Health tips: ಲಿವರ್ ಕ್ಯಾನ್ಸರ್ ಬಗ್ಗೆ ವೈದ್ಯರಾದ ಶಿವಕುಮಾರ್ ಉಪ್ಪಳ ಸಾಕಷ್ಟು ಮಾಹಿತಿಯನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಕೂಡ, ಲಿವರ್ ಕ್ಯಾನ್ಸರ್ ಇದ್ರೂ ಗೊತ್ತಾಗೋದಿಲ್ಲ. ಆದರೆ ಅದರ ಲಕ್ಷಣಗಳು ಹೇಗಿರತ್ತೆ ಅನ್ನೋ ಬಗ್ಗೆ, ವೈದ್ಯರು ಮಾಹಿತಿ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
ಪ್ರಪಂಚದಲ್ಲಿ ಗರ್ಭಕೋಷದ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಲಿವರ್ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿಲ್ಲದಿದ್ದರೂ, ಮೂರನೇ ಸ್ಥಾನದಲ್ಲಿ ಈ ರೋಗಿಗಳ ಸಂಖ್ಯೆ ಇದೆ. ವೈದ್ಯರು ಹೇಳುವ ಪ್ರಕಾರ, ಲಿವರ್ ಕ್ಯಾನ್ಸರ್ ಇರುವುದು ಗೊತ್ತೇ ಆಗುವುದಿಲ್ಲ. ಹಾಗಾಗಿ ಅದರ ಲಕ್ಷಣಗಳನ್ನು ತೆಗೆದುಕೊಂಡು, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.
ಲಿವರ್ ಕ್ಯಾನ್ಸರ್ ಇರುವುದು ತಕ್ಷಣವೇ ಗೊತ್ತಾಗಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಂಡಲ್ಲಿ, ಶೇಕಡಾ 90ರಷ್ಟು ಕ್ಯಾನ್ಸರ್ ಗುಣಪಡಿಸಬಹುದು. ಆದರೆ ಅದು ಎರಡನೇಯ, ಮೂರನೇಯ ಅಥವೈ ಫೈನಲ್ ಸ್ಟೇಜ್‌ಗೆ ಹೋದಬಳಿಕ ವೈದ್ಯರ ಬಳಿ ಹೋದರೆ, ಬದುಕಿಸುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಹಾಗಾಗಿ ವರ್ಷಕ್ಕೊಮ್ಮೆಯಾದರೂ, ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು.
ಲಿವರ್ ಕ್ಯಾನ್ಸರ್ ಬಂದ್ರೆ ಯಾಕೆ ಗೊತ್ತಾಗುವುದಿಲ್ಲವೆಂದರೆ, ಅದರ ಲಕ್ಷಣ ಬಹುಬೇಗ ಗೊತ್ತಾಗುವುದಿಲ್ಲ. ಚರ್ಮದ ಕ್ಯಾನ್ಸರ್ ಆದಾಗ, ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಸ್ತನ ಕ್ಯಾನ್ಸರ್ ಆದಾಗ, ಗಡ್ಡೆ ಕಾಣಿಸಿಕೊಳ್ಳುತ್ತದೆ. ಆದರೆ ಲಿವರ್‌ನಲ್ಲಿ ಕ್ಯಾನ್ಸರ್ ಗಡ್ಡೆಯಾದಾಗ ಗೊತ್ತಾಗುವುದಿಲ್ಲ. ಹಾಗಾಗಿ ಲಿವರ್ ಕ್ಯಾನ್ಸರ್ ಬಂದಾಗ, ಗೊತ್ತಾಗುವುದಿಲ್ಲ.
ಇನ್ನು ಲಿವರ್ ಕ್ಯಾನ್ಸರ್ ಬರಲು ಮುಖ್ಯವಾದ ಕಾರಣ ಅಂದ್ರೆ, ಮದ್ಯಪಾನ, ಧೂಮಪಾನ ಸೇವನೆ. ಹಾಗಾಗಿ ಹೆಚ್ಚು ಮದ್ಯಪಾನ ಮಾಡಿದರೆ, ಲಿವರ್ ಹಾಳಾಗುತ್ತದೆ ಎಂದು ಹೇಳುತ್ತಾರೆ. ವೈದ್ಯರು ಲಿವರ್ ಕ್ಯಾನ್ಸರ್ ಬಗ್ಗೆ ಇನ್ನು ಏನೇನು ಟಿಪ್ಸ್ ಕೊಟ್ಟಿದ್ದಾರೆ ಎಂಬ ಬಗ್ಗೆ ತಿಳಿಯಲು, ಈ ವೀಡಿಯೋ ನೋಡಿ..