Saturday, June 21, 2025

Latest Posts

ಪಿಸಿಓಎಸ್ ಬಗ್ಗೆ ನಿರ್ಲಕ್ಷ್ಯ ಬೇಡ.. ಮಕ್ಕಳಾಗದಿರುವ ಸಾಧ್ಯತೆ ಇರಬಹುದು..

- Advertisement -

Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಆದರೆ ಈ ಸಮಸ್ಯೆಯನ್ನು ಹಾಗೇ ನಿರ್ಲಕ್ಷಿಸಬಾರದು. ಏಕೆಂದರೆ, ಇಂಥ ಕೇಸ್‌ನಲ್ಲಿ ಹಲವರಿಗೆ ಮಕ್ಕಳಾಗದಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ಡಾ. ಚಂದ್ರಿಕಾ ಆನಂದ್ ಈ ಬಗ್ಗೆ ಮಾತನಾಡಿದ್ದು, ಪಿಸಿಓಡಿ ಒಮ್ಮೆ ಬಂದರೆ, ಅದು ಜೀವನದಲ್ಲಿ ಪದೇ ಪದೇ ಬರುತ್ತದೆ. ಹಾಗಾಗಿ ಪಿಸಿಓಡಿ ಬಾರದಂತೆ ನಾವು ಆರೋಗ್ಯದ ಕಾಳಜಿ ವಹಿಸಬೇಕು. ಕೆಲವು ರೋಗಗಳು ಮಾತ್ರೆಗಳು, ಸಣ್ಣ ಚಿಕಿತ್ಸೆಗಳ ಮೂಲಕ ಹೋಗುತ್ತದೆ. ಆದರೆ ಪಿಸಿಓಡಿ ಸಮಸ್ಯೆ ಬಂದಾಗ, ಅದಕ್ಕೆ ಪರಿಹಾರ ಸಿಕ್ಕರೂ, ಅದು ಪದೇ ಪದೇ ಕಾಣಿಸಿಕೊಳ್ಳುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಪಿಸಿಓಡಿ ಅಂದ್ರೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದರೂ, ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ. ಪಿಸಿಓಡಿಗೆ ಚಿಕಿತ್ಸೆ ಪಡೆದರಾಯಿತು ಎಂದು ನಿರ್ಲಕ್ಷಿಸಿದರೆ, ಅದರಿಂದ ಸಂತಾನ ಸಮಸ್ಯೆ ಬರಬಹುದು. ಹಾಗಾಗಿ ಪಿಸಿಓಡಿ ಇರುವುದು ಗೊತ್ತಾದ ತಕ್ಷಣ, ಅದ್ಕಕೆ ಬೇಕಾದ ಚಿಕಿತ್ಸೆ, ಪಥ್ಯ ಮಾಡಲು ಶುರು ಮಾಡಬೇಕು ಅಂತಾರೆ ವೈದ್ಯರು.

ಇನ್ನು ಕಾಲೇಜು ಮಕ್ಕಳಿಂದ ಹಿಡಿದು, ಮಕ್ಕಳಾದ ತಾಯಿಯಾದವರಿಗೂ ಪಿಸಿಓಡಿ ಸಮಸ್ಯೆ ಬರುತ್ತದೆ. ಈ ಸಮಸ್ಯೆ ಬಂದರೆ, ಮುಖದ ಮೇಲೆ ಕೂದಲು ಬೆಳೆಯುತ್ತದೆ. ಮುಖದ ಮೇಲೆ ಗುಳ್ಳೆ, ಮೊಡವೆಗಳಾಗುತ್ತದೆ. ತಿಂಗಳಿಗೆ ಸರಿಯಾಗಿ ಋತುಚಕ್ರವಾಗುವುದಿಲ್ಲ. ದೇಹ ಉಬ್ಬಿಕೊಳ್ಳುತ್ತದೆ. ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಪಿಸಿಓಡಿ ಸಮಸ್ಯೆ ಕಂಡುಬಂದಲ್ಲಿ, ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮರೆಯಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss