Spiritual : ಚಾಣಕ್ಯರು ಎಂಥವರನ್ನು ಮದುವೆಯಾಗಬೇಕು..? ದುಡ್ಡು ಹೇಗೆ ಉಳಿಸಬೇಕು..? ಜೀವನ ಹೇಗೆ ಮಾಡಬೇಕು..? ಎಂಥವರ ಸಂಗ ಮಾಡಬೇಕು ಮತ್ತು ಎಂಥವರ ಸಂಗ ಮಾಡಬಾರದು ಸೇರಿ, ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು, ಕೆಲ ವಿಷಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಹಂಚಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತಾ ಯಾರಲ್ಲಿಯೂ ಹೇಳಬೇಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ. ಅದನ್ನು ಯಾರ ಬಳಿಯೂ ಹೇಳಬೇಡಿ. ಚೆನ್ನಾಗಿದ್ದರೆ, ಕೆಲವರು ಸಾಲ ಕೇಳುತ್ತಾರೆ. ಚೆನ್ನಾಗಿ ಇಲ್ಲದಿದ್ದರೆ, ನೀವು ಪಾಪರ್ ಎಂದು ತಮಾಷೆ ಮಾಡುತ್ತಾರೆ.
ನಿಮ್ಮ ದಾಂಪತ್ಯ ಜೀವನ ಹೇಗಿದೆ ಅಂತಾ ಯಾರಲ್ಲಿಯೂ ಹೇಳಬೇಡಿ. ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರಬಹುದು. ಅಥವಾ ಪದೇ ಪದೇ ಜಗಳವಾಗಬಹುದು. ಅಥವಾ ದೈಹಿಕ ಸಂಬಂಧದಲ್ಲಿ ಏನಾದರೂ ಸಮಸ್ಯೆ ಇರಬಹುದು. ಅದೇನೇ ಇದ್ದರು, ಇನ್ನೊಬ್ಬರ ಬಳಿ ನಿಮ್ಮ ದಾಂಪತ್ಯ ಜೀವನದ ಗುಟ್ಟನ್ನು ಎಂದಿಗೂ ಬಿಟ್ಟುಕೊಡಬೇಡಿ ಅಂತಾರೆ ಚಾಣಕ್ಯರು. ಹೀಗೆ ಮಾಡುವುದರಿಂದ, ನಿಮ್ಮ ದಾಂಪತ್ಯ ಜೀವನದ ಬಗ್ಗೆ ಜನ ತಮಾಷೆ ಮಾಡುತ್ತಾರೆ.
ನಿಮಗೆ ಅವಮಾನವಾಗಿದ್ದನ್ನು ಯಾರಲ್ಲಿಯೂ ಹೇಳಬೇಡಿ.. ನಿಮಗೆ ಯಾರಾದರೂ ಅವಮಾನ ಮಾಡಿರುತ್ತಾರೆ. ಅದನ್ನು ನೀವು ಯಾರಲ್ಲಿಯೂ ಹೇಳಬಾರದು. ಕುಟುಂಬ ಸದಸ್ಯರು, ಬಾಳ ಸಂಗಾತಿ, ಮಕ್ಕಳು, ಗೆಳೆಯರು, ಹೀಗೆ ಯಾರ ಬಳಿಯೂ ನಿಮಗೆ ಅವಮಾನವಾದ ಸಂಗತಿಯನ್ನು ನೀವು ಹೇಳಬಾರದು ಅಂತಾರೆ ಚಾಣಕ್ಯರು. ಅದನ್ನೇ ಇಟ್ಟುಕೊಂಡು, ಜನ ನಿಮ್ಮನ್ನು ತಮಾಷೆ ಮಾಡಬಹುದು.
ನೀವು ಮಾಡಿದ ದಾನದ ಬಗ್ಗೆ ಯಾರಲ್ಲಿಯೂ ಹೇಳಬೇಡಿ.. ದಾನ ಮಾಡುವುದು ಪುಣ್ಯದ ಕೆಲಸ. ಉತ್ತಮ ಕೆಲಸ. ಅದನ್ನು ನಾವು ಯಾರಲ್ಲಿಯೂ ಹೇಳಬಾರದು ಅಂತಾರೆ ಚಾಣಕ್ಯರು. ಗೌಪ್ಯವಾಗಿ ಇರುವ ದಾನದಿಂದ ನಮಗೆ ಪುಣ್ಯ ಲಭಿಸುತ್ತದೆ. ದಾನ ಮಾಡಿ ಎಲ್ಲರಲ್ಲೂ ಹೇಳಿಕೊಂಡರೆ, ಅದರಿಂದ ಯಾವ ಪುಣ್ಯವೂ ಲಭಿಸುವುದಿಲ್ಲ ಅಂತಾರೆ ಚಾಣಕ್ಯರು.
ನಿಮ್ಮ ದೌರ್ಬಲ್ಯದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ಚಾಣಕ್ಯರ ಪ್ರಕಾರ, ನಾವು ನಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬಾರದು. ಅದನ್ನು ಯಾರೆದುರು ತೋರಿಸಿಕೊಳ್ಳಬಾರದು. ಅದು ಹಲವರ ಕಿವಿಗೆ ಬಿದ್ದು, ಜನ ನಿಮ್ಮ ದೌರ್ಬಲ್ಯದ ಲಾಭ ಪಡೆಯುತ್ತಾರೆ. ಅಥವಾ ಅದನ್ನು ಹೇಳಿ, ನಿಮಗೆ ಅವಮಾನ ಮಾಡುತ್ತಾರೆ. ಹಾಗಾಗಿ ನಮ್ಮ ದೌರ್ಬಲ್ಯದ ಬಗ್ಗೆ ನಾವು ಯಾರಲ್ಲಿಯೂ ಹೇಳಬಾರದು.
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

