Thursday, April 17, 2025

Latest Posts

ಹೊಸದಾಗಿ ಮದುವೆಯಾದವರಿಗೆ ಈ ಉಡುಗೊರೆ ನೀಡಲೇಬೇಡಿ..

- Advertisement -

Spiritual Story: ನಾವು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಹೋದಾಗ, ಆ ಮನೆಯವರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ಕೆಲ ಗಿಫ್ಟ್‌ಗಳು ಆ ಜನರ ಹಣೆಬರಹವನ್ನು ಒಳ್ಳೆಯ ರೀತಿಯಿಂದ ಮತ್ತು ಕೆಟ್ಟ ರೀತಿಯಿಂದ ಬದಲಾಯಿಸಿ ಬಿಡುತ್ತದೆ. ಹಾಗಾಗಿ ಕೆಲ ಗಿಫ್ಟ್‌ಗಳನ್ನು ನಾವು ಮದುವೆಯಾದವರಿಗೆ ನೀಡುವಂತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಕೃಷ್ಣ ರಾಧೆಯ ಫೋಟೋವನ್ನು ಯಾರಿಗೂ ಉಡುಗೊರೆಯಾಗಿ ನೀಡುವಂತಿಲ್ಲ. ಅದರಲ್ಲೂ ಹೊಸದಾಗಿ ವಿವಾಹವಾದವರಿಗೆ ಕೃಷ್ಣ ರಾಧೆಯ ಫೋಟೋವನ್ನು ಉಡುಗೊರೆಯಾಗಿ ನೀಡುವಂತಿಲ್ಲ. ಏಕೆಂದರೆ, ಕೃಷ್ಣ ರಾಧೆ ವಿವಾಹವೇ ಆಗಿಲ್ಲ. ಅವರಿಬ್ಬರು ಪ್ರೀತಿಸಿದ್ದಷ್ಟೇ. ಹಾಗಾಗಿ ವಿವಾಹವಾದವರು ಸುಖಮಯ ಜೀವನ ನಡೆಸಬೇಕು ಎಂದಿದ್ದರೆ, ಅವರಿಗೆ ನೀವು ಶಿವ ಪಾರ್ವತಿಯ ಫೋಟೋ ನೀಡಬಹುದು. ವಿಷ್ಣು-ಲಕ್ಷ್ಮೀಯ ಫೋಟೋ ಅಥವಾ ಬೇರೆ ಫೋಟೋ, ಗಿಫ್ಟ್ ನೀಡಬಹುದು. ಆದರೆ ಕೃಷ್ಣ, ರಾಧೆಯ ಫೋಟೋ ಮಾತ್ರ ನೀಡಬೇಡಿ.

ಇನ್ನು ನಿಮ್ಮ ಮನೆಯ ಹೆಣ್ಣು ವಿವಾಹವಾಗಿ ಬೇರೆ ಮನೆಗೆ ಹೋಗುವಾಗ, ಅವಳಿಗೆ ಗಣಪತಿಯ ಫೋಟೋವನ್ನು ಗಿಫ್ಟ್ ಆಗಿ ನೀಡಬೇಡಿ. ಏಕೆಂದರೆ, ಗಣೇಶ ಮತ್ತು ಲಕ್ಷ್ಮೀ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ದೇವರು. ಇನ್ನು ನಿಮ್ಮ ಮನೆಮಗಳು ಲಕ್ಷ್ಮೀಯಂತೆ. ಆಕೆಯನ್ನು ನೀವು ಇನ್ನೊಬ್ಬರ ಮನೆ ಬೆಳಗಲು ಕಳಿಸಿಕೊಡುತ್ತೀರಿ. ಹಾಗಾಗಿ ಗಣಪತಿಯನ್ನೂ ನೀವು ಆಕೆಯ ಜೊತೆಗೆ ಕಳಿಸಿಕೊಡುವಂತಿಲ್ಲ. ಇದು ತವರು ಮನೆಗೆ ಒಳ್ಳೆಯದಲ್ಲ. ಹಾಗಾಗಿ ಮಗಳು ಮದುವೆಯಾಗಿ ಪತಿಯ ಮನೆಗೆ ಹೋಗುವಾಗ, ಆಕೆಗೆ ಗಣಪತಿಯ ವಿಗೃಹ ನೀಡಬೇಡಿ.

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ

- Advertisement -

Latest Posts

Don't Miss