Friday, September 20, 2024

Latest Posts

ಊಟದ ವೇಳೆ ಇಂಥ ತಪ್ಪು ಮಾಡಬೇಡಿ.. ಹೀಗೆ ಮಾಡದಿದ್ರೆ ಆರೋಗ್ಯ ಸೂಪರ್ ಆಗಿರತ್ತೆ..

- Advertisement -

ಊಟ ಮಾಡುವುದರಲ್ಲಾಗಲಿ, ಯಾವುದೇ ವಿಷಯದಲ್ಲಾಗಲಿ ಭಾರತದಲ್ಲಿರುವ ಪುರಾತನ ಪದ್ಧತಿಯೇ ಅದ್ಭುತವಾಗಿದೆ. ನಿದ್ರೆ ಮಾಡುವ ಭಂಗಿಯ ಬಗ್ಗೆ, ಊಟ ಮಾಡುವ ರೀತಿಯ ಬಗ್ಗೆ, ಅಡುಗೆ ಮಾಡುವ ವಿಚಾರ ಸೇರಿ, ಪೂಜೆ ಪುನಸ್ಕಾರ, ಹೀಗೆ ಹಲವು ವಿಷಯಗಳಲ್ಲಿ ನಮ್ಮ ಪೂರ್ವಜರು ಮಾಡಿರುವ ಪದ್ಧತಿ ಎಷ್ಟು ಲಾಭಕಾರಿಯಾಗಿದೆ ಗೊತ್ತಾ..? ಆದ್ರೆ ಇಂದಿನ ಮಾಡರ್ನ್ ಯುಗದಲ್ಲಿ ಶೋಕಿಗಾಗಿ ನಮ್ಮಲ್ಲಿ ಹಲವರು, ಆ ಪದ್ಧತಿಯನ್ನ ಗಾಳಿಗೆ ತೂರಿದ್ದಾರೆ.

ಉದಾಹರಣೆಗೆ ಎಷ್ಟೋ ಜನ ಈಗಲೂ ಚಟ್ಟೆ ಮುಟ್ಟೆ ಹಾಕಿಕೊಂಡು ಮಣೆಯ ಮೇಲೆ ಕುಳಿತು ಊಟ ಮಾಡುತ್ತಾರೆ. ಆದ್ರೆ ಇನ್ನು ಕೆಲವರಿಗೆ ಡೈನಿಂಗ್ ಟೇಬಲ್ ಬಳಸಿ ಊಟ ಮಾಡದಿದ್ರೆ, ಅನ್ನದ ಅಗಳು ಹೊಟ್ಟೆಗೆ ಇಳಿಯೋದಿಲ್ಲಾ. ಆದ್ರೆ ಇದು ತಪ್ಪು. ಹಾಗಾಗಿ ಊಟ ಮಾಡುವ ವೇಳೆ ನಾವು ಮಾಡಬಾರದ ಕೆಲ ತಪ್ಪುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಮೊದಲನೇಯ ತಪ್ಪು ಡೈನಿಂಗ್‌ ಟೇಬಲ್ ಬಳಸಿ ಊಟ ಮಾಡುವುದು. ಸೋಫಾ, ಬೆಡ್, ಕುರ್ಚಿಯ ಮೇಲೆ ಕುಳಿತು ಊಟ ಮಾಡುವುದನ್ನ ಕೆಲವರು ರೂಢಿಸಿಕೊಂಡಿರುತ್ತಾರೆ. ಹೀಗೆ ಊಟ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ.

ಎರಡನೇಯ ತಪ್ಪು ಬೇಗ ಬೇಗನೇ ಊಟವನ್ನು ಮಾಡುವುದು. ಇಗೀನ ಕಾಲದಲ್ಲಿ ಅರ್ಜೆಂಟ್‌ನಲ್ಲಿ ಇರುವವರೇ ಹೆಚ್ಚು. ಆಫೀಸಿಗೆ ಹೋಗುವ ತವಕ, ಶಾಲೆ, ಕಾಲೇಜಿಗೆ ಹೋಗಲು ಅರ್ಜೆಂಟ್, ಬೇಗ ಬೇಗ ಮನೆ ಕೆಲಸ ಮುಗಿಸುವ ಅರ್ಜೆಂಟ್. ಹೀಗೆ ಎಲ್ಲದಕ್ಕೂ ಅರ್ಜೆಂಟ್. ಹಾಗಾಗಿ ಊಟ ಕೂಡ ಅರ್ಜೆಂಟ್ ಆಗಿಯೇ ಮಾಡುತ್ತಾರೆ. ಹೀಗೆ ಅರ್ಜೆಂಟ್ ಆಗಿ ಮಾಡಿದ ಊಟ, ಆರೋಗ್ಯವನ್ನ ಕೂಡ ಅಷ್ಟೇ ಫಾಸ್ಟ್ ಆಗಿ ಹಾಳು ಮಾಡುತ್ತೆ. ಊಟ ಮಾಡುವಾಗ, ಆರಾಮವಾಗಿ ಕುಳಿತು, ಏಕಾಗೃತೆಯಿಂದ ಮೆಲ್ಲಗೆ ಊಟ ಮಾಡಬೇಕು. ಒಂದೊಂದೇ ತುತ್ತನ್ನ ಬಾಯಿಗಿರಿಸಿ. ಅದನ್ನ ಚೆನ್ನಾಗಿ ಅಗಿದು ತಿನ್ನಬೇಕು. ಆಗಲೇ ತಿಂದ ಆಹಾರ ಸರಿಯಾಗಿ ಜೀರ್ಣವಾಗೋದು.

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ಮೂರನೇಯ ತಪ್ಪು ಟಿವಿ, ಮೊಬೈಲ್ ನೋಡುತ್ತ ಊಟ ಮಾಡೋದು. ಇಂದಿನ ಕಾಲದಲ್ಲಿ ಒಂದೋ ಟಿವಿ ಓಡುತ್ತಿರಬೇಕು. ಇಲ್ಲಾ ಮೊಬೈಲ್‌ ಆನ್‌ ಆಗಿರಬೇಕು. ಆಗಲೇ ನಮಗೆ ತಿಂದ ಅನ್ನ ಹೊಟ್ಟೆಗಿಳಿಯೋದು. ಆದ್ರೆ ಹೀಗೆ ಮಾಡೋದು ತಪ್ಪು. ಹೀಗೆ ಮಾಡಿದ್ರೆ ನಮ್ಮ ಏಕಾಗೃತೆ ಊಟದ ಮೇಲೆ ಇರುವ ಬದಲು, ಟಿವಿ, ಮೊಬೈಲ್ ಮೇಲೆ ಇರತ್ತೆ. ಹಾಗಾಗಿ ತಿಂದ ಅನ್ನ ಸರಿಯಾಗಿ ಜೀರ್ಣವಾಗಲ್ಲ. ಇದರಿಂದಲೇ ಗ್ಯಾಸ್ಟಿಕ್, ಜೀರ್ಣಕ್ರಿಯೆ ಸಮಸ್ಯೆ ಎಲ್ಲ ಬರೋದು.

ನಾಲ್ಕನೇಯ ತಪ್ಪು, ಊಟದ ಮಧ್ಯೆ ನೀರು ಕುಡಿಯಬಾರದು. ಈ ಬಗ್ಗೆ ನಾವು ನಿಮಗೆ ಈಗಾಗಲೇ ವಿವರಣೆ ನೀಡಿದ್ದೇವೆ. ಊಟದ ಮಧ್ಯೆ ನೀರು ಕುಡಿಯಬಾರದು. ಕೆಮ್ಮು ಬಂದಾಗಲಷ್ಟೇ ಸ್ವಲ್ಪ ನೀರು ಕುಡಿಯಬಹುದು. ಐದನೇಯ ತಪ್ಪು ಮಾತನಾಡುವುದು. ಊಟ ಮಾಡುವಾಗ ಮಾತನಾಡಬಾರದು. ಮಾತನಾಡದೇ ಊಟ ಮಾಡಿದರೆ, ತಿಂದ ಅನ್ನ ಸರಿಯಾಗಿ ಜೀರ್ಣವಾಗುತ್ತದೆ.

- Advertisement -

Latest Posts

Don't Miss