Sunday, September 8, 2024

Latest Posts

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 1

- Advertisement -

ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಿಕ್ರೇಟ್ ಇದ್ದೇ ಇರುತ್ತದೆ. ಅದನ್ನು ನಾವು ನಮ್ಮ ಪ್ರೀತಿ ಪಾತ್ರರಲ್ಲಿ ಹೇಳಿಕೊಳ್ಳುತ್ತೇವೆ. ಆದ್ರೆ ಕೆಲವು ವಿಷಯಗಳನ್ನು ನಾವು ಎಲ್ಲರಲ್ಲಿಯೂ ಹೇಳಿಕೊಳ್ಳಬಾರದು. ಯಾಕಂದ್ರೆ ನಮ್ಮ ಜೀವನ ಅನ್ನೋದು ಎಲ್ಲರೂ ಬಂದು ಓದಿಕೊಂಡು ಹೋಗುವ ಬಿಚ್ಚಿಟ್ಟ ಪುಸ್ತಕವಾಗಿರಬಾರದು. ಬದಲಾಗಿ ಒಂದು ಪರ್ಸನಲ್ ಡೈರಿಯಾಗಿರಬೇಕು. ನಾವು ನಮ್ಮ ಜೀವನದ ಗುಟ್ಟನ್ನ ನಮ್ಮಲ್ಲೆ ಇಟ್ಟುಕೊಂಡಿರಬೇಕು. ಹಾಗಾದ್ರೆ ನಾವು ಯಾವ ಯಾವ ವಿಷಯವನ್ನು ಹೇಳಿಕೊಳ್ಳಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಿಮ್ಮ ಮುಂದಿನ ನಡೆ ಮತ್ತು ಪ್ಲಾನಿಂಗ್‌: ಕೆಲವರು ತಾವು ಜೀವನದಲ್ಲಿ ತೆಗೆದುಕೊಳ್ಳುವ ಕೆಲ ನಿರ್ಧಾರಗಳ ಬಗ್ಗೆ, ಇನ್ನೊಬ್ಬರಲ್ಲಿ ಹೇಳಿಕೊಳ್ಳುತ್ತಾರೆ. ಯಾಕಂದ್ರೆ ಅವರು ತಮಗೇನಾದರೂ ಸಪೋರ್ಟ್ ಮಾಡಬಹುದು ಅನ್ನೋ ಆಸೆಯಿಂದ. ಆದ್ರೆ ನೀವು ನಿಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಬಾರದು. ಯಾಕಂದ್ರೆ ನೀವು ನಿಮ್ಮ ಪ್ಲಾನ್‌ ಬಗ್ಗೆ ಹೇಳಿಕೊಂಡಾಗ, ಎದುರಿಗಿರುವವರು ನಿಮಗೆ ಭೇಷ್ ಅಂದ್ರು ಕೂಡ, ಮುಂದೊಂದು ದಿನ ಈ ಕೆಲಸದಲ್ಲಿ ನೀವು ವಿಫಲರಾದರೆ, ನಿಮ್ಮನ್ನು ನೋಡಿ ಅವರು ಆಡಿಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಸಣ್ಣ- ಪುಟ್ಟ ನಿರ್ಧಾರಗಳ ಬಗ್ಗೆ ಯಾರಲ್ಲಿಯೂ ಹೇಳಬೇಡಿ.

ಕೌಟುಂಬಿಕ ಸಮಸ್ಯೆ: ನಿಮ್ಮ ಮನೆಯಲ್ಲಿ ಕಲಹವಾಗುತ್ತಿದ್ದು, ನಿಮ್ಮ ಮನೆಯವರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರದಿದ್ದಾಗ, ಆ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಿಮ್ಮ ಮನೆಯ ಸಮಸ್ಯೆ ನಾಲ್ಕು ಗೋಡೆ ಮಧ್ಯೆಯೇ ಇರಲಿ. ನಿಮ್ಮ ಬಳಿಯೇ ಇರಲಿ. ಅದನ್ನು ಬಿಟ್ಟು, ಉಳಿದ ಸಂಬಂಧಿಕರ ಬಳಿ, ಸ್ನೇಹಿತರ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿಕೊಂಡರೆ, ಅವರು ಅದನ್ನ ಗಾಸಿಪ್ ರೀತಿ ಬಳಸಿ, ನಿಮ್ಮನ್ನು ತಮಾಷೆ ಮಾಡಿ, ನಗಬಹುದು. ನಿಮ್ಮ ಮನೆಯ ವಿಷಯ ಇನ್ನೂ ನಾಲ್ಕು ಜನರ ಮುಂದೆ ಕೆಟ್ಟ ಉದಾಹರಣೆಯೊಂದಿಗೆ ವಿವರಿಸಬಹುದು. ಹಾಗಾಗಿ ಯಾರ ಬಳಿಯೂ ನಿಮ್ಮ ಮನೆಯ ಜಗಳದ ವಿಷಯವನ್ನು ಬಾಯ್ಬಿಡಬೇಡಿ.

ನಿಮ್ಮ ಬಳಿ ಇರುವ ದುಡ್ಡು ಮತ್ತು ನಿಮ್ಮ ಆರ್ಥಿಕ ಸಮಸ್ಯೆ: ನೀವು ಆರ್ಥಿಕವಾಗಿ ಸಫಲವಾಗಿರಿ ಅಥವಾ ವಿಫಲವಾಗಿರಿ. ಆಧ್ರೆ ಈ ವಿಷಯ ನಿಮ್ಮಲ್ಲೇ ಇರುವಂತೆ ನೋಡಿಕೊಳ್ಳಿ. ನಿಮ್ಮ ಬಳಿ ದುಡ್ಡಿದೆಯೆಂದು ಕಂಡ ಕಂಡಲ್ಲಿ ಶ್ರೀಮಂತಿಕೆ ತೋರಿಸಬೇಡಿ. ಅಥವಾ ನಿಮ್ಮ ಬಳಿ ದುಡ್ಡಿಲ್ಲವೆಂದು ಕಂಡ ಕಂಡವರಲ್ಲಿ ಹೇಳಿಕೊಳ್ಳಬೇಡಿ. ಇಷ್ಟೇ ಅಲ್ಲದೇ, ಇನ್ನೊಬ್ಬರ ಆರ್ಥಿಕ ಪರಿಸ್ಥಿತಿಯೊಂದಿಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹೋಲಿಸಿಕೊಳ್ಳಬೇಡಿ. ಆಗ ಏನಾಗತ್ತೆ ಅಂದ್ರೆ, ನಿಮಗೆ ಇಗೋ ಬರಬಹುದು ಅಥವಾ ಕೀಳರಿಮೆಯೂ ಬರಬಹುದು. ಹಾಗಾಗಿ ಆರ್ಥಿಕ ಪರಿಸ್ಥಿತಿಯನ್ನು ಯಾರೊಂದಿಗೂ ಹೇಳಿಕೊಳ್ಳಬೇಡಿ ಮತ್ತು ಹೋಲಿಕೆ ಮಾಡಿಕೊಳ್ಳಬೇಡಿ.

ಪರ್ಸನಲ್ ಲೈಫ್: ನಿಮ್ಮ ಪರ್ಸನಲ್ ಲೈಫ್‌ನಲ್ಲಿ ಏನೇನು ನಡೆಯುತ್ತಿದೆ ಅನ್ನೋದು ನಿಮಗಷ್ಟೇ ಗೊತ್ತಿರುತ್ತದೆ. ಮತ್ತು ನಿಮಗಷ್ಟೇ ಗೊತ್ತಿರಲಿ. ಅದನ್ನು ಬಿಟ್ಟು ಊರಮಂದಿಗೆ ಗೊತ್ತಾಗೋ ರೀತಿ ಇರಬೇಡಿ. ಈಗಂತೂ ವಾಟ್ಸಪ್ ಸ್ಟೇಟಸ್‌ ಬಂದು, ಯಾರ್ಯಾರ ಲೈಫಲ್ಲಿ ಏನೇನು ನಡೆಯುತ್ತಿದೆ ಅನ್ನೋದು, ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ಪರ್ಸನಲ್ ಲೈಫಲ್ಲಿ ನಡೆಯುವ ಎಲ್ಲ ವಿಷಯವನ್ನೂ ಸ್ಟೇಟಸ್‌ಗೆ ಹಾಕಿ, ನಿಮ್ಮ ಬಗ್ಗೆ ಬೇರೆಯವರು ಮಾತನಾಡುವ ಹಾಗೆ ಮಾಡಬೇಡಿ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss