ನಮಗೆ ನಿಸರ್ಗದಿಂದ ಸಿಗುವ ಎಲ್ಲ ಆಹಾರಗಳು ಕೂಡ ಲಾಭದಾಯಕವೇ ಆಗಿದೆ. ಸಿಹಿ, ಹುಳಿ, ಕಹಿ, ಚಪ್ಪೆ ಹೀಗೆ ಎಲ್ಲ ಬಗೆಯ ರುಚಿಯುಳ್ಳ ನೈಸರ್ಗಿಕ ಆಹಾರವನ್ನ ನಾವು ಸವಿಯುತ್ತೇವೆ. ಅವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳೇ ಆಗಿರಬಹುದು. ಆದ್ರೆ ಕೆಲವೊಂದು ಆಹಾರವನ್ನ ಒಟ್ಟುಗೂಡಿಸಿ ತಿನ್ನಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇರಿಸಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಮತ್ತು ಹಾಲನ್ನ ಸೇರಿಸಿ ತಿನ್ನಬಾರದು. ಯಾರಾದ್ರೂ ಇವೆರಡನ್ನ ಸೇರಿಸಿ ತಿಂತಾರಾ ಅಂತಾ ನೀವು ಕೇಳಬಹುದು. ಇದನ್ನ ಸೇರಿಸಿ ತಿನ್ನುವುದಿಲ್ಲ ನಿಜ. ಆದ್ರೆ ನೀವು ಚಪಾತಿ, ರೊಟ್ಟಿ ತಿನ್ನುವಾಗ ಸಲಾಡ್ ತಿನ್ನುತ್ತಿರುತ್ತೀರಿ. ಇದರೊಂದಿಗೆ, ಹಾಲು ಅಥವಾ ಹಾಲಿನ ಪೇಯ ಕುಡಿಯುತ್ತೀರಿ. ಇದು ತಪ್ಪು. ಈ ಮೂಲಕ ನೀವು ಆನಿಯನ್ ಸಲಾಡ್, ರೋಟಿ, ಪಲ್ಯ, ಹಾಲನ್ನ ಸೇವಿಸುತ್ತೀರಿ. ಹಾಗಾಗಿ ಇಂಥ ಸಮಯ ನೀವು ಜ್ಯೂಸ್ ಕುಡಿಯಿರಿ, ಅಥವಾ ನೀರು ಕುಡಿಯಿರಿ.
ಹಾಲು ಮತ್ತು ಹಲಸಿನಹಣ್ಣು ಸೇರಿಸಿ ತಿನ್ನಬಾರದು. ಇದರಿಂದ ಹೊಟ್ಟೆಯ ಸಮಸ್ಯೆ ಬರುತ್ತದೆ. ಬರೀ ಹಲಸಿನ ಹಣ್ಣಷ್ಟೇ ಅಲ್ಲ, ಕಿತ್ತಳೆ, ಮೊಸಂಬಿ, ದ್ರಾಕ್ಷಿ, ಹೀಗೆ ಸಿಟ್ರಿಕ್ ಆ್ಯಸಿಡ್ ಇರುವ ಹಣ್ಣುಗಳನ್ನ ಹಾಲಿನೊಂದಿಗೆ ಸೇರಿಸಿ, ತಿನ್ನಬಾರದು. ತುಪ್ಪ ಮತ್ತು ಜೇನುತುಪ್ಪ ಸೇರಿಸಿ ತಿಂದ್ರೆ, ಅದು ನಮ್ಮ ದೇಹದಲ್ಲಿ ವಿಷದಂತೆ ಕೆಲಸ ಮಾಡತ್ತೆ. ಹಾಗಾಗಿ ಇವೆರಡನ್ನೂ ಸೇರಿಸಿ ತಿನ್ನಬಾರದು. ಉದ್ದಿನ ಬೇಳೆಯ ಜೊತೆ ಮೊಸರು ಸೇರಿಸಿ, ಎಂದಿಗೂ ತಿನ್ನಬಾರದು.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?