ಮಂಗಳಮುಖಿಯರಿಗೆ ಈ ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..

ನಮ್ಮ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಎಷ್ಟು ಸ್ಥಾನ ಮಾನವಿದೆಯೋ, ಅಷ್ಟೇ ಸ್ಥಾನಮಾನ ಮಂಗಳಮುಖಿಯರಿಗೂ ಇದೆ. ಎಷ್ಟೋ ಮಂಗಳಮುಖಿಯರು ವಿದ್ಯಾಭ್ಯಾಸ ಕಲಿತು, ಉತ್ತಮ ಸ್ಥಾನದಲ್ಲಿದ್ದಾರೆ. ಆದ್ರೆ ಕೆಲ ಪೋಷಕರು ತಮ್ಮ ಮಕ್ಕಳು ಮಂಗಳಮುಖಿ ಎಂದು ತಿಳಿದ ಮೇಲೆ ಅವರನ್ನು ತಿರಸ್ಕರಿಸುತ್ತಾರೆ. ಅಂಥವರು ಭಿಕ್ಷಾಟನೆಗೆ ಇಳಿಯುತ್ತಾರೆ. ಹಾಗೆ ನಿಮ್ಮ ಬಳಿಯೂ ಯಾರಾದರೂ ಮಗಳಮುಖಿ ಏನಾದರೂ ಕೇಳಲು ಬಂದಾಗ, ನೀವು ಅವಳಿಗೆ ಕೆಲ ವಸ್ತುಗಳನ್ನು ನೀಡಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ದುಡ್ಡೊಂದನ್ನು ಬಿಟ್ಟು ಲಕ್ಷ್ಮೀಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ನೀವು ಮಂಗಳಮುಖಿಗೆ ದಾನ ಮಾಡುವಂತಿಲ್ಲ. ನಾವು ಈಗಾಗಲೇ ಹೇಳಿರುವಂತೆ, ಮಂಗಳಮುಖಿ ದಾನ ಕೇಳಲು ಬಂದಾಗ, ನಿಮಗಾದಷ್ಟು ದುಡ್ಡು ಕೊಡಿ. ಅವರಿಂದ 1 ರೂಪಾಯಿ ವಾಪಸ್ ಪಡೆಯಿರಿ. ಮತ್ತು ಆ ದುಡ್ಡನ್ನ ಪರ್ಸ್‌ನಲ್ಲಿಯೇ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಧನವಂತರಾಗುತ್ತೀರಿ.

ಆದರೆ ಪೊರಕೆಯನ್ನ ಎಂದಿಗೂ ದಾನ ಮಾಡಬೇಡಿ. ಪೊರಕೆ ಅಂದ್ರೆ ಲಕ್ಷ್ಮೀಗೆ ಸಮಾನವಾದ ವಸ್ತು. ಅದರಿಂದಲೇ ನಿಮ್ಮ ಮನೆ ಸ್ವಚ್ಛವಾಗಿರೋದು. ಹಾಗಾಗಿ ಪೊರಕೆಯನ್ನು ಕಾಲಿಂದ ಸರಿಸಬೇಡಿ. ಕಾಲು ತಾಕಿದರೆ, ನಮಸ್ಕರಿಸಿ. ಅಂತೆಯೇ ಪೊರಕೆಯನ್ನು ಮಂಗಳಮುಖಿಯರಿಗಲ್ಲದೇ, ಯಾರಿಗೂ ದಾನ ಮಾಡಬೇಡಿ.

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಪಾತ್ರೆಯನ್ನು ದಾನ ಮಾಡಬೇಡಿ. ಮದುವೆಗೆ, ಗೃಹಪ್ರವೇಶಕ್ಕೆ ನೀವು ಇತರರಿಗೆ ಪಾತ್ರೆಯನ್ನು ದಾನ ಮಾಡುತ್ತೀರಿ. ಕುಕ್ಕರ್, ಪಾತ್ರೆ ಸೆಟ್‌ಗಳನ್ನೆಲ್ಲ ಗಿಫ್ಟ್ ಆಗಿ ನೀಡುತ್ತೀರಿ. ಆದ್ರೆ ಮಂಗಳಮುಖಿಯರಿಗೆ ಮಾತ್ರ, ಯಾವುದೇ ಕಾರಣಕ್ಕೂ ಪಾತ್ರೆಯನ್ನ ದಾನವಾಗಿ ನೀಡಬೇಡಿ. ಯಾಕಂದ್ರೆ ಲಕ್ಷ್ಮೀಗೆ ಸಮಾನವಾದ ವಸ್ತುವಾದಂಥ ಪಾತ್ರೆಯನ್ನು ಅವರಿಗೆ ದಾನವಾಗಿ ನೀಡುವುದರಿಂದ ನಿಮ್ಮ ಮನೆಯ ಏಳಿಗೆ ನೀವೇ ಕಳೆದುಕೊಂಡ ಹಾಗಾಗುತ್ತದೆ.

ಹಳೆಯ ಬಟ್ಟೆಯನ್ನು ದಾನ ಮಾಡಬೇಡಿ. ಮಂಗಳಮುಖಿಯರಿಗೆ ದಾನವಾಗಿ ಒಂದು ಜೊತೆ ಹೊಸ ಬಟ್ಟೆ ನೀಡಿ. ಆದ್ರೆ ಹಳೆ ಬಟ್ಟೆಯನ್ನ ನೀಡಬೇಡಿ. ಇದರಿಂದಲೂ ನಿಮಗೆ ದರಿದ್ರ ಸಂಭವಿಸಬಹುದು. ಮಂಗಳ ಮುಖಿಯರು ನಿಮ್ಮ ಮನೆಗೆ ಬಂದು, ಮಗುವನ್ನೋ, ಅಥವಾ ಹೊಸ ದಂಪತಿಯನ್ನೋ ಆಶೀರ್ವಾದ ಮಾಡಿದ್ದಲ್ಲಿ, ಅವರಿಗೆ ಹೊಸ ಬಟ್ಟೆ ಕೊಡಿ.

About The Author