು ಹಂಪಲು ತಿನ್ನಬೇಕು ಅಂತಾ ಹೇಳಲಾಗತ್ತೆ. ಆದ್ರೆ ಗರ್ಭಿಣಿಯರು ಪ್ರೆಗ್ನೆನ್ಸಿಯಲ್ಲಿ ಕೆಲ ತರಕಾರಿ ಮತ್ತು ಹಣ್ಣನ್ನ ತಿನ್ನಬಾರದು. ಅದ್ಯಾವ ತರಕಾರಿ ಮತ್ತು ಹಣ್ಣು ಅಂತಾ ತಿಳಿಯೋಣ ಬನ್ನಿ..

ಮಹಿಳೆಯರು ತಪ್ಪದೆ ತೆಗೆದುಕೊಳ್ಳಬೇಕಾದ ಪೋಷಕಾಂಶಗಳು..!

ಗರ್ಭಿಣಿಯರು ಯಾವ ಹಣ್ಣನ್ನ ತಿನ್ನಬಾರದು ಅಂತಾ ಹೇಳಿದ್ರೆ, ಪಪ್ಪಾಯಿ, ಫೈನಾಪಲ್, ದ್ರಾಕ್ಷಿ , ಪಚ್ಚ ಬಾಳೆಹಣ್ಣು ತಿನ್ನಬಾರದು. ಇದರೊಂದಿಗೆ ಹಲಸಿನ ಹಣ್ಣು ಮತ್ತು ಮಾವಿನ ಹಣ್ಣನ್ನ ತುಂಬಾ ಕಡಿಮೆ ತಿನ್ನಬಹುದು. ಆದ್ರೆ ತಿನ್ನದಿದ್ದರೆ ಇನ್ನೂ ಉತ್ತಮ. ಈ ಹಣ್ಣುಗಳನ್ನ ತಿನ್ನುವ ಆಸೆಯಾಗಿದ್ದಲ್ಲಿ ಮಾತ್ರ ಒಂದೆರಡು ಹಣ್ಣು ತಿನ್ನಿ. ಇನ್ನು ಗೇರು ಹಣ್ಣು ಅಂದ್ರೆ ಕಾಜು, ಗೋವಾ ಹಣ್ಣನ್ನ ಕೂಡ ತಿನ್ನಬಾರದು. ಯಾಕಂದ್ರೆ ಗೇರುಹಣ್ಣು, ಪಪ್ಪಾಯಿ, ದ್ರಾಕ್ಷಿ, ಅನಾನಸ್‌ ಇವೆಲ್ಲವೂ ಉಷ್ಣತೆ ಹೆಚ್ಚಿಗೆ ಇರುವ ತರಕಾರಿಯಾಗಿದೆ. ಹಾಗಾಗಿ ಇದು ನಿಮ್ಮ ಆರೋಗ್ಯಕ್ಕೂ ಮಗುವಿನ ಜೀವಕ್ಕೂ ಹಾನಿ ಮಾಡಬಹುದು. ಹಾಗಾಗಿ ಈ ಹಣ್ಣುಗಳನ್ನ ತಿನ್ನಲೇಬೇಡಿ.

ಇನ್ನು ಯಾವ ತರಕಾರಿ ತಿನ್ನಬಾರದು ಅಂದ್ರೆ, ಆಲೂಗಡ್ಡೆ, ಬದನೆಕಾಯಿ, ಬೇರುಹಲಸು, ಹಲಸಿನ ಕಾಯಿ, ಹಾಗಲಕಾಯಿ, ಕಳಿಲೆ, ಕುಂಬಳಕಾಯಿ(ಚೀನಿಕಾಯಿ), ಬಾಳೆಕಾಯಿ ಹೆಚ್ಚು ತಿನ್ನಬಾರದು. ಯಾಕಂದ್ರೆ ಈ ಎಲ್ಲ ತರಕಾರಿಯೂ ಹೊಟ್ಟೆನೋವನ್ನು ತರುವಂಥದ್ದು. ಇದರಿಂದ ವಾತದ ಸಮಸ್ಯೆ ಉಂಟಾಗುತ್ತದೆ. ಮತ್ತು ಹೀಗಾದಾಗ ಮಗುವಿನ ಆರೋಗ್ಯಕ್ಕೆ ಮಾರಕವಾಗುತ್ತದೆ. ಹಾಗಾಗಿ ಈ ತರಕಾರಿಗಳನ್ನು ಹೆಚ್ಚು ತಿನ್ನಬೇಡಿ. ಲಿಮಿಟಿನಲ್ಲಿ ತಿನ್ನಬಹುದು. ಆದ್ರೆ ಹಾಗಲಕಾಯಿ ಮತ್ತು ಕಳಿಲೆಯನ್ನು ಸಂಪೂರ್ಣವಾಗಿ ತ್ಯಜಿಸಿ.

ಅಂಜೂರದ ಹಣ್ಣುಗಳನ್ನು ಹೀಗೆ ತಿಂದರೆ 10 ದಿನದಲ್ಲಿ ಮಧುಮೇಹ ಸಮಸ್ಯೆ ನಿವಾರಣೆ..!

ಗರ್ಭಿಣಿಯರು ದಾಳಿಂಬೆ, ಪೇರಲೆ, ಕಲ್ಲಂಗಡಿ, ಕಿತ್ತಳೆ, ಆ್ಯಪಲ್, ಕ್ಯಾರೆಟ್, ಸೌತೇಕಾಯಿ, ಈರುಳ್ಳಿ, ಬೀಟ್ರೂಟ್ ತಿನ್ನಬೇಕು. ಇವೆಲ್ಲವೂ ಮಗು ಮತ್ತು ತಾಯಿಯ ಆರೋಗ್ಯವನ್ನು ಉತ್ತಮಗೊಳಿಸುವ ತರಕಾರಿ ಮತ್ತು ಹಣ್ಣುಗಳಾಗಿದೆ. ನಿಮಗೆ ಈ ಹಣ್ಣುಗಳನ್ನ ತಿಂದರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss