ಚಾಣಕ್ಯರ ಚಾಣಕ್ಯ ನೀತಿಯ ಬಗ್ಗೆ ಹಲವಾರು ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ. ಮದುವೆಯಾಗುವ ಬಗ್ಗೆ, ಪತ್ನಿಯಾಗುವವಳಿಗೆ ಪತಿ ಕೇಳಬೇಕಾದ ಪ್ರಶ್ನೆಯೇನು..? ಯಶಸ್ವಿಯಾಗಬೇಕಾದಲ್ಲಿ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಪತಿಯಾದವನು ಪತ್ನಿಯನ್ನು ಯಾವ ಮೂರು ಸಮಯದಲ್ಲಿ ಒಬ್ಬಂಟಿಯಾಗಿ ಬಿಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ..
ಮೊದಲನೇಯ ಸಮಯ, ಆಕೆ ಅನಾರೋಗ್ಯಕ್ಕೀಡಾದಾಗ. ಪತಿ ಅನಾರೋಗ್ಯಕ್ಕೀಡಾದಾಗ, ಪತ್ನಿಯಾದವಳು ಅವನ ಸೇವೆ ಮಾಡುತ್ತಾಳೆ. ಹಗಲು ರಾತ್ರಿ ನಿದ್ದೆಗೆಟ್ಟು, ಸರಿಯಾಗಿ ಊಟ ಮಾಡದೇ, ಪತಿಯ ಆರೈಕೆಯಲ್ಲಿ ತೊಡಗುತ್ತಾಳೆ. ಅದೇ ರೀತಿ ಪತಿ ಕೂಡ ಪತ್ನಿ ಅನಾರೋಗ್ಯಕ್ಕೀಡಾದಾಗ, ಆಕೆಯ ಶುಶ್ರೂಷೆ ಮಾಡಬೇಕು. ಕೆಲವರು ನನಗೆ ಆಫೀಸಿಗೆ ಹೋಗಲೇಬೇಕು ಅಂತಾ ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುತ್ತಾರೆ. ಹೋಗುವುದಿದ್ದರೂ, ಊಟ ತಿಂಡಿಗೆ ವ್ಯವಸ್ಥೆ ಮಾಡಿ ಹೋಗಿ. ಕರೆ ಮಾಡಿ ಆಕೆಯ ಆರೋಗ್ಯ ವಿಚಾರಿಸುತ್ತಿರಿ.
ಎರಡನೇಯ ಸಮಯ ಇತರರು ಆಕೆಯ ಮೇಲೆ ದೂರು ಹೇಳುವಾಗ, ಆರೋಪ ಮಾಡುವಾಗ, ಆಕೆಯೊಂದಿಗೆ ಜಗಳ ಮಾಡುವಾಗ. ಅದು ಬೇರೆಯವರಾಗಬೇಕಿಲ್ಲ. ಮನೆಯವರೇ ಆಗಬಹುದು. ಆಕೆಯೊಂದಿಗೆ ನಿಮ್ಮ ಮನೆ ಜನ ಜಗಳವಾಡುತ್ತಿದ್ದರೆ, ನೀವು ನಿಮ್ಮ ಪತ್ನಿ ಪರ ಮಾತನಾಡಬೇಕು. ಯಾಕಂದ್ರೆ ಆಕೆ ನಿಮ್ಮನ್ನು ನಂಬಿ ಅಪ್ಪ ಅಮ್ಮನನ್ನು ಬಿಟ್ಟು ಬಂದಿರುತ್ತಾಳೆ. ಮತ್ತು ಆ ಮನೆಯಲ್ಲಿ ಪತಿ ಬಿಟ್ಟು, ಬೇರೆ ಯಾರು ಆಕೆಯ ಪರ ವಹಿಸಿದರೂ ಆಕೆಗೆ ಅದು ಸಮಾಧಾನ ನೀಡುವುದಿಲ್ಲ. ಇನ್ನು ತಪ್ಪು ನಿಮ್ಮ ಮಡದಿಯದ್ದೇ ಆಗಿದ್ದರೆ, ಬೈದು, ಅವಮಾನಿಸಿ ಬುದ್ಧಿ ಹೇಳುವುದರ ಬದಲು, ಆಕೆಗೆ ಸಮಾಧಾನವಾಗಿ ಬುದ್ಧಿ ಹೇಳಿ.
ಮೂರನೇಯದಾಗಿ ಯಾವ ಪುರುಷನೊಂದಿಗೂ ನಿಮ್ಮ ಪತ್ನಿಯನ್ನ ಒಂಟಿಯಾಗಿ ಬಿಡಬೇಡಿ. ಅವನು ನಿಮ್ಮ ಒಳ್ಳೆಯ ಸ್ನೇಹಿತನೇ ಆಗಿರಬಹುದು. ಅಥವಾ ನಂಬಿಕಸ್ಥ ಸಂಬಂಧಿಯೇ ಆಗಿರಬಹುದು. ಯಾರೊಂದಿಗೂ ನಿಮ್ಮ ಪತ್ನಿಯನ್ನ ಒಂಟಿಯಾಗಿ ಬಿಡಬೇಡಿ. ಯಾಕಂದ್ರೆ ಚಾಣಕ್ಯರ ಪ್ರಕಾರ, ಅಂಥ ಸಮಯದಲ್ಲಿ ಕಾಮೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ನಿಮ್ಮ ಪತ್ನಿ ಮತ್ತು ಆ ಪುರುಷ ದೂರವೇ ಇದ್ದರು, ಮುಂದೊಂದು ದಿನ ಅನುಮಾನ ಹುಟ್ಟಿ, ನಿಮ್ಮ ಮತ್ತು ಪತ್ನಿಯ ಮಧ್ಯೆ ಬಿರುಕು ಮೂಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಈ ಮೂರು ತಪ್ಪನ್ನು ಎಂದಿಗೂ ಮಾಡಬೇಡಿ.