ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ಹಣ್ಣು ಯಾವ ಸಮಯದಲ್ಲಿ ತಿನ್ನಬೇಕು ಅನ್ನೋದನ್ನ ಸರಿಯಾಗಿ ತಿಳಿಯಬೇಕು. ಅದನ್ನು ಬಿಟ್ಟು ನಿಮಗೆ ಸಮಯ ಸಿಕ್ಕಾಗ, ಅಥವಾ ಮನಸ್ಸಾದಾಗ ಹಣ್ಣು ತಿಂದ್ರೆ, ಅದರಿಂದೇನು ಪ್ರಯೋಜನವಿಲ್ಲ. ಹಾಗಾಗಿ ಆಯಾ ಸಮಯಕ್ಕೆ ತಕ್ಕಂತೆ ಹಣ್ಣನ್ನು ಸೇವಿಸಬೇಕು. ಆದ್ರೆ ರಾತ್ರಿ ಹೊತ್ತು ಕೆಲ ಹಣ್ಣುಗಳನ್ನು ಸೇವಿಸಲೇಬಾರದು. ಅದ್ಯಾವ ಹಣ್ಣುಗಳು ಅಂತಾ ತಿಳಿಯೋಣ ಬನ್ನಿ..
ಬಾಳೆಹಣ್ಣು. ನೀವು ಆರೋಗ್ಯವಾಗಿರಬೇಕು, ನೀವು ತಿಂದ ಆಹಾರ ಜೀರ್ಣವಾಗಬೇಕು ಅಂದ್ರೆ, ಮಧ್ಯಾಹ್ನದ ಹೊತ್ತು ಬಾಳೆ ಹಣ್ಣು ತಿನ್ನಿ. ಬೆಳಿಗ್ಗೆ ತಿಂಡಿ ತಿಂದ ಬಳಿಕವೂ ನೀವು ಬಾಳೆ ಹಣ್ಣು ಸೇವಿಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಸಂಜೆ ಬಳಿಕ, ರಾತ್ರಿ ಬಾಳೆಹಣ್ಣಿನ ಸೇವನೆ ಬೇಡ. ಇದರಿಂದ ಕಫದ ಸಮಸ್ಯೆ ಉದ್ಭವಿಸುತ್ತದೆ.
ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..
ಸೇಬುಹಣ್ಣು. ಸೇಬುಹಣ್ಣಿನ ಸೇವನೆಯನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಿ. ಅಥವಾ ಮಧ್ಯಾಹ್ನದೊಳಗೆ ಮಾಡಿ. ಆದ್ರೆ ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಸೇಬು ಸೇವನೆ ಮಾಡಬೇಡಿ. ಯಾಕಂದ್ರೆ ರಾತ್ರಿ ಸೇಬು ಜೀರ್ಣವಾಗಲು ತುಂಬ ಹೊತ್ತು ತೆಗೆದುಕೊಳ್ಳುತ್ತದೆ. ಇದರಿಂದ ಆರೋಗ್ಯ ಹದಗೆಡುತ್ತದೆ. ಕಫವಾಗುವ ಸಾಧ್ಯತೆ ಹೆಚ್ಚು.
ಕಿತ್ತಳೆ ಹಣ್ಣು, ಚಿಕ್ಕು ಹಣ್ಣು, ಪೇರಲೆ ಹಣ್ಣು, ದಾಳಿಂಬೆ, ದ್ರಾಕ್ಷಿ. ಈ ಹಣ್ಣುಗಳನ್ನು ನೀವು ಮಧ್ಯಾಹ್ನದೊಳಗೆ ತಿಂದರೆ ಉತ್ತಮ. ಸಂಜೆ ಹೊತ್ತು ಅಥವಾ ರಾತ್ರಿ ಮಲಗುವ ಸಮಯ ತಿಂದರೆ, ಶೀತವಾಗುವ ಸಾಧ್ಯತೆ ಇರುತ್ತದೆ. ಕಲ್ಲಂಗಡಿ ಹಣ್ಣನ್ನ ಕೂಡ ಮಧ್ಯಾಹ್ನದೊಳಗೆ ತಿನ್ನಿ. ಇದರಿಂದ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ, ನಿಮ್ಮ ಸೌಂದರ್ಯ ಕೂಡ ಅಭಿವೃದ್ಧಿಯಾಗುತ್ತದೆ.
ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..
ಹಲಸಿನ ಹಣ್ಣು, ಮಾವಿನ ಹಣ್ಣು, ಪಪ್ಪಾಯಿ, ಈ ಹಣ್ಣುಗಳನ್ನ ರಾತ್ರಿ ಸೇವಿಸಬಹುದು. ಇದು ಉಷ್ಣಾಂಶವುಳ್ಳ ಹಣ್ಣಾಗಿದ್ದು, ಲಿಮಿಟ್‌ನಲ್ಲಿ ತಿಂದರೆ, ಔಷಧಿಯ ರೀತಿ ಕೆಲಸ ಮಾಡುತ್ತದೆ. ಹಾಗಾಗಿ ರಾತ್ರಿ ಹೊತ್ತು ಈ ಹಣ್ಣುಗಳನ್ನ ತಿಂದರೂ, ಲಿಮಿಟ್‌್ನಲ್ಲೇ ಸೇವಿಸಿ.